🔥 TRENDING देवास उज्जैन बायपास पर डंपर ने दो गाड़... तुळशी विवाहानिमित्त मल्लाव समाजाची जुन... हांसपुर का 1.5 किमी रास्ता: 20 वर्षों... મહેસાણા રાધનપુરમાં ચોકડી પુલનું કામ શર... Pant’s Century Fuels India’s Dominance... India Sets Record Highest Away Total i...
22 Nov 2026•
ગુજરાતી मराठी ਪੰਜਾਬੀ বাংলা
Religion

ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾದ ‘ಬೆಳೆವ ಸಿರಿ’ ಗೋಷ್ಠಿ

✍️ Reporter: Basavaraj pujari 🗓 22 Nov 2026, 12:52 PM 👁 16
Share: 💬 WhatsApp 📘 Facebook 𝕏 Post

ಬೀದರ್: 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೆಳೆವ ಸಿರಿ ಗೋಷ್ಠಿ ಮಕ್ಕಳಲ್ಲಿನ ಪ್ರತಿಭೆ ಹಾಗೂ ಸೃಜನಶೀಲತೆ ಅನಾವರಣ

ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾದ ‘ಬೆಳೆವ ಸಿರಿ’ ಗೋಷ್ಠಿ

ಬೀದರ್: 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೆಳೆವ ಸಿರಿ ಗೋಷ್ಠಿ ಮಕ್ಕಳಲ್ಲಿನ ಪ್ರತಿಭೆ ಹಾಗೂ ಸೃಜನಶೀಲತೆ ಅನಾವರಣಕ್ಕೆ ವೇದಿಕೆಯಾಯಿತು.
ಮಕ್ಕಳು ವೇದಿಕೆ ಹತ್ತಿ, ಸಭಿಕರ ಎದುರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನು ಆಡಿದ, ವೇದ ಶಶಿಕಾಂತ ಬಂಬಳಗೆ ಅವರು ಕರ್ನಾಟಕದ ಭವ್ಯ ಇತಿಹಾಸ, ಪರಂಪರೆ ಹಾಗೂ ಸಾಂಸ್ಕøತಿಕ ವೈಭವದ ಕುರಿತು ನಿರರ್ಗಳವಾಗಿ ಮಾತನಾಡಿದರು. ಅವರು ಆತ್ಮವಿಶ್ವಾಸದೊಂದಿಗೆ ವಿಷಯ ಮಂಡಿಸಿದ್ದು ಎಲ್ಲರ ಮೆಚ್ಚುಗೆ ಗಳಿಸಿತು.
ಭೂಮಿಕಾ, ತಮನ್ನಾ, ವೈಷ್ಣವಿ ದೀಪಕ್, ಚಿನ್ಮಯಿ ಅಲ್ಲಮಪ್ರಭು ನಾವದಗೇರೆ ಸೇರಿದಂತೆ ಹಲವರು ಮಕ್ಕಳು ವಿವಿಧ ವಿಷಯಗಳ ಕುರಿತು ಸುಂದರವಾಗಿ ಮಾತನಾಡಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮಕ್ಕಳ ಮುಗ್ಧ ಮಾತು, ಸ್ಪಷ್ಟ ಉಚ್ಚಾರಣೆ, ವಿಷಯ ಮಂಡನೆ ಹಾಗೂ ಆತ್ಮವಿಶ್ವಾಸ ಸಭಿಕರ ಗಮನ ಸೆಳೆಯಿತು.
ನಟ, ನಿರ್ಮಾಪಕ ಹಾಗೂ ನಿರ್ದೇಶಕ ಬಿ.ಜೆ. ವಿಷ್ಣುಕಾಂತ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕೆ ಅಕ್ಕ ದಿವ್ಯ ಸಾನಿಧ್ಯ ವಹಿಸಿದ್ದರು. ಕು. ಯುಕ್ತಿ ಅರಳಿ ನೇತೃತ್ವ ವಹಿಸಿದ್ದರು. ಸಮ್ಮೇಳನ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ ಉಪಸ್ಥಿತರಿದ್ದರು.
ತರಂಗಿಣಿ ಎಸ್. ಶೆಂಬೆಳ್ಳಿ ಸ್ವಾಗತಿಸಿದರು. ದೀಕ್ಷಾ ಸುರೇಶ ಚನಶೆಟ್ಟಿ ನಿರೂಪಿಸಿದರು. ಸಾಯಿಸೃಷ್ಟಿ ಆಕಾಶ ಕೋಟೆ ವಂದಿಸಿದರು.
📲Get App