ಊರ ಜನರ ನಡಿಗೆ ಮಕ್ಕಳ ಕಲಿಕೆಯ ಕಡೆಗೆ ಕಾರ್ಯಕ್ರಮ
ಊರ ಜನರ ನಡಿಗೆ ಮಕ್ಕಳ ಕಲಿಕೆಯ ಕಡೆಗೆ
ಹರಿಹರ, ನವೆಂಬರ್ 18: ಸರ್ಕಾರಿ ಶಾಲಾ ಮಕ್ಕಳ ಗಣಿತ ಕಲಿಕಾ ಗುಣಮಟ್ಟ ಹಾಗೂ ಶೈಕ್ಷಣಿಕ ಪ್ರಗತಿಯನ್ನು ಸುಧಾರಿಸಲು ಪೋಷಕರು, ಯುವಕರು ಮತ್ತು ಸ್ಥಳೀಯ ಸಮುದಾಯದ ಸಕ್ರಿಯ ಸಹಭಾಗಿತ್ವ ಅತ್ಯಗತ್ಯ ಎಂದು ಅಕ್ಷರ ಫೌಂಡೇಶನ್‌ನ ಜಿಲ್ಲಾ ಕ್ಷೇತ್ರ ಸಂಯೋಜಕ ರಘು ಹೇಳಿದರು.
ತಾಲ್ಲೂಕಿನ ಕೆ. ಬೇವಿನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಫೌಂಡೇಶನ್ ಮತ್ತು ಸ್ಥಳೀಯ ಸಮುದಾಯದ ಸಹಯೋಗದಲ್ಲಿ ‘ಊರ ಜನರ ನಡಿಗೆ – ಮಕ್ಕಳ ಕಲಿಕೆಯ ಕಡೆಗೆ ಸಮುದಾಯ’ ಎಂಬ ಸಹಭಾಗಿತ್ವದ ಗಣಿತ ಚಟುವಟಿಕೆ ಕಾರ್ಯಕ್ರಮ ನಡೆಯಿತು. ಗ್ರಾಮದ ಪೋಷಕರು ಹಾಗೂ ಯುವಕರು ಸೇರಿದಂತೆ 55 ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಾತನಾಡಿದ ರಘು ಅವರು, ಸಮುದಾಯವು ಮಕ್ಕಳ ಕಲಿಕೆಯ ಜವಾಬ್ದಾರಿಯಲ್ಲಿ ಪಾಲ್ಗೊಂಡಾಗ ಶಾಲೆಯ ಕಲಿಕಾ ವಾತಾವರಣ ಮತ್ತಷ್ಟು ಬಲಪಡುತ್ತದೆ ಎಂದರು. ಮಕ್ಕಳ ಗಣಿತ ಕಲಿಕೆಯ ಮಹತ್ವ, ಪೋಷಕರ ಪಾತ್ರ ಮತ್ತು ಸಮುದಾಯದ ಸಹಭಾಗಿತ್ವದ ಬಗ್ಗೆ ಅರಿವು ಮೂಡಿಸಲು ವಿವಿಧ ಗಣಿತ ಚಟುವಟಿಕೆಗಳು ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಕ್ರಿಯವಾಗಿ ಪಾಲ್ಗೊಂಡ ಸಮುದಾಯ ಸದಸ್ಯರಿಗೆ ಅಭಿನಂದನಾ ಪ್ರಮಾಣಪತ್ರ ನೀಡಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಗಣಿತ ಕಲಿಕೆಯನ್ನು ಆಸಕ್ತಿಕರ ಮತ್ತು ಸುಲಭವಾಗಿಸುವ ಉದ್ದೇಶದಿಂದ ಅಕ್ಷರ ಫೌಂಡೇಶನ್ ಕಿಟ್‌ಗಳು ಹಾಗೂ ಸ್ಪರ್ಧೆಗಳ ಮೂಲಕ ಸಮುದಾಯ ಸಹಭಾಗಿತ್ವವನ್ನು ಉತ್ತೇಜಿಸುತ್ತಿದೆ.
ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಮಲ್ಲಮ್ಮ ಅವರು, ಪೋಷಕರು, ಯುವಕರು ಮತ್ತು ಯುವತಿಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ ಎಂದರು. ಗ್ರಾಮದ ಪ್ರತಿಯೊಬ್ಬರೂ ಮಕ್ಕಳ ಕಲಿಕೆಯ ಜವಾಬ್ದಾರಿಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅರ್ಜುನ್ ಗೌಡ, ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಶಿಕ್ಷಕರು, ಪೋಷಕರು, ಅಕ್ಷರ ಫೌಂಡೇಶನ್‌ನ ಸಂಯೋಜಕರು ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು