🔥 TRENDING Bihar’s Free Coaching Programme Boosts... Cyclone Arnab triggers red alert in tw... अचरा रोड, नवाबगंज के उमरपुर में दर्दना... Punjab Kings appoint Rajiv Kumar as ne... Doctor’s car runs over six pedestrians... एस. एन. पब्लिक स्कूल, मलेजी में दीप नि...
25 Nov 2026•
ગુજરાતી मराठी ਪੰਜਾਬੀ বাংলা
Education

ಫಿರೋಜ್ ಖಾನ್ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಗ್ರಿ ವಿತರಣೆ

✍️ Reporter: Basavaraj pujari 🗓 25 Nov 2026, 06:13 PM 👁 37
Share: 💬 WhatsApp 📘 Facebook 𝕏 Post

ಬೀದರ್: NSUI ರಾಷ್ಟ್ರೀಯ ಸಂಯೋಜಕ ಹಾಗೂ ತೆಲಂಗಾಣ ಉಸ್ತುವಾರಿ ಶ್ರೀ ಎಂ.ಡಿ. ಫಿರೋಜ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಯುವ ಕಾಂಗ್ರೆಸ್ ಬೀದರ್ ದಕ್ಷಿಣ ಸಮಿತಿ ವತಿಯಿಂದ ಕಮಠಾಣಾ ಗ್ರಾಮದ ವಿವಿಧ ಶಾಲೆಗಳಲ್ಲಿ ವಿದ್ಯಾರ

ಫಿರೋಜ್ ಖಾನ್ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಗ್ರಿ ವಿತರಣೆ
ಬೀದರ್: NSUI ರಾಷ್ಟ್ರೀಯ ಸಂಯೋಜಕ ಹಾಗೂ ತೆಲಂಗಾಣ ಉಸ್ತುವಾರಿ ಶ್ರೀ ಎಂ.ಡಿ. ಫಿರೋಜ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಯುವ ಕಾಂಗ್ರೆಸ್ ಬೀದರ್ ದಕ್ಷಿಣ ಸಮಿತಿ ವತಿಯಿಂದ ಕಮಠಾಣಾ ಗ್ರಾಮದ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ಹಾಗೂ ಪೆನ್ಸಿಲ್‌ಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ, ಶಿಕ್ಷಣದ ಮಹತ್ವ ಸಾರಲಾಯಿತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಇಮ್ರಾನ್ ಖಾನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಬೆಲ್ದಾರ್, ಎಸ್‌ಡಿಎಂಸಿ ಅಧ್ಯಕ್ಷ ಅಂಬರೀಶ್, ಯುವ ಮುಖಂಡರಾದ ರೋಷನ್ ಮಲ್ಕಾಪುರೆ, ಎಸ್.ಡಿ. ದಿನೇಶ್, ಯೋಹಾನ್ ಮೀಸೆ, ವಿಶಾಲ್ ಹೊನ್ನ, ಪ್ರೀತಂ ಕೆಂಪೆ ಸೇರಿದಂತೆ ಗ್ರಾಮದ ಹಲವು ಮುಖಂಡರು ಉಪಸ್ಥಿತರಿದ್ದರು.
📲Get App