ದೇವದುರ್ಗ ಶಾಸಕಿ ಕರಿಯಮ್ಮ ನಿಷ್ಕ್ರಿಯ ಶಾಸಕರು - ಬರ ವೀಕ್ಷಣೆ ಮಾಡಲಿಲ್ಲ, ರೈತರ ಬಳಿ ಹೋಗಲಿಲ್ಲ, ನೀರಿನ ಸಮಸ್ಯೆ ಬಗೆಹರಿಸಲಿಲ್ಲ ಎಂದು ಪ್ರೆಸ್ ಮೀಟ್ನಲ್ಲಿ ತೀವ್ರ ಆರೋಪ - ಗಬ್ಬೂರು ರೈತರಿಗೆ ನೀರಿಲ್ಲ, ಭೂಮನಗುಂಡ ಮಲ್ಲಾಪುರಕ್ಕೆ ಕುಡಿಯುವ ನೀರಿಲ್ಲ ಎಂದು ಪ್ರಶ್ನೆ
ದೇವದುರ್ಗ ಶಾಸಕಿ ವಿರುದ್ಧ ಪ್ರೆಸ್ ಮೀಟ್ನಲ್ಲಿ ತೀವ್ರ ಆರೋಪ - ಸಕ್ರಿಯ ಶಾಸಕರಲ್ಲ, ನಿಷ್ಕ್ರಿಯ ಶಾಸಕರು ಎಂದು ಆರೋಪ - ಬರ ವೀಕ್ಷಣೆ, ರೈತರ ಭೇಟಿ, ನಾರಾಯಣಪುರ ನೀರು, ಗಬ್ಬೂರು ಕಾಲುವೆ, ಕುಡಿಯುವ ನೀರು ವಿಚಾರದಲ್ಲಿ ಪ್ರಶ್ನೆಗಳ ಸುರಿಮಳೆ - ಕೌಂಟರ್ ಕೊಡಿಸುವ ಬದಲು ಕೆಲಸದಿಂದ ಉತ್ತರ ಕೊಡಿ ಎಂದು ಆಗ್ರಹ
ದೇವದುರ್ಗ ಶಾಸಕಿ ಕರಿಯಮ್ಮ ನಿಷ್ಕ್ರಿಯ ಶಾಸಕರು ಎಂದು ಪ್ರೆಸ್ ಮೀಟ್ನಲ್ಲಿ ತೀವ್ರ ಆರೋಪ
ದೇವದುರ್ಗ: ಮಾಧ್ಯಮದ ಹಿರಿಯರಿಗೂ ಮತ್ತು ಎಲ್ಲ ಸ್ನೇಹಿತರಿಗೂ ಧನ್ಯವಾದ ಹೇಳಿ ಪ್ರೆಸ್ ಮೀಟ್ ಆರಂಭಿಸಿದ ಮುಖಂಡ ಶಿವರಾಜ ನಾಯಕ ಕೊತ್ತದೊಡ್ಡಿ ಅವರು, ಮೊನ್ನೆ ಉಸ್ತುವಾರಿ ಸಚಿವರು ಬಂದಾಗ ಶಾಸಕಿ ಕರಿಯಮ್ಮನವರು ತಾಲೂಕಿನಲ್ಲಿ ಏನು ಮಾಡಿಲ್ಲ, ಬರ ವೀಕ್ಷಣೆ ಮಾಡಲಿಲ್ಲ, ರೈತರಿಗೆ ಬೆಂಬಲ ನೀಡಲಿಲ್ಲ, ರೈತರ ಬಗ್ಗೆ ಕೆಲಸ ಮಾಡಲಿಲ್ಲ, ನಿಷ್ಕ್ರಿಯ ಶಾಸಕರು ಎಂದು ಪ್ರೆಸ್ ನೋಟ್ ಕೊಟ್ಟಿದ್ದೆ. ಅದರ ನಂತರ ಅವರ ಬೆಂಬಲಿಗರು ಪ್ರೆಸ್ ಮೀಟ್ ಮಾಡಿ ನಮ್ಮ ಶಾಸಕರು ಜನಪ್ರಿಯ ಶಾಸಕರು, ಬಹಳ ಉತ್ತಮ ಕೆಲಸ ಮಾಡಿದ್ದಾರೆ, ಸಕ್ರಿಯರಾಗಿದ್ದಾರೆ, ತಾಲೂಕು ಬಹಳ ಶಾಂತವಾಗಿದೆ ಎಂದು ಮಾಡಿದ್ದಾರೆ. ಅದಕ್ಕೆ ಇವತ್ತು ಉತ್ತರ ಕೊಡುತ್ತೇನೆ ಎಂದರು.
