🔥 TRENDING Services vs Meghalaya: Syed Mushtaq Al... Rijiju: India has surged ahead under P... Tripura Congress Accuses BJP of Corrup... Haflong Police Rescue Two Missing Mino... Sensex, Nifty Dip Nearly 2% as Investo... Three Police Officers Suspended After...
23 Nov 2026•
ગુજરાતી मराठी ਪੰਜਾਬੀ বাংলা
Education

ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಹಾವಗಿರಾವ್ ಮೈಲಾರೆ ಹೇಳಿಕೆ

✍️ Reporter: Basavaraj pujari 🗓 23 Nov 2026, 07:29 PM 👁 19
Share: 💬 WhatsApp 📘 Facebook 𝕏 Post

ಬಿದರಿ ಕಲೆ ಬೀದರ್ ಹೆಮ್ಮೆ ಬೀದರ್: ವಿಶ್ವದ ಶ್ರೀಮಂತ ಕಲೆಗಳಲ್ಲಿ ಒಂದಾದ ಬಿದ್ರಿ ಕಲೆ ಬೀದರ್‍ನ ಹೆಮ್ಮೆಯಾಗಿದೆ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಹೇಳಿದರು. ಇಲ್ಲಿಯ ಸದ್ಗುರು ಸಿ

ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಹಾವಗಿರಾವ್ ಮೈಲಾರೆ ಹೇಳಿಕೆ

ಬಿದರಿ ಕಲೆ ಬೀದರ್ ಹೆಮ್ಮೆ

ಬೀದರ್: ವಿಶ್ವದ ಶ್ರೀಮಂತ ಕಲೆಗಳಲ್ಲಿ ಒಂದಾದ ಬಿದ್ರಿ ಕಲೆ ಬೀದರ್‍ನ ಹೆಮ್ಮೆಯಾಗಿದೆ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಹೇಳಿದರು.
ಇಲ್ಲಿಯ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ಸೋಮವಾರ ವಿಶ್ವ ಪರಂಪರೆ ಸಪ್ತಾಹ ಅಂಗವಾಗಿ ನಡೆದ ಬಿದರಿ ಕಲೆ, ಬೀದರ್‍ನ ಕಲೆ ಹಾಗೂ ವಾಸ್ತು ಶಿಲ್ಪ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ, ಸಂಸ್ಕøತಿ ಹಾಗೂ ಪರಂಪರೆ ನಮ್ಮ ಭವ್ಯ ಇತಿಹಾಸವನ್ನು ಪ್ರತಿಬಿಂಬಿಸುತ್ತವೆ. ಹೀಗಾಗಿ ಅವುಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಬಸವಕಲ್ಯಾಣದ ಸರ್ಕಾರಿ ವಸ್ತು ಸಂಗ್ರಹಾಲಯದ ಪ್ರಭಾರ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಈಗ ಅಧ್ಯಯನಕ್ಕೆ ಸಾಕಷ್ಟು ಕೋರ್ಸ್‍ಗಳು ಇವೆ. ಕಾರಣ, ಒಂದೇ ಕೋರ್ಸ್ ಅನ್ನು ಅವಲಂಬಿಸದೆ, ಭವಿಷ್ಯ ಉಜ್ವಲಗೊಳಿಸುವ ಸರಿಯಾದ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸಿ.ಬಿ. ದೇವರಾಜು ಮಾತನಾಡಿ, ಬೀದರ್ ಕೋಟೆ, ಮುಹಮ್ಮದ್ ಗವಾನ್ ಮದರಸಾ, ಅಷ್ಟೂರಿನ ಗುಮ್ಮಟಗಳು, ಚೌಖಂಡಿ ಮೊದಲಾದವು ಐತಿಹಾಸಿಕ ಸ್ಮಾರಕಗಳಾಗಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿ, ಬಿದರಿ ಕಲೆಗೆ ಬಹು ಬೇಡಿಕೆ ಇದ್ದರೂ, ಕಲಾವಿದರ ಬದುಕು ಶೋಚನೀಯವಾಗಿದೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಬಿದರಿ ಕಲಾವಿದರಿಗೆ ನೆರವಾಗಬೇಕು ಎಂದು ಹೇಳಿದರು.
ಉಪನ್ಯಾಸಕರಾದ ದೇವೇಂದ್ರ, ಡಾ. ಪಂಡಿತ, ಶ್ರೀಲತಾ, ಶೃತಿ, ಸುಧಾ ಮುದ್ದಾ, ಶಶಿಕಾಂತ ಮತ್ತಿತರರು ಇದ್ದರು.
ಇತಿಹಾಸ ಉಪನ್ಯಾಸಕ ಬಸವರಾಜ ಬಿರಾದಾರ ನಿರೂಪಿಸಿದರು. ಈಶ್ವರ ರೆಡ್ಡಿ ಸ್ವಾಗತಿಸಿದರು. ಡಾ. ಸಂಗಪ್ಪ ತೌಡಿ ವಂದಿಸಿದರು.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಬಸವಕಲ್ಯಾಣದ ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
📲Get App