🔥 ट्रेंडिंग હિતેશભાઈ કરશનભાઈએ લાંચ માંગણી કરી,સુરત... मुख्यमंत्री उत्तर प्रदेश चंद्रपूरमध्ये बेजुबान अजगराची हत्या, द... સાબરકાંઠા સાયબર ક્રાઇમ પોલીસ દ્વારા ડિ... नवादा में बैंक, सीएसपी और स्वर्ण प्रति... বাঘমুন্ডিতে স্কুলের ১০০ মিটারের মধ্যে...
21 नव. 2026•
ગુજરાતી मराठी ਪੰਜਾਬੀ বাংলা

ಲಿಂಗಸಗೂರು ಬಸ್ ನಿಲ್ದಾಣದ ಕಂಪೌಂಡ್ ಒಳಗೆ ಅಂಗಡಿ - ಸಾರ್ವಜನಿಕರಿಗೆ ತೊಂದರೆ, ಮಹಿಳೆಯರ ಸುರಕ್ಷತೆಗೆ ಆತಂಕ - ತೆರವುಗೊಳಿಸಿ, ತನಿಖೆಗೆ ಸಾರ್ವಜನಿಕರ ಒತ್ತಾಯ

✍️ रिपोर्टर: Ningappa 🗓 21 नव. 2026, 08:32 PM 👁 22
शेयर करें: 💬 WhatsApp 📘 Facebook 𝕏 Post

ಲಿಂಗಸಗೂರು ಬಸ್ ನಿಲ್ದಾಣದ ಕಂಪೌಂಡ್ ಒಳಗೆ ಅಂಗಡಿ - ಸಾರ್ವಜನಿಕರಿಗೆ ತೊಂದರೆ, ಮಹಿಳೆಯರ ಸುರಕ್ಷತೆಗೆ ಆತಂಕ - ಪ್ರಯಾಣಿಕರು, ಮಹಿಳೆಯರು, ಮಕ್ಕಳು, ವೃದ್ಧರಿಗೆ ಅನಾನುಕೂಲ - ಅನುಮತಿ ನೀಡಿದವರು ಯಾರು? ಯಾವ ನಿಯಮದಡಿ ಅಂಗಡಿ? - ತೆರವುಗೊಳಿಸಿ, ತನಿಖೆ ನಡೆಸಿ ಕ್ರಮಕ್ಕೆ ಒತ್ತಾಯ

ಲಿಂಗಸಗೂರು ಬಸ್ ನಿಲ್ದಾಣದ ಕಂಪೌಂಡ್ ಒಳಗೆ ಅಂಗಡಿ - ಸಾರ್ವಜನಿಕರಿಗೆ ತೊಂದರೆ, ಮಹಿಳೆಯರ ಸುರಕ್ಷತೆಗೆ ಆತಂಕ

ಲಿಂಗಸಗೂರು: ಪಟ್ಟಣದ ಅತಿಥಿ ಹೋಟೆಲ್ ಮುಂಭಾಗದಲ್ಲಿರುವ ಬಸ್ ನಿಲ್ದಾಣದ ಕಂಪೌಂಡ್ ಒಳಭಾಗದಲ್ಲಿ ಅಂಗಡಿ ಇಟ್ಟಿರುವುದು ಕಂಡುಬಂದಿದೆ. ಬಸ್ ನಿಲ್ದಾಣವು ಸಾರ್ವಜನಿಕರ ಬಳಕೆಗೆ ಮೀಸಲಾಗಿರುವ ಸ್ಥಳವಾಗಿದ್ದು, ಇಲ್ಲಿ ಅಂಗಡಿ ಇಟ್ಟಿರುವುದರಿಂದ ಬಸ್‌ಗಾಗಿ ಕಾಯುವ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಬಸ್ ನಿಲ್ದಾಣಕ್ಕೆ ಬಂದು ಹೋಗುವ ಸಂದರ್ಭದಲ್ಲಿ ಅನಾನುಕೂಲತೆ ಮತ್ತು ಮುಜುಗರ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಸಾರ್ವಜನಿಕರ ಆತಂಕ ವ್ಯಕ್ತವಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ನಿಲ್ದಾಣದ ಕಂಪೌಂಡ್ ಒಳಗೆ ಅಂಗಡಿ ಇಡಲು ಯಾವ ಅಧಿಕಾರಿಗಳು ಅನುಮತಿ ನೀಡಿದ್ದಾರೆ? ಯಾವ ನಿಯಮದಡಿ ಈ ಅಂಗಡಿಯನ್ನು ನಡೆಸಲಾಗುತ್ತಿದೆ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಅಂಗಡಿಯನ್ನು ತೆರವುಗೊಳಿಸಬೇಕು. ಅಂಗಡಿ ಇಡಲು ಅನುಮತಿ ನೀಡಿರುವ ಅಧಿಕಾರಿಗಳು ಅಥವಾ ಸಂಬಂಧಪಟ್ಟವರ ಪಾತ್ರದ ಬಗ್ಗೆ ತನಿಖೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಸಾರ್ವಜನಿಕರ ಹಿತಾಸಕ್ತಿ ಹಾಗೂ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ, ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
📲Get App