ಇವತ್ತು ದೇವದುರ್ಗ ತಾಲೂಕಿನಲ್ಲಿ ಶಾಸಕರು ಎಷ್ಟು ಜನಪ್ರಿಯರಾಗಿದ್ದಾರೆ, ಎಷ್ಟು ಕೆಲಸ ಮಾಡುತ್ತಿದ್ದಾರೆ ಎಂದು ಇಡೀ ಜನರಿಗೆ ಗೊತ್ತಿದೆ. ಅವರು ಸಕ್ರಿಯ ಶಾಸಕರಲ್ಲ, ನಿಷ್ಕ್ರಿಯ ಶಾಸಕರು. ಇವತ್ತು ಕೂಡ ನಾನು ಆ ಮಾತಿಗೆ ಬದ್ಧನಾಗಿದ್ದೇನೆ ಎಂದರು.
ಶಾಸಕರು ಕೆಲಸ ಮಾಡಿದ್ದಾರೆ, ರೈತಪರ ಇದ್ದಾರೆ, ಜನಪರ ಇದ್ದಾರೆ ಎಂದರೆ ಅದಕ್ಕೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ. ಜನಪರ ಶಾಸಕರು ಎಂದರೆ ಬರ ಘೋಷಣೆ ಆಯಿತು. ಬರ ಘೋಷಣೆ ಆದ ತಕ್ಷಣ ಸ್ವತಃ ಮುಖ್ಯಮಂತ್ರಿಗಳು ಹಳ್ಳಿಗಳಿಗೆ ಹೋಗಿ ಹೊಲದಲ್ಲಿ ನಿಂತು ಬರ ವೀಕ್ಷಣೆ ಮಾಡಿದರು. ಆದರೆ ನಮ್ಮ ಶಾಸಕರು ಎಲ್ಲಿದ್ದರು, ಬೆಂಗಳೂರಿನಲ್ಲಿ ಇದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಿಂತ ಜಾಸ್ತಿ ಕೆಲಸಗಳು ದೇವದುರ್ಗದ ಶಾಸಕಿ ಕರಿಯಮ್ಮನವರಿಗೆ ಇದ್ದವೇ ಎಂದು ಪ್ರಶ್ನಿಸಿದರು.
ಇವತ್ತು ಈ ತಾಲೂಕಿನಲ್ಲಿ ಯಾವ ರೈತರ ಜಮೀನುಗಳಿಗೆ ಹೋಗಿದ್ದೀರಿ. ಎಷ್ಟು ಎಕರೆ ಬಿತ್ತನೆ ಮಾಡಿದ್ದಾರೆ, ಎಷ್ಟು ಹೆಕ್ಟೇರ್ ರೈತರ ಭೂಮಿಯಲ್ಲಿ ಬಿತ್ತನೆ ಬೀಜ ಕೂಡ ವಾಪಸ್ ಬರದೇ ನಾಶ ಆಗಿದೆ, ಎಷ್ಟು ಬರಡಾಗಿದೆ ಎಂದು ಶಾಸಕರಿಗೆ ಗೊತ್ತಿದೆಯಾ. ಯಾವುದಾದರೂ ಅಧಿಕಾರಿಗಳ ಬಳಿ ಹೋಗಿ ಕೇಳಿದ್ದಾರಾ, ವರದಿ ತರಿಸಿಕೊಂಡಿದ್ದಾರಾ. ಕಣ್ಣೀರು ಹಾಕುತ್ತಿರುವ ರೈತನ ಹೊಲದಲ್ಲಿ ಹೋಗಿ ನಿಂತು ಸಾಂತ್ವನ ಹೇಳಿದ್ದಾರಾ ಎಂದು ಪ್ರಶ್ನಿಸಿದರು.
