🔥 TRENDING तंबौर क्षेत्र में बड़ी दुर्घटना, तीन ल... Woman Falls from Pushpak Express Near... नाचना ग्राम पंचायत: सरपंच नामांकन के द... बलिया के नगरा थाना में गौवापार गाँव मे... भोर तालुक्यातील काकड आरतीचा मधुर स्वर,... रंजीत यादव जी
15 Nov 2026•
ગુજરાતી मराठी ਪੰਜਾਬੀ বাংলা

ದತ್ತು ಸಂಸ್ಥೆಯ ಇಬ್ಬರು ಮಕ್ಕಳಿಗೆ ‘ಅನುಗ್ರಹ’ ಮತ್ತು ‘ಆಶೀರ್ವಾದ’ ಎಂದು ನಾಮಕರಣ ಮಾಡಿದ ಜಿಲ್ಲಾಧಿಕಾರಿ ಪೂವಿತಾ ಎಸ್. - ಪ್ರತಿಯೊಂದು ಮಗುವಿಗೂ ಪ್ರೀತಿ, ಆರೈಕೆ, ಶಿಕ್ಷಣ, ಸುರಕ್ಷಿತ ವಾತಾವರಣ ಒದಗಿಸುವುದು ಸಮಾಜದ ಜವಾಬ್ದಾರಿ

✍️ Reporter: Ningappa 🗓 15 Nov 2026, 11:21 AM 👁 22
Share: 💬 WhatsApp 📘 Facebook 𝕏 Post

ದತ್ತು ಸಂಸ್ಥೆಯ ಇಬ್ಬರು ಮಕ್ಕಳಿಗೆ ನಾಮಕರಣ - ಗಂಡು ಮಗುವಿಗೆ ‘ಅನುಗ್ರಹ’, ಹೆಣ್ಣು ಮಗುವಿಗೆ ‘ಆಶೀರ್ವಾದ’ ಎಂದು ನಾಮಕರಣ ಮಾಡಿದ ಜಿಲ್ಲಾಧಿಕಾರಿ ಪೂವಿತಾ ಎಸ್. - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಕಾರ್ಯಕ್ರಮ

ದತ್ತು ಸಂಸ್ಥೆಯ ಇಬ್ಬರು ಮಕ್ಕಳಿಗೆ ‘ಅನುಗ್ರಹ’ ಮತ್ತು ‘ಆಶೀರ್ವಾದ’ ಎಂದು ನಾಮಕರಣ ಮಾಡಿದ ಜಿಲ್ಲಾಧಿಕಾರಿ ಪೂವಿತಾ ಎಸ್.

ರಾಯಚೂರು: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ, ಸರ್ಕಾರಿ ವಿಶೇಷ ದತ್ತು ಸಂಸ್ಥೆಯ ಆರೈಕೆಯಲ್ಲಿರುವ ಇಬ್ಬರು ಮಕ್ಕಳಿಗೆ ನಾಮಕರಣ ಮಾಡುವ ವಿಶೇಷ ಕಾರ್ಯಕ್ರಮವನ್ನು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ಪೂವಿತಾ ಎಸ್. ಅವರು ಪಾಲಕರ ಆರೈಕೆಯಿಂದ ವಂಚಿತರಾಗಿ ಸರ್ಕಾರಿ ವಿಶೇಷ ದತ್ತು ಸಂಸ್ಥೆಯ ಆಶ್ರಯದಲ್ಲಿರುವ ಒಂದು ಗಂಡು ಮಗು ಹಾಗೂ ಒಂದು ಹೆಣ್ಣು ಮಗುವಿಗೆ ಕ್ರಮವಾಗಿ ‘ಅನುಗ್ರಹ’ ಮತ್ತು ‘ಆಶೀರ್ವಾದ’ ಎಂದು ನಾಮಕರಣ ನೆರವೇರಿಸಿ, ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರತಿಯೊಂದು ಮಗುವಿಗೂ ಪ್ರೀತಿ, ವಾತ್ಸಲ್ಯ, ಸಮರ್ಪಕ ಆರೈಕೆ, ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣ ಹಾಗೂ ಸುರಕ್ಷಿತ ವಾತಾವರಣ ಒದಗಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವುದರ ಜೊತೆಗೆ, ಅವರ ಹಕ್ಕುಗಳ ರಕ್ಷಣೆ ಮತ್ತು ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಹಾಗೂ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಮಕ್ಕಳ ಪಾಲನೆ, ಪೋಷಣೆ, ಆರೋಗ್ಯ ಮತ್ತು ಆರೈಕೆಗೆ ವಿಶೇಷ ಕಾಳಜಿ ವಹಿಸುತ್ತಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆಯ ಅಧೀಕ್ಷಕರು ಹಾಗೂ ಸಂಸ್ಥೆಯ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿ, ಮಕ್ಕಳಿಗೆ ಉತ್ತಮ ಆರೈಕೆ ಒದಗಿಸುತ್ತಿರುವುದನ್ನು ಪ್ರಶಂಸಿಸಿದರು.

ಪ್ರತಿಯೊಂದು ಮಗುವಿಗೂ ಪ್ರೀತಿ, ಆರೈಕೆ, ಪೋಷಣೆ, ಗುಣಮಟ್ಟದ ಶಿಕ್ಷಣ, ಗೌರವಯುತ ಬಾಲ್ಯ, ಸುರಕ್ಷಿತ ಪರಿಸರ, ಸಮಾನ ಅವಕಾಶಗಳು ಹಾಗೂ ಉಜ್ವಲ ಭವಿಷ್ಯ ದೊರೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.
📲Get App