🔥 TRENDING Services vs Meghalaya: Syed Mushtaq Al... Rijiju: India has surged ahead under P... Tripura Congress Accuses BJP of Corrup... Haflong Police Rescue Two Missing Mino... Sensex, Nifty Dip Nearly 2% as Investo... Three Police Officers Suspended After...
23 Nov 2026•
ગુજરાતી मराठी ਪੰਜਾਬੀ বাংলা
Politics

ಆರೋಪ: ಕೆಕೆಆರ್‌ಟಿಸಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

✍️ Reporter: Basavaraj pujari 🗓 23 Nov 2026, 07:31 PM 👁 20
Share: 💬 WhatsApp 📘 Facebook 𝕏 Post

ಆದಿ ಜಾಂಬವ ಸಂಘದಿಂದ ಧರಣಿ; ಬೇಡಿಕೆ ಈಡೇರಿಕೆಗೆ 15 ದಿನಗಳ ಗಡುವು ಬೀದರ್: ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗದಲ್ಲಿ ದಲಿತ ಹಾಗೂ ಮಾದಿಗ ಸಮಾಜದ ನೌಕರರಿಗೆ ತಾರತಮ್ಯ, ಮಾನಸಿಕ ಕಿರುಕುಳ ಮತ್ತು ಸೇವಾ ಸೌಲಭ್ಯಗ

ಆರೋಪ: ಕೆಕೆಆರ್‌ಟಿಸಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಆದಿ ಜಾಂಬವ ಸಂಘದಿಂದ ಧರಣಿ; ಬೇಡಿಕೆ ಈಡೇರಿಕೆಗೆ 15 ದಿನಗಳ ಗಡುವು

ಬೀದರ್: ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗದಲ್ಲಿ ದಲಿತ ಹಾಗೂ ಮಾದಿಗ ಸಮಾಜದ ನೌಕರರಿಗೆ ತಾರತಮ್ಯ, ಮಾನಸಿಕ ಕಿರುಕುಳ ಮತ್ತು ಸೇವಾ ಸೌಲಭ್ಯಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಬಿ. ಜಾಧವ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ವತಿಯಿಂದ ಸೋಮವಾರ (ನ.23) ಬೀದರ್ ವಿಭಾಗೀಯ ಕಚೇರಿ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ವಕೀಲ ರಾಜು ಕಡ್ಯಾಳ ಅವರ ನೇತೃತ್ವ ಮತ್ತು ಉಪಸ್ಥಿತಿಯಲ್ಲಿ ನಡೆದ ಧರಣಿಯಲ್ಲಿ ಪದಾಧಿಕಾರಿಗಳು, ಮುಖಂಡರು ಹಾಗೂ ಸದಸ್ಯರು ಭಾಗವಹಿಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಸಂಘದ ಆರೋಪದಂತೆ, ಅಂಬಾದಾಸ, ಪ್ರಕಾಶ ಜಿ. ದೊಡ್ಡಮನಿ, ಜ್ಞಾನೋಬ, ಸಂಜು ಮತ್ತು ಪಂಡರಿನಾಥ್ ಸೇರಿದಂತೆ ಹಲವು ನೌಕರರನ್ನು ಸೂಕ್ತ ವಿಚಾರಣೆ ಇಲ್ಲದೆ ಅಮಾನತುಗೊಳಿಸಲಾಗಿದೆ. ಈ ಪ್ರಕರಣಗಳನ್ನು ಮರುಪರಿಶೀಲಿಸಿ ನ್ಯಾಯ ಒದಗಿಸಬೇಕು. ಬೀದರ್ ಘಟಕ-1ರ ಚಾಲಕ ರಾಜಕುಮಾರ್ (ಬಿಲ್ಲೆ ಸಂಖ್ಯೆ 601) ಆತ್ಮಹತ್ಯೆ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಅವರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು. ಘಟಕ-2ರ ಸಂಚಾರ ನಿಯಂತ್ರಕ ಸೂರ್ಯಕಾಂತ್ ಅವರಿಗೆ ಮುಂಬಡ್ತಿ ನೀಡುವಂತೆ ಹಾಗೂ 371(ಜೆ) ಅಡಿಯಲ್ಲಿ ಅರ್ಹರಿಗೆ ಸೇವಾ ಸೌಲಭ್ಯ ಕಲ್ಪಿಸುವಂತೆಯೂ ಆಗ್ರಹಿಸಲಾಯಿತು.