ಎಲೆಕ್ಷನ್ಗಿಂತ ಮುಂಚೆ ಶಾಸಕರು ಯಾರಾದರೂ ಗಾಡಿ ಮೇಲೆ ಹೋಗುವ ವ್ಯಕ್ತಿ ಕಂಡರೆ ಇಳಿದು ಮಾತನಾಡಿಸುತ್ತಿದ್ದರು. ಇವತ್ತು ಅದೇ ರೈತ ಕಣ್ಣೀರು ಹಾಕುತ್ತಿದ್ದಾನೆ, ತನ್ನ ಹೊಲದಲ್ಲಿ ನಿಂತಿದ್ದಾನೆ. ಶಾಸಕರು ಹಾಗೆ ತಿರುಗಿ ನೋಡದಂತೆ ಹೋಗುತ್ತಾರೆ. ಕಾರಣ ಏನು ಎಂದರೆ ಎಲ್ಲಿ ಜನರಿಗೆ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಹೇಳಿದರು.
ನೀರಾವರಿ ಬಗ್ಗೆ ಬೆಂಬಲಿಗರು ಪುಂಖಾನುಪುಂಖವಾಗಿ ಮಾತನಾಡಿದರು. ನಮ್ಮ ಶಾಸಕಿ ನೀರು ಬಿಡಿಸಿದ್ದಾರೆ ಎಂದರು. ಆ ಸಮಯದಲ್ಲಿ ಸುರಪುರದ ಮಾಜಿ ಶಾಸಕ ರಾಜು ಗೌಡರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅರ್ಜಿ ಹಾಕಿ ನೀರು ಬಿಡಿ ಎಂದು ಹೈಕೋರ್ಟ್ನಿಂದ ಆದೇಶ ತಂದರು. ಅವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀರು ಬಿಡುತ್ತೇನೆ ಎಂದು ಹೇಳಿದರು. ಅದನ್ನು ಕೇಳಿಕೊಂಡು ಅವರು ತಿರುಗಿ ರಾಯಚೂರು ಪಾದಯಾತ್ರೆ ಮಾಡುತ್ತಾರೆ. ಇದು ಯಾವ ಡ್ರಾಮಾ, ಯಾವ ರೈತನಿಗೆ ಇದರಿಂದ ಉಪಯೋಗ ಆಯಿತು. ಸರ್ಕಾರದವರು ನೀರು ಬಿಟ್ಟರೆ ಇದರಲ್ಲಿ ಇವರೇನು ದೊಡ್ಡ ಸಾಧನೆ ಇದೆ ಎಂದು ಪ್ರಶ್ನಿಸಿದರು.
ನಾರಾಯಣಪುರ ನೀರು ಬಿಡಿಸೋಕೆ ಮೊನ್ನೆ ರೈತರು ಮಂಡಕಲ್ನಲ್ಲಿ ಕುಳಿತು ಪ್ರತಿಭಟನೆ ಮಾಡಿದರು. ಶಾಸಕರು ಎಲ್ಲಿ ಇದ್ದರು. ದೇವದುರ್ಗದ ಶಾಸಕರು ಬೆಂಗಳೂರಿನಲ್ಲಿ ಇರುವಂತಹ ಶಾಸಕರು ಎಂದು ಜನರಿಗೆ ಗೊಂದಲ ಇದೆ. ತಿಂಗಳಲ್ಲಿ 20-25 ದಿನ ಅವರು ಬೆಂಗಳೂರಿನಲ್ಲಿ ಇರುತ್ತಾರೆ ಎಂದರು.
