🔥 ट्रेंडिंग इंदौर: रोहित गोदारा गैंग से रियल एस्टे... ಭಾರತೀಯ ಭೀಮಸೇನಾದ ವಿವಿಧ ಘಟಕಗಳಿಗೆ ಪದಾಧಿಕಾ... ಆರೋಪ: ಕೆಕೆಆರ್‌ಟಿಸಿ ಅಧಿಕಾರಿ ವಿರುದ್ಧ ಕ್ರ... उदयपुर के उद्योगपति रविंद्र सिंह की इं... ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಹಾವಗಿರಾವ್ ಮ... ಸಾಹಿತ್ಯ ಸೇವೆಗಾಗಿ ಸುಬ್ಬಣ್ಣ ಕರಕನಳ್ಳಿಗೆ ಕ...
23 नव. 2026•
ગુજરાતી मराठी ਪੰਜਾਬੀ বাংলা
शिक्षा

ಖಾಸಗಿ ಅನುದಾನ ರಹಿತ ಶಾಲಾ ಸಂಘಟನೆಗಳ ಸಭೆ ಇಂದು

✍️ रिपोर्टर: Basavaraj pujari 🗓 23 नव. 2026, 07:17 PM 👁 17
यहाँ देखें: 📘 Facebook
शेयर करें: 💬 WhatsApp 📘 Facebook 𝕏 Post

ಬೀದರ್: ಬೆಂಗಳೂರಿನ ಬ್ರಿಗೇಡ್ ಗೇಟ್ ವೇ ನಲ್ಲಿ ನ. 24 ರಂದು ಬೆಳಿಗ್ಗೆ 11ಕ್ಕೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯಮಟ್ಟದ ಸಂಘಟನೆಗಳ ಮುಖಂಡರ ಸಭೆ ನಡೆಯಲಿದೆ. ರಾಜ್ಯದ ಹಲವು ಸಂಘಟನೆಗಳು ಖಾಸಗಿ ಅನುದಾನ ರಹಿತ ಶಾಲೆಗಳ

ಖಾಸಗಿ ಅನುದಾನ ರಹಿತ ಶಾಲಾ ಸಂಘಟನೆಗಳ ಸಭೆ ಇಂದು

ಬೀದರ್: ಬೆಂಗಳೂರಿನ ಬ್ರಿಗೇಡ್ ಗೇಟ್ ವೇ ನಲ್ಲಿ ನ. 24 ರಂದು ಬೆಳಿಗ್ಗೆ 11ಕ್ಕೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯಮಟ್ಟದ ಸಂಘಟನೆಗಳ ಮುಖಂಡರ ಸಭೆ ನಡೆಯಲಿದೆ.
ರಾಜ್ಯದ ಹಲವು ಸಂಘಟನೆಗಳು ಖಾಸಗಿ ಅನುದಾನ ರಹಿತ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸುತ್ತಿವೆ. ಸರ್ಕಾರದ ಮೇಲೆ ಒತ್ತಡ ಹೇರಲು ಇದೀಗ ಎಲ್ಲ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಂಘಟನೆಗಳ ಮುಖಂಡರ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಹಾಗೂ ಓವರ್ ಸ್ಕೂಲ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಅರಸ್ ತಿಳಿಸಿದ್ದಾರೆ.
ಸಭೆ ಯಾವುದೇ ಒಂದು ಸಂಘಟನೆಯ ನಾಯಕತ್ವ ಮುನ್ನೆಲೆಗೆ ತರುವ ಪ್ರಯತ್ನ ಅಲ್ಲ. ಎಲ್ಲ ಸಂಘಟನೆಗಳಿಗೂ ಸಮಾನ ಗೌರವ, ಮನ್ನಣೆ ನೀಡಿ, ಖಾಸಗಿ ಶಾಲೆಗಳ ಬೇಡಿಕೆಗಳ ಈಡೇರಿಕೆಯ ಹೋರಾಟದಲ್ಲಿ ಒಟ್ಟಾಗಿ ಮುಂದಡಿ ಇಡುವ ಸಾಮಾನ್ಯ ವೇದಿಕೆ ನಿರ್ಮಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖರು ಸಭೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
📲Get App