🔥 TRENDING Radhika Apte Criticizes Bollywood Acto... उन्नाव: प्रेम प्रसंग के चलते युवक ने ख... IB Warns Hawara's Punjab Prison Transf... Former AAP MLAs Claim Constitution Und... Sirsa Accuses Punjab AAP of Concealing... હિંમતનગરમાં ગહું, ચોખા અને મકાઈના ભાવમ...
03 Nov 2026•
ગુજરાતી मराठी ਪੰਜਾਬੀ বাংলা

ಐತಿಹಾಸಿಕ ಮಸ್ಕಿಯಲ್ಲಿ ₹2.50 ಕೋಟಿ ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಟೀ ಪಾರ್ಕ್ ನಿರ್ಮಾಣ - ಶಾಸಕ ಆರ್. ಬಸನಗೌಡ ತುರ್ವಿಹಾಳರಿಂದ ಭೂಮಿಪೂಜೆ

✍️ Reporter: Ningappa 🗓 03 Nov 2026, 12:58 PM 👁 14
Share: 💬 WhatsApp 📘 Facebook 𝕏 Post

ಮಸ್ಕಿ ಪಟ್ಟಣದ ಸೌಂದರ್ಯ ಹೆಚ್ಚಿಸಲು ಅರಣ್ಯ ಇಲಾಖೆ ವತಿಯಿಂದ ₹2.50 ಕೋಟಿ ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಟೀ ಪಾರ್ಕ್ ನಿರ್ಮಾಣ - ಮೊದಲ ಹಂತದಲ್ಲಿ ₹50 ಲಕ್ಷ ಅನುದಾನ ಬಿಡುಗಡೆ - ಶಾಸಕ ಆರ್. ಬಸನಗೌಡ ತುರ್ವಿಹಾಳ

ರಾಯಚೂರು/ಮಸ್ಕಿ, ನ. 3:ಐತಿಹಾಸಿಕ ಮಸ್ಕಿ ಪಟ್ಟಣದ ಸೌಂದರ್ಯ ಹೆಚ್ಚಿಸುವುದರ ಜತೆಗೆ ಸಾರ್ವಜನಿಕರಿಗೆ ಉತ್ತಮ ಪರಿಸರ ಮತ್ತು ಮನರಂಜನೆಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆ ವತಿಯಿಂದ ₹2.50 ಕೋಟಿ ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಟೀ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಟೀ ಪಾರ್ಕ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಯೋಜನೆಯ ಮೊದಲ ಹಂತವಾಗಿ ₹50 ಲಕ್ಷ ಅನುದಾನವನ್ನು ರಾಯಚೂರಿನ ನಿರ್ಮಿತಿ ಕೇಂದ್ರದ ಖಾತೆಗೆ ಬಿಡುಗಡೆ ಮಾಡಲಾಗಿದೆ. ಅರಣ್ಯ ಇಲಾಖೆಯ ಮೂಲಕ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

"ಮಲ್ಲಿಕಾರ್ಜುನ ದೇವಸ್ಥಾನವು ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಸಾರ್ವಜನಿಕರ ವಾಯುವಿಹಾರ, ಮಕ್ಕಳ ಮನರಂಜನೆ ಮತ್ತು ಕುಟುಂಬಗಳ ವಿಶ್ರಾಂತಿಗೆ ಅಗತ್ಯ ಸೌಲಭ್ಯ, ಶೌಚಾಲಯಗಳನ್ನು ಪಾರ್ಕ್ ಹೊಂದಲಿದೆ" ಎಂದು ಹೇಳಿದರು.

ಈ ಪಾರ್ಕ್ ನಿಂದ ಮಸ್ಕಿ ಪಟ್ಟಣದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುವ ನಿರೀಕ್ಷೆ ಇದೆ
📲Get App