ಬೆಂಗಳೂರಿನಲ್ಲಿ ಯಾವ ಮಂತ್ರಿಗಳ ಹತ್ತಿರ ಹೋಗಿ ನಮ್ಮ ತಾಲೂಕಿಗೆ ಅನುದಾನ ಕೊಡಿ ಎಂದು ಕೇಳಿದ್ದಾರೆ. ಬರ ಪರಿಹಾರದ ದಿನ ಅಜಯ್ ಸಿಂಗ್ ಬಂದಾಗ ಅವರ ಜೊತೆ ಹೋಗಿ ಫೋಟೋ ಪೋಸ್ ಕೊಟ್ಟು ಬಂದರು. ಇವರು ಸ್ವತಃ ತಾಲೂಕಿನಲ್ಲಿ ಎಲ್ಲಿ ಓಡಾಡಿದರು, ಎಲ್ಲಿ ಜನರ ಕಷ್ಟ ಕೇಳಿದರು ಎಂದು ಪ್ರಶ್ನಿಸಿದರು.
ನೀರಿನ ವಿಷಯಕ್ಕೆ ಬಂದರೆ, ನಾರಾಯಣಪುರ ನೀರು ಬಂದರೆ ಅಲ್ಲಿ ಡಿಸ್ಟ್ರಿಬ್ಯೂಟರ್ಗಳು ಒಡೆದು ಹೋಗಿವೆ, ಅದರಲ್ಲಿ ನೀರೇ ಹೋಗುತ್ತಿಲ್ಲ. ಆದರೆ ನೋಡಿಯೂ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಶಾಸಕರು ಯಾಕೆ ಕುಳಿತಿದ್ದಾರೆ, ಇದು ಅವರಿಗೆ ಕಾಣುವುದಿಲ್ಲವೇ, ಇದು ರೈತರ ಸಮಸ್ಯೆ ಅಲ್ಲವೇ. ಅಧಿಕಾರಿಗಳ ಜೊತೆ ಏನಾದರೂ ಸೇರಿಕೊಂಡಿದ್ದಾರಾ. ಕಾಲುವೆ ಸ್ವಚ್ಛ ಮಾಡದೇ ನೀರು ಬಿಡುತ್ತಾರೆ ಎಂದರೆ ಪರಿಸ್ಥಿತಿ ಏನು. ಗಬ್ಬೂರಿನ ಕಡೆಯ 16, 17, 18ನೇ ಬುಟ್ಟಿಗೆ ನೀರು ಹೋಗುವುದಿಲ್ಲ. ಗಬ್ಬೂರು ರೈತರು ಸಾಯುತ್ತಾರೆ. ಗಬ್ಬೂರು ರೈತರು ಯಾವಾಗಲೂ ಕಣ್ಣೀರಲ್ಲಿ ಕೈ ತೊಳೆಯುತ್ತಾರೆ. ನೀರು ಬಿಟ್ಟು ಈ ಭಾಗಕ್ಕೆಲ್ಲ ನೀರಾದರೆ ಗಬ್ಬೂರು ರೈತರಿಗೆ ನೀರಾಗುವುದಿಲ್ಲ. ಅದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಮಾನ್ಯ ಶಾಸಕರೇ, ಸಕ್ರಿಯ ಶಾಸಕರೇ, ನೀವು ನಿಷ್ಕ್ರಿಯ ಶಾಸಕರು ಎಂದರು.
ಎರಡು-ಮೂರು ವರ್ಷದ ಕೆಳಗೆ ಅಧಿಕಾರಕ್ಕೆ ಬಂದಿರಲಿಲ್ಲ, ಅವಾಗ ಒಣಕುಣಿ ಕ್ರಾಸ್ಗೆ ಪಾದಯಾತ್ರೆ ಮಾಡಿದ್ದೀರಿ. ಕೊದಡಿಯಿಂದ ಕಾಲುವೆ ಮಾಡಿ ಹೋಗುವ ಚಾನೆಲ್ ನಾನು ಮಾಡುತ್ತೇನೆ ಎಂದಿದ್ದೀರಿ. ಇವತ್ತು ಪೊಗಡ್ಡಿಯಿಂದ ಹೋಗುವ ಹತ್ತು ಸಾವಿರ ಎಕರೆ ನೀರಾವರಿ ಆಗುತ್ತೆ, ಅದರ ಬಗ್ಗೆ ಇವತ್ತು ಒಂದು ಮಾತಾಡುತ್ತಿಲ್ಲ. ಇವತ್ತು ಅಧಿಕಾರದ ಅವಧಿ ಮುಗಿಯೋಕೆ ಬಂದಿದೆ, ನೀವು ರೈತಪರನಾ, ರೈತರ ಜೊತೆಗೆ ಇದ್ದೀರಾ ಎಂದು ಪ್ರಶ್ನಿಸಿದರು.
