🔥 ट्रेंडिंग पश्चिम बंगाल ने 'पुलिस मित्र' आरंभ किय... गडकरी ने बंगाल के लिए एक लाख करोड़ रुप... महाराष्ट्र में रोडसाइड इट्री के शॉर्मा... महाराष्ट्र: फैंसी नंबर प्लेट विवाद में... फडणवीस ने मुंबई 3.0, 4.0 और नई धरवी के... यमुना की सबसे प्रदूषित धारा में 200 सी...
26 नव. 2026•
ગુજરાતી मराठी ਪੰਜਾਬੀ বাংলা

ಮಕ್ಕಳ ಗಣಿತ ಕಲಿಕೆಗೆ ಸಮುದಾಯದ ಸಹಭಾಗಿತ್ವ ಅಗತ್ಯ: ರಘು

✍️ रिपोर्टर: Viswanatha D R 🗓 26 नव. 2026, 03:26 PM 👁 30
शेयर करें: 💬 WhatsApp 📘 Facebook 𝕏 Post
ಹರಿಹರ: ಸರ್ಕಾರಿ ಶಾಲಾ ಮಕ್ಕಳ ಗಣಿತ ಕಲಿಕಾ ಗುಣಮಟ್ಟ ಹಾಗೂ ಶೈಕ್ಷಣಿಕ ಪ್ರಗತಿ ಸುಧಾರಣೆಯಲ್ಲಿ ಪೋಷಕರು ಮತ್ತು ಸ್ಥಳೀಯ ಸಮುದಾಯದ ಸಕ್ರಿಯ ಸಹಭಾಗಿತ್ವ ಅತ್ಯಂತ ಮಹತ್ವದ್ದಾಗಿದೆ ಎಂದು ಅಕ್ಷರ ಫೌಂಡೇಶನ್‌ನ ಜಿಲ್ಲಾ ಕ್ಷೇತ್ರ ಸಂಯೋಜಕ ರಘು ಹೇಳಿದರು.

ತಾಲ್ಲೂಕಿನ ಹನಗವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಅಕ್ಷರ ಫೌಂಡೇಶನ್ ಹಾಗೂ ಸ್ಥಳೀಯ ಸಮುದಾಯದ ಸಹಯೋಗದಲ್ಲಿ ಬುಧವಾರ ಮತ್ತು ಗುರುವಾರ ಆಯೋಜಿಸಿದ್ದ ‘ಊರ ಜನರ ನಡಿಗೆ – ಮಕ್ಕಳ ಕಲಿಕೆಯ ಕಡೆಗೆ’ ಎಂಬ ಗಣಿತ ಚಟುವಟಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದ ತಾಯಂದಿರು, ಪೋಷಕರು, ಯುವಕರು ಹಾಗೂ ಯುವತಿಯರು ಸೇರಿದಂತೆ ಒಟ್ಟು 102 ಸಮುದಾಯದ ಸದಸ್ಯರನ್ನು ಒಗ್ಗೂಡಿಸಿ, ವಿವಿಧ ಗಣಿತ ಚಟುವಟಿಕೆಗಳು ಮತ್ತು ಸ್ಪರ್ಧೆಗಳ ಮೂಲಕ ಮಕ್ಕಳ ಕಲಿಕೆಯ ಮಹತ್ವದ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಮುದಾಯದ ಸದಸ್ಯರಿಗೆ ಅಭಿನಂದನಾ ಪ್ರಮಾಣಪತ್ರ ವಿತರಿಸಲಾಯಿತು. ಗಣಿತ ಚಟುವಟಿಕೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜು ಹಾಗೂ ಸದಸ್ಯ ಹುಲಿಗೇಶ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಗ್ರಾಮದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಪಾಲ್ಗೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಪೋಷಕರಲ್ಲಿ ಶಿಕ್ಷಣದ ಕುರಿತು ಅರಿವು ಮೂಡಿಸುವುದರ ಜತೆಗೆ ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸುತ್ತವೆ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ರೇಣುಕಮ್ಮ, ಗ್ರಾಮ ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಪೋಷಕರು ಸೇರಿದಂತೆ ಗ್ರಾಮದ ಸಮುದಾಯದ ಸದಸ್ಯರು ಭಾಗವಹಿಸಿದ್ದರು.
📲Get App