🔥 TRENDING સંતરામપુરમાં વરસાદની અછતથી ડાંગર ખરીદી... रहस्यमय वीडियो में युवक ने मानिकचंद को... અમરેલીના વેપારીને નકલી ઈ-ચલણ APKથી ₹98... 138 જેતપુર પાવી વિધાનસભા સીટ પર નાયબ મ... Uttarakhand CM Announces Upcoming Incr... 74 વર્ષીય બાલુભાઈ કાનજીભાઈ દેસાઈનું મૃ...
26 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಸಂವಿಧಾನ ಸಮರ್ಪಣಾ ದಿನ ಆಚರಣೆ - ಅಂಬೇಡ್ಕರ್ ಅವರ ಚಿಂತನೆ ಸ್ಮರಣೆ - ಸಂವಿಧಾನದ ಮೌಲ್ಯಗಳ ಅನುಷ್ಠಾನಕ್ಕೆ ಕರೆ

✍️ Reporter: Ningappa 🗓 26 Nov 2026, 02:15 PM 👁 11
Share: 💬 WhatsApp 📘 Facebook 𝕏 Post

ಜಾಲಹಳ್ಳಿಯಲ್ಲಿ ಸಂವಿಧಾನ ಸಮರ್ಪಣಾ ದಿನ ಆಚರಣೆ - ಸಂವಿಧಾನದ ಮಹತ್ವ, ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜಾಗೃತಿ - ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ, ಸಾಮಾಜಿಕ ನ್ಯಾಯದ ಚಿಂತನೆ ಸ್ಮರಣೆ - ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಅನುಷ್ಠಾನಕ್ಕೆ ಕರೆ

ಜಾಲಹಳ್ಳಿ: ಭಾರತ ಸಂವಿಧಾನ ದಿನಾಚರಣೆಯ ಅಂಗವಾಗಿ ನವೆಂಬರ್ 26 ರಂದು ಸಂವಿಧಾನದ ಮಹತ್ವ, ಆಶಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಂವಿಧಾನ ಸಮರ್ಪಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಗ್ರಾ.ಪಂ ಮಾಜಿ ಅಧ್ಯಕ್ಷ ರಂಗಣ್ಣ ಕೊಲ್ಕಾರ್ ಅವರು ಮಾತನಾಡಿ, ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ, ಪರಿಶ್ರಮ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಗೌರವಪೂರ್ವಕವಾಗಿ ಸ್ಮರಿಸಬೇಕಿದೆ ಎಂದರು.

ಬಿಎಸ್ಪಿ ಮುಖಂಡ ವೆಂಕನಗೌಡ ನಾಯಕ ವಕೀಲರು ಮಾತನಾಡಿ, 1949 ರ ನವೆಂಬರ್ 26 ರಂದು ಭಾರತದ ಸಂವಿಧಾನವನ್ನು ಸಂವಿಧಾನ ಸಭೆ ಅಂಗೀಕರಿಸಿದ್ದು, 1950 ರ ಜನವರಿ 26 ರಿಂದ ಸಂವಿಧಾನ ಜಾರಿಗೆ ಬಂದಿದೆ. ಈ ಐತಿಹಾಸಿಕ ದಿನವು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಹಾಗೂ ಜವಾಬ್ದಾರಿಯ ದಿನವಾಗಿದೆ. ಭಾರತದ ಸಂವಿಧಾನವು ಕೇವಲ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಕಾನೂನು ಚೌಕಟ್ಟಲ್ಲ. ಅದು ದೇಶದ ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯ, ಸಮಾನತೆ, ಘನತೆ, ನ್ಯಾಯ ಮತ್ತು ಹಕ್ಕುಗಳನ್ನು ರಕ್ಷಿಸುವ ಪ್ರಜಾಪ್ರಭುತ್ವದ ಮಹತ್ವದ ಆಧಾರಸ್ತಂಭವಾಗಿದೆ. ಸಂವಿಧಾನದ ಪೀಠಿಕೆಯಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ದೇಶದ ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಅನುಷ್ಠಾನಗೊಳ್ಳಬೇಕು. ಜಾತಿ, ಧರ್ಮ, ಭಾಷೆ, ವರ್ಗ ಹಾಗೂ ಲಿಂಗದ ಆಧಾರದ ಮೇಲೆ ನಡೆಯುವ ಯಾವುದೇ ರೀತಿಯ ತಾರತಮ್ಯ, ಅಸ್ಪೃಶ್ಯತೆ, ಸಾಮಾಜಿಕ ಶೋಷಣೆ ಮತ್ತು ಅನ್ಯಾಯಗಳಿಗೆ ಸಮಾಜದಲ್ಲಿ ಅವಕಾಶ ಇರಬಾರದು ಎಂದರು.

ಇದೇ ಸಂದರ್ಭದಲ್ಲಿ ರಂಗಣ್ಣ ಕೋಲ್ಕಾರ್, ಪಿಎಸ್ಐ ವೈಶಾಲಿ ಜಳಕಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಾಬಣ್ಣ ಕಮಲದಿನ್ನಿ, ಬಸವರಾಜ ಪಾಣಿ, ಭೀಮಣ್ಣ ಗುಮೇದಾರ, ಗಿರಿಯಪ್ಪ, ಪತ್ರಕರ್ತ ವೆಂಕನಗೌಡ ವಕೀಲ, ಖಾಜಾಹುಸೇನ್ (ಬಾಬು), ಪತ್ರಕರ್ತ ಮೌನೇಶ ಗಾಣಧಾಳ, ಬಾಳಪ್ಪ ಬಾವಿಮನಿ, ಚಂದಪ್ಪ ಹೊಸೂರು, ಸಿದ್ದಾಪುರ ರಂಗಪ್ಪ, ತೊಗರಿ ರಂಗಣ್ಣ, ಬಂಡಿ ಚಂದಪ್ಪ, ಬಾವಿಮನಿ ಎಂ.ಆರ್. ಬಸವ, ಯೇಸು ಡಿ.ಕೆ. ಕಮಲದಿನ್ನಿ, ಖುರೇಷಿದ್ ಪಾಟೀಲ್, ಚನ್ನಬಸವ ಭವಾನಿ, ರಮೇಶ್ ಬಾವಿಮನಿ ರಾಜು ಮೆಂಬರ್, ದುರ್ಗೇಶ, ಯಲ್ಲಪ್ಪ ಗಾಜಲದಿನ್ನಿ, ರಮೇಶ್ ಬಾಗೂರು ಹಾಗೂ ಮೌನೇಶ್ ಚಪ್ಪಳ್ಳಕ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
📲Get App