ಭೂಮನಗುಂಡ, ಮಲ್ಲಾಪುರ ರೈತರ ಪರಿಸ್ಥಿತಿ ಏನಾಗಿದೆ ಎಂದರೆ ಕುಡಿಯೋಕೆ ನೀರಿಲ್ಲ. ಅಲ್ಲೇನಾದರೂ ನೀವು ಹೋಗಿದ್ದೀರಾ, ಕುಡಿಯುವ ನೀರಿನ ಬಗ್ಗೆ ಅವರಿಗೆ ಏನಾದರೂ ಸಹಾಯ ಮಾಡಿದ್ದೀರಾ, ಭರವಸೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ನಿಮ್ಮನ್ನು ಪ್ರಶ್ನೆ ಮಾಡಿದವರಿಗೆ ಕೆಲಸದ ಮೂಲಕ ಉತ್ತರ ಕೊಡುವುದಿಲ್ಲ, ನೀವು ಕೌಂಟರ್ ಕೊಡಿಸುತ್ತೀರಿ. ಅದಕ್ಕೆ ನಾವು ಎಂಥವರಿಗೂ ಹೆದರಿಲ್ಲ. ನಿಮ್ಮಂತವರಿಗೆಲ್ಲ ಹೆದರುವ ಪ್ರಶ್ನೆ ಇಲ್ಲ. ರಾಜಕಾರಣದಲ್ಲಿ ಬೆಳೆಯುತ್ತಿರುವ ಶಿಶು. ಎಂಥೆಂಥ ಹೆಬ್ಬಂಡೆಗಳು, ದೊಡ್ಡ ದೊಡ್ಡ ಮರಗಳು ರಾಜಕಾರಣದಲ್ಲಿ ಜನಗಳನ್ನು ನಿರ್ಲಕ್ಷ ಮಾಡಿದವರು, ದುರಂಕಾರ ತೋರಿದವರು ಬಿದ್ದು ಹೋಗಿದ್ದಾರೆ. ಅದೇ ರೀತಿ ರಾಜಕಾರಣದಲ್ಲಿ ಎಲ್ಲವೂ ಅಧಿಕಾರ ಇದ್ದಾಗ ನಡೆಯುತ್ತದೆ. ಆಮೇಲೆ ಜನ ಅದನ್ನು ತೀರ್ಮಾನ ಮಾಡುತ್ತಾ ಹೋಗುತ್ತಾರೆ ಎಂದರು.
ಇದೆಲ್ಲ ವಿಷಯಕ್ಕೆ ಸಂಬಂಧಪಟ್ಟಂತೆ ಅವರ ವಕ್ತಾರ ಗೋವಿಂದರಾಜ್ ನಾಯಕ್ ಚಿಕ್ಕಗುಡ್ಡ ಅವರು ಹೇಳಿದ್ದಾರೆ. ಸುಮ್ಮ ಸುಮ್ಮನೆ ಆರೋಪ ಮಾಡುತ್ತೇವೆ, ಆ ಶಾಸಕರ ಬಗ್ಗೆ ಮಾತನಾಡಿ ನಾನು ದೊಡ್ಡವನು ಆಗಬೇಕು ಎಂದು ಬಯಸಿದ್ದೇನೆ ಎಂದು ಹೇಳಿದ್ದಾರೆ. ಶಾಸಕರ ಬಗ್ಗೆ ಮಾತನಾಡಿ ನಾನು ದೊಡ್ಡವನಾಗುವುದಕ್ಕೆ ನಿಮ್ಮ ಶಾಸಕರೇನು ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ತರನಾ, ಅಥವಾ ಈಗ ಇರುವ ನರೇಂದ್ರ ಮೋದಿ ಅವರ ತರನಾ, ಅವರ ವಿರುದ್ಧ ಮಾತಾಡಿ ನಾನು ದೊಡ್ಡವನಾಗೋಕೆ ಎಂದು ಪ್ರಶ್ನಿಸಿದರು.
