🔥 TRENDING ಜನನುಡಿ 2026 ಕಾರ್ಯಕ್ರಮ ಸಭೆ ಹಾಗೂ ಪೋಸ್ಟರ್... Film "Merri Boys" Secures Release Wind... Manipur greets Youth Olympic gold meda... Kuki Inpi Demands Separate Administrat... Manipur approves 100‑seat medical coll... Agartala to Host NEOGSCON 2026 Women’s...
18 Nov 2026•
ગુજરાતી मराठी ਪੰਜਾਬੀ বাংলা

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ - ಸಂಸದ ಕುಮಾರ್ ನಾಯಕ ಅವರಿಂದ ಭಾವಚಿತ್ರಕ್ಕೆ ಪುಷ್ಪನಮನ - ಸತ್ಯ, ಧರ್ಮ, ತ್ಯಾಗ, ಭ್ರಾತೃತ್ವ ಮೌಲ್ಯ ಅಳವಡಿಸಿಕೊಳ್ಳಲು ಕರೆ

✍️ Reporter: Ningappa 🗓 18 Nov 2026, 09:38 PM 👁 26
Share: 💬 WhatsApp 📘 Facebook 𝕏 Post

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ - ಸಂಸದ ಕುಮಾರ್ ನಾಯಕ ಅವರಿಂದ ಭಾವಚಿತ್ರಕ್ಕೆ ಪುಷ್ಪನಮನ - ವಾಲ್ಮೀಕಿ ಸಂದೇಶಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು - ಸತ್ಯ, ಧರ್ಮ, ತ್ಯಾಗ, ಭ್ರಾತೃತ್ವವೇ ನಿಜವಾದ ಗೌರವ ಎಂದ ಸಂಸದರು

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ - ಸಂಸದ ಕುಮಾರ್ ನಾಯಕ ಅವರಿಂದ ಪುಷ್ಪನಮನ

ರಾಯಚೂರು:
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದು ಆಚರಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ರಾಯಚೂರು ಮತ್ತು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಕುಮಾರ್ ನಾಯಕ ಪಾಲ್ಗೊಂಡು, ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು.

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಅವರು, ಮಹರ್ಷಿ ವಾಲ್ಮೀಕಿಯವರು ತಮ್ಮ ಜೀವನ, ಚಿಂತನೆ, ಮಹಾಕಾವ್ಯದ ಮೂಲಕ ನೀಡಿರುವ ಸಂದೇಶಗಳನ್ನು ನಾವು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಾಲ್ಮೀಕಿಯವರು ಪ್ರತಿಪಾದಿಸಿದ ಸತ್ಯ, ಧರ್ಮ, ತ್ಯಾಗ ಮತ್ತು ಭ್ರಾತೃತ್ವದ ಮೌಲ್ಯಗಳು ಇಂದು ಅತ್ಯಂತ ಪ್ರಸ್ತುತವಾಗಿದ್ದು, ಅವುಗಳನ್ನು ಅನುಸರಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂಬುದನ್ನು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ್ ಕೆಳಗಿನಮನಿ, ಕುಲಸಚಿವರಾದ ಡಾ. ಚನ್ನಪ್ಪ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ವಿರೂಪಾಕ್ಷಯ್ಯ ಸೇರಿದಂತೆ ಆಡಳಿತ ಸಿಬ್ಬಂದಿ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
📲Get App