🔥 TRENDING ଲୋଭି କନଷ୍ଟେବଲ! ୧୩ ଲକ୍ଷ ଟଙ୍କିଆ କାର ନ ମି... Supreme Court Reinstates Life Sentence... Karnataka to Roll Out Puneeth Hrudayaj... Punjab Night Temperatures Expected to... Rajasthan Government Announces LPG Sub... टीम सूरज सिसोदिया: ग्राम पंचायत छापरिय...
25 Nov 2026•
ગુજરાતી मराठी ਪੰਜਾਬੀ বাংলা
National

*”ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ಹೆಮ್ಮೆಯ ಸಂಗಾತಿ ಶ್ವಾನ ‘ದೀಪಾ’ಗೆ ಭಾವಪೂರ್ಣ ಶ್ರದ್ಧಾಂಜಲಿ”*

✍️ Reporter: Basavaraj pujari 🗓 25 Nov 2026, 12:59 PM 👁 15
Share: 💬 WhatsApp 📘 Facebook 𝕏 Post

ನಂಬಿಕೆ, ನಿಷ್ಠೆ ಮತ್ತು ಕರ್ತವ್ಯ ಪ್ರಜ್ಞೆಗೆ ಮತ್ತೊಂದು ಹೆಸರೇ ಶ್ವಾನ. ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಸುಮಾರು 08 ವರ್ಷಗಳ ಕಾಲ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಇಲಾಖೆಯ ಹೆಮ್ಮೆಯ ಸಂಗಾತಿ, ಹಿರಿಯ ಶ್

*”ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ಹೆಮ್ಮೆಯ ಸಂಗಾತಿ ಶ್ವಾನ ‘ದೀಪಾ’ಗೆ ಭಾವಪೂರ್ಣ ಶ್ರದ್ಧಾಂಜಲಿ”*

ನಂಬಿಕೆ, ನಿಷ್ಠೆ ಮತ್ತು ಕರ್ತವ್ಯ ಪ್ರಜ್ಞೆಗೆ ಮತ್ತೊಂದು ಹೆಸರೇ ಶ್ವಾನ. ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಸುಮಾರು 08 ವರ್ಷಗಳ ಕಾಲ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಇಲಾಖೆಯ ಹೆಮ್ಮೆಯ ಸಂಗಾತಿ, ಹಿರಿಯ ಶ್ವಾನ ‘ದೀಪಾ’ (ಡೋಬರ್‌ಮನ್ ಪಿನ್‌ಶರ್ – Doberman Pinscher) ಇಂದು ಮುಂಜಾನೆ ನಮ್ಮೆಲ್ಲರನ್ನು ಅಗಲಿದೆ.

ದೀಪಾ ತನ್ನ ಸುದೀರ್ಘ ಸೇವಾವಧಿಯಲ್ಲಿ ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ್ದು, ಅಪರಾಧ ಪ್ರಕರಣಗಳ ಪತ್ತೆ ಹಾಗೂ ಮಾದಕ ವಸ್ತುಗಳ ಶೋಧನಾ ಕಾರ್ಯಗಳಲ್ಲಿ ಅತ್ಯಂತ ಚುರುಕಾಗಿ ಮತ್ತು ಯಶಸ್ವಿಯಾಗಿ ಪಾಲ್ಗೊಂಡಿತ್ತು. ತನ್ನ ಕರ್ತವ್ಯನಿಷ್ಠೆ, ಚುರುಕುತನ ಮತ್ತು ವಿಶೇಷ ಸಾಮರ್ಥ್ಯದಿಂದ ಅನೇಕ ಪೊಲೀಸ್ ಕಾರ್ಯಾಚರಣೆಗಳಲ್ಲಿ ಮಹತ್ವದ ಕೊಡುಗೆ ನೀಡಿತ್ತು.

ಅಲ್ಲದೆ, ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಗಳು ಹಾಗೂ ವಿವಿಧ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವ ಮೂಲಕ ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ಕೀರ್ತಿಯನ್ನು ಹೆಚ್ಚಿಸಿತ್ತು.

ಸುಮಾರು ಎಂಟು ವರ್ಷಗಳ ಕಾಲ ಇಲಾಖೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ದೀಪಾ ಕೇವಲ ಕರ್ತವ್ಯ ನಿರ್ವಹಿಸಿದ ಶ್ವಾನವಲ್ಲ; ಅದು ಪೊಲೀಸ್ ಇಲಾಖೆಯ ನಿಷ್ಠಾವಂತ ಸಂಗಾತಿ ಹಾಗೂ ಕುಟುಂಬದ ಅವಿಭಾಜ್ಯ ಭಾಗವಾಗಿತ್ತು. ಅದರ ನಿಷ್ಠೆ, ಸೇವೆ ಮತ್ತು ಸಾಧನೆಗಳು ಸದಾ ಸ್ಮರಣೀಯ.

ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ಹೆಮ್ಮೆಯ ಸಂಗಾತಿ ಶ್ವಾನ ದೀಪಾ ಅಗಲಿಕೆಯಿಂದ ಉಂಟಾದ ನೋವಿನಲ್ಲಿ ಭಾಗಿಯಾಗಿರುವ ಸಮಸ್ತ ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಅಂತಿಮ ನಮನಗಳು.
ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.
📲Get App