🔥 TRENDING Bisleri pulls West Bengal water batch... INDIA Alliance Holds Press Conference... Bisleri requests FSSAI review of West... Bihar, UP and Haryana Record Over 12%... सिकंदराराऊ मंडी के पास अज्ञात बोलेरो न... जिला अधिकारी ने बलिया में छात्र अनशन स...
28 Nov 2026•
ગુજરાતી मराठी ਪੰਜਾਬੀ বাংলা
Politics

ಸಂವಿಧಾನ ನಮ್ಮಲ್ಲರಿಗೆ ಪ್ರಜೆಗಳಾಗಿ ಮಾಡಿದೆ. ಡಾ. ಸಂಜುಕುಮಾರ ಅತಿವಾಳೆ.

✍️ Reporter: Basavaraj pujari 🗓 28 Nov 2026, 02:37 PM 👁 28
Share: 💬 WhatsApp 📘 Facebook 𝕏 Post

ಬೀದರ: ಬೀದರ ಯಾತ್ರಿ ಸಭಾಂಗಣದಲ್ಲಿ ನವೆಂಬರ 26 ರಂದು ಚಿಗುರು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ ತಡಪಳ್ಳಿ ವತಿಯಿಂದ ನಡೆದ ವಿಚಾರ ಸಂಕಿರಣ ಮತ್ತು ಕರ್ನಾಟಕ ಜಾನಪದ ಆಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ದೇವದಾಸ ಚಿಮ

ಸಂವಿಧಾನ ನಮ್ಮಲ್ಲರಿಗೆ ಪ್ರಜೆಗಳಾಗಿ ಮಾಡಿದೆ. ಡಾ. ಸಂಜುಕುಮಾರ ಅತಿವಾಳೆ.


ಬೀದರ: ಬೀದರ ಯಾತ್ರಿ ಸಭಾಂಗಣದಲ್ಲಿ ನವೆಂಬರ 26 ರಂದು ಚಿಗುರು ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ ತಡಪಳ್ಳಿ ವತಿಯಿಂದ ನಡೆದ ವಿಚಾರ ಸಂಕಿರಣ ಮತ್ತು ಕರ್ನಾಟಕ ಜಾನಪದ ಆಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ದೇವದಾಸ ಚಿಮಕೊಡ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ, ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸಂಜುಕುಮಾರ ಅತಿವಾಳೆ ಮಾತನಾಡಿ, ತಾರತಮ್ಯವನ್ನು ನಿಲ್ಲಿಸಿ ಎಲ್ಲಾ ಪ್ರಜೆಗಳಿಗೆ ಪ್ರಜಾಪ್ರಭುತ್ವದ ದಿಕ್ಷೆ ನೀಡಿ, ಎಲ್ಲರೂ ಸಮಾನರು ಎಲ್ಲರಿಗೂ ಸಮಾನ ಪ್ರಗತಿ, ಎಲ್ಲರಿಗೂ ಸಮಾನ ರಕ್ಷಣೆ ನೀಡಿದೆ ರಾಜಕೀಯ ಮಾಸ್ಟರ ಕೀಲಿ ಕೈ ಜನರಿಗೆ ಕೊಟ್ಟಿದ್ದಾರೆ. ಮತದಾನದ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರ ನೀಡಿದ್ದಾರೆ. ಜನಸಾಮಾನ್ಯರು ಜನಪ್ರತಿನಿಧಿಯಾಗುತ್ತಿದ್ದಾರೆ. ಸಂವಿಧಾನ ಪ್ರಜಾಪ್ರಭುತ್ವ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ವಕೀಲರಾದ ಬಾಬುರಾವ ಹೊನ್ನ, ಎಸ್ ರಾಜಕುಮಾರ, ಆರ್ ಪಿ ಐ ಪಕ್ಷದ ರಾಜ್ಯಾಧ್ಯಕ್ಷ ಮಹೇಶಕುಮಾರ ಗೋರನಳಕರ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರುಣ ಪಟೇಲ್ ಮುಖ್ಯ ಅತಿಥಿಗಳಾಗಿ ಮಾನತಾಡಿದರು. ಚಿತ್ರಮ್ಮ ಗಾಂಧಿನಗರ ತಂಡದವರು, ಶೇಷಪ್ಪಾ ಚಿಟ್ಟಾ ಅರ್ಜುನ ನಂದಗಾವ, ಶಂಕ್ರಮ್ಮಾ ಸೋನಮ್ಮ ತಂಡದವರು ಹಾಡಿದರು. ಸಿದ್ದಲಿಂಗ, ಸುಣಗಾರ ವಿಶೇಷ ಕಲಾಪ್ರತಿಭೆ ಪ್ರದರ್ಶನ ಮಾಡಿದರು. ಕರ್ನಾಟಕ ರಾಜ್ಯ ಜಾನಪದ ಆಕಾಡೆಮಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡ ದೇವದಾಸ ಚಿಮಕೊಡೆ ರವರಿಗೆ ವಿಶೇಷವಾದ ಸನ್ಮಾನವನ್ನು ಮಾಡಲಾಯಿತು, ಟ್ರಸ್ಟನ ಅಧ್ಯಕ್ಷರಾದ ಶಿವರಾಜ ತಡಪಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ನಿರೂಪಣೆ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ಮಾಡಿದರು. ಅತಿಥಿಗಳಾಗಿ, ಉದಯ ನಾಯಕ ಬಸವರಾಜ ಜಡಗೆ ಭಾಗವಹಿಸಿದರು ಬೆಮಳಖೇಡ ಭಜನ ತಂಡದ ಮಹಿಳೆಯವರು ಅಂಬೇಡ್ಕರ ಗೀತೆಗಳನ್ನು ಹಾಡಿದರು.
📲Get App