🔥 TRENDING Girdhar pura riport લાભ પાંચમને શુભેચ્છાઓ Saqib Khan Sees Pakistan to Victory wi... IMD Issues Yellow Rain Warning for Thr... IMD Warns of Heavy Rain, Storms and Sn... सफाई अभियान ग्राम पंचायत रावत आबादी सर...
13 Nov 2026•
ગુજરાતી मराठी ਪੰਜਾਬੀ বাংলা

#ಬಾಗಲಕೋಟೆ #ಲೋಕಾಯುಕ್ತದಾಳಿ #ಪಟ್ಟಣಪಂಚಾಯಿತಿ #ಅಧಿಕಾರಿಗಳಪರಿಶೀಲನೆ #ಸಾರ್ವಜನಿಕದೂರು

✍️ Reporter: Banneppa Kuntoji 🗓 13 Nov 2026, 06:54 AM 👁 10
Share: 💬 WhatsApp 📘 Facebook 𝕏 Post
ಬಾಗಲಕೋಟೆ ಜಿಲ್ಲೆಯ 6 ಪಟ್ಟಣ ಪಂಚಾಯಿತಿಗಳ ಮೇಲೆ ಲೋಕಾಯುಕ್ತ ದಾಳಿ; ದಾಖಲೆಗಳ ಪರಿಶೀಲನೆ..!!

ಬಾಗಲಕೋಟೆ: ಜಿಲ್ಲೆಯ ಆರು ಪಟ್ಟಣ ಪಂಚಾಯಿತಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಶಿರೂರು, ಲೋಕಾಪುರ, ಕೆರೂರು, ಕಮತಗಿ, ಬೀಳಗಿ ಮತ್ತು ಬೆಳಗಲಿ ಪಟ್ಟಣ ಪಂಚಾಯಿತಿ ಕಚೇರಿಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಸಾರ್ವಜನಿಕರ ದೂರುಗಳು ಹಾಗೂ ಅರ್ಜಿದಾರರ ಮನವಿಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸಾರ್ವಜನಿಕ ಸೇವೆ ಒದಗಿಸುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಕರ್ತವ್ಯಲೋಪವಾಗಿದೆಯೇ ಎಂಬ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಇಬ್ಬರು ಡಿವೈಎಸ್ಪಿ, 9 ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಒಟ್ಟು 41 ಅಧಿಕಾರಿಗಳು ಹಾಗೂ ಸಿಬ್ಬಂದಿ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
📲Get App