ವಿಭಾಗೀಯ ನಿಯಂತ್ರಣಾಧಿಕಾರಿ ವಿರುದ್ಧ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ನೌಕರರಿಗೆ ನ್ಯಾಯಯುತ ವಿಚಾರಣೆ ಖಚಿತಪಡಿಸಬೇಕು ಮತ್ತು ದೂರುದಾರರಿಗೆ ಪ್ರತೀಕಾರದ ಕ್ರಮ ಕೈಗೊಳ್ಳಬಾರದು ಎಂಬುದು ಸಂಘದ ಪ್ರಮುಖ ಬೇಡಿಕೆಗಳಾಗಿವೆ.

ಧರಣಿಯ ಬಳಿಕ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು, ಸಾರಿಗೆ ಸಚಿವರು ಹಾಗೂ ಬೀದರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ 15 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಹಂತ ಹಂತವಾಗಿ ಪ್ರತಿಭಟನೆ ನಡೆಸುವುದಾಗಿ ಸಂಘ ಎಚ್ಚರಿಸಿದೆ.

ಧರಣಿಯಲ್ಲಿ ಭಾಗವಹಿಸಿದವರು: ಯುವರಾಜ್ ಬಂಡೆ, ರಮೇಶ್ ಕಟ್ಟಿ ತೂಗಾವ್, ಹನುಮಂತು ಸೂರ್ಯವಂಶಿ, ಜೀವನ್ ರಿಕ್ಕೆ, ಜಯರಾಜ್ ವೈದ್ಯ, ಸೂರ್ಯಕಾಂತ್ ದಂಡಿನ ಕಾಡವಾದ್, ಅಂಬದಾಸ್ ಹುಲ್ಸೂರೆ, ದತ್ತು ಬೆಂಡೆ, ಆಕಾಶ ಸಿಂದೆ, ವೀರಶೆಟ್ಟಿ ಬಂಬುಳಗಿ, ಅ. ಒ. ದಾಸ್, ತುಳಸಿರಾಮ್ ಜಕಾತೆ, ದತ್ತಾತ್ರಿ ಜ್ಯೋತಿ ಭಾಲ್ಕಿ, ರೋಷನ್ ಮಲ್ಕಾಪುರೆ, ಎಲಿಷಾಮ್ ಕಡ್ಯಾಳ್, ಶಿವಾನಂದ್ ಸಿಂಧಿ ಕಡ್ಯಾಳ್, ಪ್ರದೀಪ್ ದೊಡ್ಡಮನಿ ಕಡ್ಯಾಳ್, ಸುಧಾಕರ್ ಕೋಟೆ, ಸಂಜು ಬೇಂದ್ರೆ, ಪ್ರಸಾದ್ ಮನ್ನಳ್ಳಿ, ಲಾಲಪ್ಪ ನರ್ನಾಳ, ಕೆ. ಧನರಾಜ್ ಬೆಮ್ಮಳಖೇಡ, ರೋಹಿತ್ ಕಡ್ಯಾಳ್, ಮೋಶಾ ಬೆಮ್ಮಳಖೇಡ, ಗುಂಡಪ್ಪ ಕಂಠಾಣೆ, ನರಸಿಂಗ್ ಕಂಠಾಣೆ, ಬಾಬಣ್ಣ ಕಂಠಾಣೆ, ಆಸ್ಕರ್ ಫರ್ನಾಂಡಿಸ್ ಮನ್ನೆ ಖೇಳಿ, ಶಿರೋಮಣಿ ಮಂಗಲಗಿ ಹಾಗೂ ಸುಂದರರಾಜ್ ಡಿ. ಮಾಳೆ ಸೇರಿದಂತೆ 30 ಮಂದಿ ಭಾಗವಹಿಸಿದ್ದರು.
📲Get App