ನೀವು ಪಂಚಾಯತಿಗೆ ನಿಂತರು ಗೆಲ್ಲುವುದಿಲ್ಲ, ಯೋಗ್ಯತೆ ಇಲ್ಲ ಎಂದು ಗೋವಿಂದರಾಜ್ ಚಿಕ್ಕಗುಡ್ಡ ಹೇಳುತ್ತೀರಿ. ಸರಿ, ನಾನು ಇವತ್ತಿನವರೆಗೂ ಚುನಾವಣೆ ರಾಜಕಾರಣ ಮಾಡಿಲ್ಲ. ಸಮಯ ಬಂದರೆ ಮಾಡುತ್ತೇನೆ. ಆದರೆ ಕಳೆದ ಪಂಚಾಯತ್ ಚುನಾವಣೆಯಲ್ಲಿ ಮೂರನೇ ವಾರ್ಡ್ಗೆ ನಿಂತು ನಾಲ್ಕು ವೋಟ್ ತಗೊಂಡ್ರಿ ನೀವು ಚಿಕ್ಕಪುಟ್ಟ ಗೋವಿಂದರಾಜ್ ನಾಯಕ್, ಇದು ನಿಮ್ಮ ಯೋಗ್ಯತೆನಾ. ಆಮೇಲೆ ನೀವು ಮತ್ತು ನಿಮ್ಮ ಶಾಸಕರು ಅಧಿಕಾರಕ್ಕೆ ಬಂದಿರುವ ಹೊಸತರಲ್ಲಿ ಸಂಘಕ್ಕೆ 11 ಜನ ಅಭ್ಯರ್ಥಿಗಳನ್ನು ಹಾಕಿದ್ದೀರಿ, ನಿಮ್ಮ ಶಾಸಕರು ನೀವು ನಾವು ಗೆಲ್ಲುತ್ತೇವೆ ಎಂದರು. ಎಷ್ಟು ಗೆದ್ದರಿ, ಬರಿ ಒಂದೇ ಒಂದು ಅಭ್ಯರ್ಥಿ ಮಾತ್ರ ಗೆದ್ದರು. ಅದು ನಿಮ್ಮ ಯೋಗ್ಯತೆ. ನನ್ನ ಯೋಗ್ಯತೆ ಕೇಳಬೇಕಾದರೆ ನಿಮ್ಮ ಯೋಗ್ಯತೆ, ನನ್ನ ಯೋಗ್ಯತೆ ಕೊತದಡ್ಡಿ ಜನ ಮತ್ತು ಈ ತಾಲೂಕಿನ ಜನರಿಗೆ ಗೊತ್ತಿದೆ. ಯಾರ ಯಾರ ಯೋಗ್ಯತೆಯನ್ನು ಹೊರಗಿಡೋಣ, ಅವರೇ ನಿರ್ಧಾರ ಮಾಡುತ್ತಾರೆ ಎಂದರು.
ಇವತ್ತು ರಾಜಕಾರಣದಲ್ಲಿ ರಾಜಕಾರಣ ಗೊತ್ತಿಲ್ಲ ಎನ್ನುತ್ತೀರಾ. ನಾವು ರಾಜಕಾರಣ ಗೊತ್ತಿಲ್ಲದೇ ಹೃದಯದಿಂದ ರಾಜಕಾರಣ ಮಾಡುತ್ತೇವೆ. ನಿಮ್ಮಂತಹ ವಿಚಾರಗಳನ್ನು ಬದಲಾಯಿಸುವುದು, ಏನೇನೋ ಹೇಳುವುದು ರಾಜಕಾರಣ ಮಾಡುವುದಿಲ್ಲ. ಇವತ್ತು ಶಾಸಕರು ವಿರೋಧ ಮಾಡುತ್ತಾರೆ, ಪಕ್ಷ ಕಟ್ಟುವವನ ಹೆಸರಲ್ಲಿ ಶಾಸಕರಿಗೆ ವಿರೋಧ ಮಾಡುತ್ತಾರೆ, ರಾಜಕಾರಣ ಮಾಡುತ್ತಾರೆ, ಈ ನಾಟಕ ಮಾಡಬಾರದು ಎಂದು ಗೋವಿಂದರಾಜ್ ಕೂಡ ಹೇಳಿದ್ದೀರಿ. ನಾವು ವಿರೋಧವನ್ನು ಶಾಸಕರಿಗೆ ಎದುರು ಮಾಡುತ್ತೇವೆ, ಇಡೀ ತಾಲೂಕಿಗೆ ಗೊತ್ತಿದೆ. ಆ ವಿಷಯವನ್ನು ಕುಮಾರಣ್ಣನವರಿಗೆ ತಿಳಿಸಿದ್ದೇವೆ. ಶಾಸಕರು ಕೆಲಸ ಮಾಡುತ್ತಿಲ್ಲ ಎಂದು ನಾವು ವಿರುದ್ಧ ಹೊರಗಡೆನೇ ಇದ್ದೇವೆ, ಎಲ್ಲರಿಗೂ ಗೊತ್ತಿದೆ. ನಾವು ನಾಟಕ ಮಾಡುವ ಅವಶ್ಯಕತೆ ಇಲ್ಲ ಎಂದರು.
