🔥 TRENDING Bhakta Kanakadasa Jayanti Celebrated i... भाजपा की दुर्गा कुंवर ने जालौर पंचायत... வேலூர் குடியாத்தம் நீதிமன்றம் முன்னால்... तापी काठी अवैध गौण खनिज वाहतुकीवर महसू... Nagaland Technical Aspirants Plan Agit... Career Guidance Seminars Held in Two J...
27 Nov 2026•
ગુજરાતી मराठी ਪੰਜਾਬੀ বাংলা
Health

ಬೀದರ್‍ನ ನೌಬಾದ್‍ನ ಮರಾಠ ಭವನದಲ್ಲಿ ಹೃದಯಾಘಾತದಿಂದ ನಿಧನರಾದ ಡಾ. ದಿನಕರ್ ಮೋರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು

✍️ Reporter: Basavaraj pujari 🗓 27 Nov 2026, 05:31 PM 👁 23
Share: 💬 WhatsApp 📘 Facebook 𝕏 Post

ಸಕಲ ಮರಾಠ ಸಮಾಜದಿಂದ ಶ್ರದ್ಧಾಂಜಲಿ ಡಾ. ದಿನಕರ್ ಮೋರೆ ಸೇವೆ ಸ್ಮರಣೆ ಬೀದರ್: ಹೃದಯಾಘಾತದಿಂದ ನಿಧನರಾದ ಡಾ. ದಿನಕರ್ ಮೋರೆ ಅವರಿಗೆ ಸಕಲ ಮರಾಠ ಸಮಾಜದಿಂದ ಇಲ್ಲಿಯ ನೌಬಾದ್‍ನ ಮರಾಠ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತ

ಬೀದರ್‍ನ ನೌಬಾದ್‍ನ ಮರಾಠ ಭವನದಲ್ಲಿ ಹೃದಯಾಘಾತದಿಂದ ನಿಧನರಾದ ಡಾ. ದಿನಕರ್ ಮೋರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು

ಸಕಲ ಮರಾಠ ಸಮಾಜದಿಂದ ಶ್ರದ್ಧಾಂಜಲಿ

ಡಾ. ದಿನಕರ್ ಮೋರೆ ಸೇವೆ ಸ್ಮರಣೆ

ಬೀದರ್: ಹೃದಯಾಘಾತದಿಂದ ನಿಧನರಾದ ಡಾ. ದಿನಕರ್ ಮೋರೆ ಅವರಿಗೆ ಸಕಲ ಮರಾಠ ಸಮಾಜದಿಂದ ಇಲ್ಲಿಯ ನೌಬಾದ್‍ನ ಮರಾಠ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೃತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಪ್ರಮುಖರು, ಮಾಜಿ ಶಾಸಕ ಮಾಧವರಾವ್ ಜವಳಗೆ ಅವರ ಪುತ್ರ ದಿನಕರ್ ಮೋರೆ ಅವರು ವೈದ್ಯಕೀಯ, ಸಾಮಾಜಿಕ, ರಾಜಕೀಯ, ಸಹಕಾರ ಹಾಗೂ ಇತರ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಮೂಲತಃ ನೆರೆಯ ಮಹಾರಾಷ್ಟ್ರದ ಲಾತೂರ ಜಿಲ್ಲೆಯ ನಿಲಂಗಾ ತಾಲ್ಲೂಕಿನ ಮಾನೆ ಜವಳಗಾ ಗ್ರಾಮದವರಾದ ಮೋರೆ ಕಲ್ಯಾಣ ಕರ್ನಾಟಕದ ಹೆಸರಾಂತ ಮಕ್ಕಳ ತಜ್ಞರಲ್ಲಿ ಒಬ್ಬರಾಗಿದ್ದರು. ಭಾಲ್ಕಿ, ಕಲಬುರಗಿಯಲ್ಲಿ ಆಸ್ಪತ್ರೆ ಆರಂಭಿಸಿ, ಮಕ್ಕಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಿದ್ದರು ಎಂದು ಹೇಳಿದರು.
ಕಲಬುರಗಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರಲ್ಲಿ ಸಹಕಾರ ಬ್ಯಾಂಕ್ ಸ್ಥಾಪಿಸಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕಳೆದ ಲೋಕಸಭೆ ಚುನಾವಣೆಗೆ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಎಂದು ತಿಳಿಸಿದರು.
ಸರಳ, ಸಜ್ಜನ, ಜನ ಪರ ಕಾಳಜಿ ಉಳ್ಳುವರಾಗಿದ್ದರು. ಅವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ಮುಖಂಡರಾದ ದಿಗಂಬರರಾವ್ ಮಾನಕಾರಿ, ಪದ್ಮಾಕರ್ ಪಾಟೀಲ, ವೆಂಕಟೇಶರಾವ್ ಮಾಯಿಂದೆ, ಜನಾರ್ದನ್ ಬಿರಾದಾರ, ಅಂಗದರಾವ್ ಜಗತಾಪ್, ತಾತ್ಯಾರಾವ್ ಪಾಟೀಲ, ಸತೀಶ್ ವಾಸರೆ, ನಾರಾಯಣ ಪಾಟೀಲ ಕೊರೆಕಲ್, ಗೋವಿಂದರಾವ್ ಜಾಧವ್, ರಾಮರಾವ್ ರಾವಣಗಾವೆ, ಶಶಾಂಕ್ ಪವಾರ್, ಗುಣವಂತರಾವ್ ಸಿಂಧೆ, ಶರದ್ ಪಾಟೀಲ, ಅಮರ ಜಾಧವ್, ತುಕಾರಾಮ ಮೋರೆ, ಡಾ. ಮುಗಳೆ, ವಕೀಲ ವಿಕ್ರಮ ಪಾಟೀಲ, ತುಕಾರಾಮ ಶೆಡೋಳೆ, ತಾತ್ಯಾರಾವ್ ಬಿರಾದಾರ, ದತ್ತಾ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.
📲Get App