🔥 TRENDING Ramayana Surpasses Dhurandhar, Ranks 4... Ramayana Surpasses ₹8 Crore in 16 Days ED Seeks Evidence at Two Sites Linked... Minister Seethakka Lays Foundation Sto... Telangana CM Congratulates Educationis... Odisha TV airs 8PM Headlines on 19 Nov...
20 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಅದ್ದೂರಿಯಾಗಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಸ್ವಾತಂತ್ರ್ಯ ಹೋರಾಟ, ಆಡಳಿತ ಸುಧಾರಣೆ ಹಾಗೂ ಆದರ್ಶಗಳ ಕುರಿತು ಗಣ್ಯರಿಂದ ಸ್ಮರಣೆ

✍️ Reporter: Khaja Hussain 🗓 20 Nov 2026, 07:28 PM 👁 18
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿಯಲ್ಲಿ ಅದ್ದೂರಿಯಾಗಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

### ಸ್ವಾತಂತ್ರ್ಯ ಹೋರಾಟ, ಆಡಳಿತ ಸುಧಾರಣೆ ಹಾಗೂ ಆದರ್ಶಗಳ ಕುರಿತು ಗಣ್ಯರಿಂದ ಸ್ಮರಣೆ

**ಜಾಲಹಳ್ಳಿ, ನ. 20:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಶುಕ್ರವಾರ ಅದ್ದೂರಿಯಾಗಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಆಯೇಷಾ ಅವರು ಟಿಪ್ಪು ಸುಲ್ತಾನ್ ಅವರ ಜೀವನ ಮತ್ತು ಸಾಧನೆಗಳ ಕುರಿತು ಕಿರು ಪರಿಚಯ ನೀಡಿದರು. ಬಳಿಕ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಹೈದರ್ ಸಾಬ್ ಮುಲ್ಲಾ, ಕಾರ್ಯದರ್ಶಿ ಖುರ್ಶಿದ್ ಪಟೇಲ್, ಹಾಜಿ ಖಾಜಾ ಹುಸೇನ್ ಬಾಂಬೆ ಸೇಠ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋವಿಂದಪ್ಪ ಆಲಗೇರಿ ಸೇರಿದಂತೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಹಮಾನ್ ಖುರೇಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಟಿಪ್ಪು ಸುಲ್ತಾನ್ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ವೀರರಾಗಿದ್ದರು. ಅವರ ಆಡಳಿತದಲ್ಲಿ ಕೈಗೊಂಡ ವಿವಿಧ ಸುಧಾರಣೆಗಳು ಹಾಗೂ ಸಾಧನೆಗಳನ್ನು ಸ್ಮರಿಸಿದರು.

**ವಕೀಲ ವೆಂಕನಗೌಡ ಅವರ ಅಭಿಪ್ರಾಯ**

ಟಿಪ್ಪು ಸುಲ್ತಾನ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧದಲ್ಲಿ ತಮ್ಮ ಮಕ್ಕಳನ್ನೂ ಒತ್ತೆಯಿಡುವ ಪರಿಸ್ಥಿತಿ ಎದುರಿಸಿದ್ದರು. ಜಾತಿಭೇದವಿಲ್ಲದೆ ಹಲವು ಸುಧಾರಣೆಗಳನ್ನು ಕೈಗೊಂಡ ಆಡಳಿತಗಾರರಾಗಿದ್ದರು ಎಂದು ವಕೀಲ ವೆಂಕನಗೌಡ ಹೇಳಿದರು.

**ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕು: ರಂಗಣ್ಣ ಕೊಲ್ಕರ್**

ಟಿಪ್ಪು ಸುಲ್ತಾನ್ ಅವರ ಕುರಿತು ಕೆಲವರು ಅಪಪ್ರಚಾರ ಮಾಡುವ ಮೂಲಕ ತಪ್ಪು ಸಂದೇಶ ಹರಡುತ್ತಿದ್ದಾರೆ. ಇದು ಟಿಪ್ಪು ಸುಲ್ತಾನ್ ವಿರುದ್ಧ ಮಾತ್ರವಲ್ಲ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಮನೋಭಾವವಾಗಿದೆ ಎಂದು ರಂಗಣ್ಣ ಕೊಲ್ಕರ್ ಅಭಿಪ್ರಾಯಪಟ್ಟರು. ನಾವೆಲ್ಲರೂ ಸಂವಿಧಾನವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಹಾಗೂ ಟಿಪ್ಪು ಸುಲ್ತಾನ್ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.