ನೀವು ಗೋವಿಂದರಾಜ್ ಬೆಳಿಗ್ಗೆ ಕರಿಯಮ್ಮನವರ ಮನೆ ಹತ್ತಿರ ಇರುತ್ತೀರಿ, ಸಂಜೆ ಕಾಂಗ್ರೆಸ್ ನಾಯಕರ ಮನೆಗೆ ಹೋಗುತ್ತೀರಿ. ಕಾಂಗ್ರೆಸ್ ಬಾಗಿಲು ತೆರೆದಿಲ್ಲ, ಅದಕ್ಕೆ ನೀವು ಅಲ್ಲಿಗೆ ಹೋಗಿಲ್ಲ. ನೀವು ರಾಜಕೀಯ ಪಾಠ ಮತ್ತು ರಾಜಕೀಯ ನಾಟಕದ ಬಗ್ಗೆ ನಮಗೆ ಹೇಳುತ್ತಿರುವುದು. ನಿಮ್ಮ ನಾಟಕ, ನಿಮ್ಮ ರಾಜಕೀಯ ನಡೆಗಳು ಎಲ್ಲರಿಗೂ ಗೊತ್ತಿದೆ, ಪ್ರಶ್ನಾರ್ಹವಾಗಿದೆ. ಇದನ್ನು ನೆನಪಿಟ್ಟುಕೊಂಡು ಮಾತಾಡಬೇಕು. ಸುಮ್ಮನೆ ಮಾತಾಡುವುದಲ್ಲ, ಮಾತು ಬರುತ್ತದೆ ಎಂದು ಮಾತಾಡುವುದಲ್ಲ. ವಿಚಾರಗಳನ್ನು ಎತ್ತರಿಸಬೇಕು ಹೊರತು ಧ್ವನಿಯನ್ನು ಅಲ್ಲ. ವಿಚಾರಗಳನ್ನು ಎತ್ತರಿಸಿದರೆ ವಿವೇಕ ಬರುತ್ತದೆ, ಅದು ಸರಿ ಹೋಗುತ್ತದೆ. ಧ್ವನಿಯನ್ನು ಎತ್ತರಿಸಿದರೆ ಯಾರು ಇಲ್ಲಿ ಹೆದರುವವರು ಇಲ್ಲ, ಅದನ್ನು ನೀವು ತಿಳಿದುಕೊಳ್ಳಿ ಎಂದರು.
