ಸಂಶೋಧನಾ ಕ್ಷೇತ್ರದ ಕೊಡುಗೆಗಾಗಿ ಉಪನ್ಯಾಸಕ ಡಾ. ಅಜ್ಜಯ್ಯ ಸಿ. ಅವರಿಗೆ ‘ಕರ್ನಾಟಕ ಸಾಹಿತ್ಯ ಸಾಮ್ರಾಟ’ ಪ್ರಶಸ್ತಿ ಪ್ರದಾನ
यहाँ देखें:
📘 Facebook
ಹರಪನಹಳ್ಳಿ, ನ. 26: ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಗುರುತಿಸಿ ಹರಪನಹಳ್ಳಿ ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದ ಉಪನ್ಯಾಸಕ ಡಾ. ಅಜ್ಜಯ್ಯ ಸಿ. ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಶ್ರೀ ದುರ್ಗಾದೇವಿ ಪ್ರಕಾಶನ ಹಾಗೂ ಮಾನ್ವಿತ ಸ್ಟುಡಿಯೋ ವತಿಯಿಂದ ‘ಕರ್ನಾಟಕ ಸಾಹಿತ್ಯ ಸಾಮ್ರಾಟ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ನಾಗರತ್ನ ಶೆಟ್ಟಿ, ಸಂಸ್ಥಾಪಕ ನರೇಶ್ ಶೆಟ್ಟಿ ಹಾಗೂ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ದುರ್ಗಾದೇವಿ ಆರ್ಯ ಪ್ರಕಾಶನದ ವತಿಯಿಂದ ಪ್ರಕಟಿಸಲಾದ ‘ಒಂದು ಕಾವ್ಯ ಭಾಗ–2’ ಸಂಕಲನದಲ್ಲಿ ಡಾ. ಅಜ್ಜಯ್ಯ ಸಿ. ಅವರ ‘ಮುಳ್ಳಿನ ತಪ್ಪೇನು ಅದರ ಮೇಲೆ ಹೆಜ್ಜೆ ಇಟ್ಟು ನಾನು’ ಎಂಬ ಕವನ ಬಿಡುಗಡೆಯಾಯಿತು. ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ. ಅಜ್ಜಯ್ಯ ಅವರ ಸಾಧನೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.