**ಟಿಪ್ಪು ಸುಲ್ತಾನ್ ಅವರ ಸುಧಾರಣೆಗಳನ್ನು ಸ್ಮರಿಸಿದ ಗಿರಿಯಪ್ಪ ಪೂಜಾರಿ**

ಟಿಪ್ಪು ಸುಲ್ತಾನ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣವನ್ನಪ್ಪಿದವರು. ಮರಾಠರು ದಾಳಿ ಮಾಡಿದ ಶೃಂಗೇರಿ ಮಠದ ಪುನರ್‌ ಅಭಿವೃದ್ಧಿಗೆ ನೆರವಾದದ್ದು, ದಲಿತರಿಗೆ ಭೂಮಿ ಹಂಚಿಕೆ ಸೇರಿದಂತೆ ವಿವಿಧ ಸುಧಾರಣೆಗಳನ್ನು ಕೈಗೊಂಡಿದ್ದ ಅವರ ಕಾರ್ಯಗಳನ್ನು ಸ್ಮರಿಸಬೇಕು ಎಂದು ಗಿರಿಯಪ್ಪ ಪೂಜಾರಿ ಹೇಳಿದರು.

ಕಾರ್ಯಕ್ರಮವನ್ನು ಜಾಮಿಯಾ ಮಸೀದಿ ಅಧ್ಯಕ್ಷರು ಹಾಗೂ ಬಾಬಾ ಮೆಡಿಕಲ್‌ನವರು ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಧರ ದೇಸಾಯಿ, ಗೋವಿಂದಪ್ಪ ಆಲಗೇರಿ, ಭೀಮಣ್ಣ ಗುಮ್ದಾರ್, ಮಧುರಂಗ ವಟಾರ್, ಯಾಸಿನ್ ಮುಲ್ಲಾ, ಹಾಜಿ ಖಾಜಾ ಹುಸೇನ್ ಬಾಂಬೆ ಸೇಠ್, ರಂಗಣ್ಣ ಕೊಲ್ಕರ್, ವೆಂಕೋಬ ಪೂಜಾರಿ, ಶಂಕರಗೌಡ ಪಾಟೀಲ್, ಭೀಮಣ್ಣ ವಿರಗೂಟ, ರಂಗಪ್ಪ ಬಂಡಿ, ವೆಂಕನಗೌಡ ವಕೀಲರು, ಸಾಬಣ್ಣ ಹೂಗಾರ, ಶಿವು ಪಾಟೀಲ್ ಗಾಣದಾಳ, ರಾಜ್ ಮೊಹಮ್ಮದ್ ಸರ್ನೋಬತ್, ಜಾಕಿರ್ ಹುಸೇನ್ ಆರ್ತಿ, ಮುಕ್ತಾರ್ ಅಹ್ಮದ್ ಹುಸೇನ್ ನಾಸಿ, ನೂರ್ ಮೊಹಮ್ಮದ್ ಬಳಿಗೆರ್, ರಮೇಶ್ ಬಾಗೂರು, ಭೂತಪ್ಪ ದೇವರಮನೆ, ರಂಗಪ್ಪ ತೊಗರಿ, ಹುಸೇನಪ್ಪ ಗುತ್ತೇದಾರ, ಮಾನಪ್ಪ ಕಾವಲಿ, ಹೈದರ್ ಸಾಬ್ ಮುಲ್ಲಾ, ಖುರ್ಶಿದ್ ಪಟೇಲ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಮಕತುಮ್ ಪರಾಶಿ, ಬಸವರಾಜ್ ಗೋಪಾಲಪುರ, ರಂಗಪ್ಪ ಕುದುರೆ, ಕುಮಾರ್ ಚಪ್ಪಳಕಿ, ಅಬ್ದುಲ್ ರೆಹಮಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪತ್ರಕರ್ತರಾದ ಗಿರಿಯಪ್ಪ ಪೂಜಾರಿ, ಅಲಿ ಬಾಬಾ ಪಟೇಲ್, ಮೌನೇಶ್ ಜಾಲಹಳ್ಳಿ, ತಾತಪ್ಪ ನಾಯಕ, ರಾಜು ನಾಯಕ, ರಾಜ್ಯ ಕಾರ್ಮಿಕ ಮುಖಂಡ ಶಬ್ಬೀರ್ ಜಾಲಹಳ್ಳಿ, ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಮಹಾಲಿಂಗ ದೊಡ್ಮನಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ರಾಜು ನಾಯಕ, ತಾಲೂಕು ಅಧ್ಯಕ್ಷ ರಿಯಾಜ್ ಆರ್ತಿ, ಮಹೇಬುಬ್ ಪರಾಶಿ, ಮಹೇಬೂಬ್ ಕುರಕುಂದಿ, ಮುಸ್ತಫಾ ಯಾದಗಿರಿ, ಇದ್ರಿಸ್, ಇಮಾಮ್ ಸಾಬ್ ಉದ್ದಾರ್, ಜಹಿರ್ ಮೂರ್ಶೆದ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಭಾಗವಹಿಸಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App