ಮಾನ್ಯ ಶಾಸಕರೇ ನೀವು ಹೇಳುತ್ತೀರಿ, ಯಾರಾದರೂ ನಿಮಗೆ ಪ್ರೆಸ್ ಮೀಟ್ ಮಾಡಿದರೆ ಕೌಂಟರ್ ಕೊಡಿಸುತ್ತೇನೆ. ನೀವು ಗಾಜಿನ ಮನೆಯಲ್ಲಿ ಕುಳಿತಿದ್ದೀರಿ. ಇವತ್ತು ಗಾಜಿನ ಮನೆಯಲ್ಲಿ ಕುಳಿತುಕೊಂಡು ಕಲ್ಲಿನ ಮನೆ ಕಡೆ ಕಲ್ಲು ಎಸೆಯುತ್ತಿದ್ದೀರಿ. ನೀವು ನೆನಪಿಟ್ಟುಕೊಳ್ಳಿ, ನಾನು ಮನೆ ಮಗಳು, ಬಡ ಶಾಸಕಿ, ಎರಡು ಎಕರೆ ಹೊಲ ಇದೆ, ನನಗೆ ಜನ ಕೊಟ್ಟಿರುವ ಸೀರೆಗಳು ಎಷ್ಟು ಇದಾವೆ, ಇಷ್ಟು ಬಿಟ್ಟರೆ ನನ್ನ ಹತ್ತಿರ ಏನು ಇಲ್ಲ ಎಂದು ಹೇಳುತ್ತೀರಿ. ನೀವು ಈಗ ಇರುವ ಮನೆಯಿಂದಲೇ 5-6 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟುತ್ತಾ ಇದ್ದೀರಿ, ಅದು ಯಾರಪ್ಪನ ದುಡ್ಡು. ಈ ದೇವದುರ್ಗ ತಾಲೂಕಿನ ಜನರ ಹತ್ತಿರ ಲೂಟಿ ಹೊಡೆದ ದುಡ್ಡು ಅಲ್ವೇ. ನಿಮ್ಮದೇನು ಕಂಪನಿ, ತಾತ ಮೈಸೂರು ಮಹಾರಾಜರು ಇದ್ದಾರಾ, ಏನಾದರೂ ಆಸ್ತಿ ಪಾಸ್ತಿಗಳು ಇದಾವಾ ಎಂದು ದೊಡ್ಡ ಮನೆ ಕಟ್ಟೋಕೆ, ಅದಕ್ಕೆ ಉತ್ತರ ಕೊಡಿ ಎಂದರು.
ಅದರ ಬಗ್ಗೆ ಜನಗಳಿಗೆ ಗೊತ್ತಿದೆ. ಜನಪ್ರಿಯ ಶಾಸಕರು ಯಾರು, ನಿಷ್ಕ್ರಿಯ ಶಾಸಕರು ಯಾರು, ಅವರನ್ನು ಪ್ರಶ್ನೆ ಮಾಡುವವರಿಗೆ ಏನು ಯೋಗ್ಯತೆ ಇದೆ, ಅವರಿಂದ ಮಾತಾಡುವ ಯೋಗ್ಯತೆ ಏನಿದೆ ಎಂದು ಹೇಳಿ. ಇದನ್ನು ನೆನಪಿಟ್ಟುಕೊಂಡು ಹೋದರೆ ಒಳ್ಳೆಯ ರಾಜಕಾರಣ ಆಗುತ್ತದೆ. ಇಲ್ಲ ಎಂದರೆ ಮುಂಚೆ ಹೋಗಿರುವ ದುರಂತ ನಾಯಕರ ತರನೇ ನೀವು ಹರಕೊಂಡು ಹೋಗುತ್ತೀರಿ. ರಾಜಕಾರಣಕ್ಕೆ ವ್ಯಕ್ತಿಗಳು ಮುಖ್ಯ ಅಲ್ಲ, ರಾಜಕಾರಣದಲ್ಲಿ ಹೆಸರು ಮಾತ್ರ ಉಳಿಯುತ್ತದೆ. ಕೆಲಸ ಮಾಡಿದವರು ಹೆಸರು ಉಳಿಯುತ್ತದೆ. ಎಂಥೆಂಥವರು ದೇವದುರ್ಗ ರಾಜಕಾರಣದಲ್ಲಿ ಜನಗಳನ್ನು ತಿರಸ್ಕರಿಸಿದವರು, ಜನಗಳನ್ನು ತುಳಿದು ಹೋದವರು ಯಾರು ಉಳಿದಿಲ್ಲ, ಅದನ್ನು ನೀವು ನೆನಪಿಟ್ಟುಕೊಂಡು ರಾಜಕಾರಣ ಮಾಡಿ ಎಂದು ಹೇಳುತ್ತೇನೆ ಎಂದರು.