🔥 TRENDING Bisalpur Drinking Water Pipeline Leaks... દાહોદના ધાનપુર તાલુકામાં 66 કિ.વોલ્ટ વ... ਸ੍ਰੀ ਦਰਬਾਰ ਸਾਹਿਬ ਤਰਨ ਤਾਰਨ । Golden King Horse Worth ₹21 Crore Draw... Official Trailer of ‘Sanjog’ Unveiled... Official Trailer of 'Mr. Jack' Unveile...
16 Nov 2026•
ગુજરાતી मराठी ਪੰਜਾਬੀ বাংলা

ಮಾಜಿ ಸಂಸದ ಬಿ.ವಿ. ನಾಯಕ್ ಕಾರು ಅಪಘಾತ; ಪ್ರಾಣಾಪಾಯದಿಂದ ಪಾರು, ಮತ್ತೊಂದು ಕಾರಿನಲ್ಲಿದ್ದ ನಾಲ್ವರ ರಕ್ಷಣೆ..!

✍️ Reporter: Ningappa 🗓 16 Nov 2026, 03:17 PM 👁 23
Share: 💬 WhatsApp 📘 Facebook 𝕏 Post
ರಾಯಚೂರು: ಮಾಜಿ ಸಂಸದ ಬಿ.ವಿ. ನಾಯಕ್ ಅವರ ಕಾರು ನ.13 ತಡರಾತ್ರಿ ಎಮ್ಮೆಗೆ ಡಿಕ್ಕಿ ಹೊಡೆದ ಘಟನೆ ಮಾನ್ವಿ ತಾಲೂಕಿನ ಕುರ್ಡಿ ಕ್ರಾಸ್ ಬಳಿ ನಡೆದಿದೆ. ಅದೃಷ್ಟವಶಾತ್ ಬಿ.ವಿ. ನಾಯಕ್ ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾನ್ವಿ ಮಾರ್ಗವಾಗಿ ರಾಯಚೂರಿಗೆ ಆಗಮಿಸುತ್ತಿದ್ದ ವೇಳೆ ಕುರ್ಡಿ ಕ್ರಾಸ್ ಬಳಿ ರಸ್ತೆಗೆ ಅಡ್ಡ ಬಂದ ಎಮ್ಮೆಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನ ಸುರಕ್ಷತಾ ಸೆನ್ಸಾರ್ ವ್ಯವಸ್ಥೆಯಿಂದ ಡಿಕ್ಕಿಯ ಬಳಿಕ ಕಾರು ಸ್ಥಳದಲ್ಲೇ ಲಾಕ್ ಆಗಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎನ್ನಲಾಗಿದೆ.

ಘಟನೆಯಲ್ಲಿ ಬಿ.ವಿ. ನಾಯಕ್, ಅವರೊಂದಿಗೆ ಪ್ರಯಾಣಿಸುತ್ತಿದ್ದ ಖ್ಯಾತ ವೈದ್ಯ ನಾಗರಾಜ್ ಭಾಲ್ಕಿ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾ*ಯಗಳಾಗಿವೆ. ಇದೇ ರಸ್ತೆಯಲ್ಲಿ ಕೆಲವೇ ಹೊತ್ತಿನ ಬಳಿಕ ಮತ್ತೊಂದು ಕಾರು ಎಮ್ಮೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರು ಸಿಲುಕಿಕೊಂಡಿದ್ದು, ಇದನ್ನು ಗಮನಿಸಿದ ಬಿ.ವಿ. ನಾಯಕ್, ವೈದ್ಯ ನಾಗರಾಜ್ ಭಾಲ್ಕಿ ಹಾಗೂ ಚಾಲಕ ತಕ್ಷಣ ನೆರವಿಗೆ ಧಾವಿಸಿ ನಾಲ್ವರನ್ನು ರಕ್ಷಿಸಿದ್ದಾರೆ.

ಇಂದು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನು ಭೇಟಿಯಾಗಲು ಸಿದ್ಧರಾಗಿದ್ದ ಬಿ.ವಿ. ನಾಯಕ್ ಅವರಿಗೆ ಅಪ*ಘಾತದ ಘಟನೆ ಎದುರಾಗಿದೆ. ಈ ಘಟನೆ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
📲Get App