ತಾಯಿಯ ಶ್ರಮಕ್ಕೆ ಮಗಳ ಸಾಧನೆಯೇ ಪ್ರತಿಫಲ! - ಕಟು ಬಡತನದಲ್ಲಿ ಕೂಲಿ ಕೆಲಸ ಮಾಡಿ ಮಗಳನ್ನು ಓದಿಸಿದ ತಾಯಿ ಯಲ್ಲಮ್ಮ - ಪೊಲೀಸ್ ಇಲಾಖೆಗೆ ಆಯ್ಕೆಯಾದ ಮಗಳು ಹುಲಿಗೆಮ್ಮ
ತಾಯಿಯ ಶ್ರಮಕ್ಕೆ ಮಗಳ ಸಾಧನೆಯೇ ಪ್ರತಿಫಲ - ಕೂಲಿ ಕೆಲಸ ಮಾಡಿ ಮಗಳನ್ನು ಓದಿಸಿದ ತಾಯಿ ಯಲ್ಲಮ್ಮ - ಪೊಲೀಸ್ ಇಲಾಖೆಗೆ ಆಯ್ಕೆಯಾದ ಚೆಕ್ಕಬೂದೂರು ಗ್ರಾಮದ ಮಗಳು ಹುಲಿಗೆಮ್ಮ - ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ ಯುವತಿ
ತಾಯಿಯ ಶ್ರಮಕ್ಕೆ ಮಗಳ ಸಾಧನೆಯೇ ಪ್ರತಿಫಲ!
ರಾಯಚೂರು: ಬಡತನ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಚಿಕ್ಕಬೂದೂರು ಗ್ರಾಮದ ಹುಲಿಗೆಮ್ಮ ಎಂಬ ಯುವತಿ ತನ್ನ ಪರಿಶ್ರಮದ ಮೂಲಕ ಸಾಬೀತುಪಡಿಸಿದ್ದಾರೆ.
ಕಡು ಬಡತನದ ಕುಟುಂಬದಲ್ಲಿ ಜನಿಸಿದ ಹುಲಿಗೆಮ್ಮ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಜೀವನದಲ್ಲಿ ಮುಂದೆ ಸಾಧನೆ ಮಾಡಬೇಕೆಂಬ ಕನಸನ್ನು ತಾಯಿ ಯಲ್ಲಮ್ಮ ಅವರು ಕಂಡಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದರೂ ಎದೆಗುಂದದ ತಾಯಿ ಯಲ್ಲಮ್ಮ ಅವರು ದಿನನಿತ್ಯ ಕೂಲಿ ಕೆಲಸ ಮಾಡಿ ಬೆವರು ಸುರಿಸಿ ದುಡಿದು ಮಗಳಿಗೆ ಶಿಕ್ಷಣ ಕೊಡಿಸಿದರು.
ತಾಯಿಯ ಕಷ್ಟ, ತ್ಯಾಗ ಮತ್ತು ಪರಿಶ್ರಮವನ್ನು ಅರಿತು ಹುಲಿಗೆಮ್ಮ ಅವರೂ ಕೂಡ ವಿದ್ಯಾಭ್ಯಾಸದ ಜೊತೆಗೆ ತನ್ನ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ ಮಾಡಿದರು. ಕೊನೆಗೂ ಪೊಲೀಸ್ ಇಲಾಖೆಗೆ ಆಯ್ಕೆಯಾಗುವ ಮೂಲಕ ತಾಯಿಯ ಕನಸನ್ನು ನನಸಾಗಿಸಿದ್ದಾರೆ.
ಈ ಸಾಧನೆ ಕೇವಲ ಒಂದು ಕುಟುಂಬದ ಸಂತೋಷವಲ್ಲ, ಇದೇ ಚೆಕ್ಕಬೂದೂರು ಗ್ರಾಮದ ಹೆಮ್ಮೆಯ ಸಂಗತಿಯಾಗಿದ್ದು, ಬಡತನದ ನಡುವೆಯೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಪೋಷಕರಿಗೆ ಹಾಗೂ ಗುರಿ ಸಾಧಿಸಲು ಕನಸು ಕಾಣುತ್ತಿರುವ ಯುವಜನತೆಗೆ ಈ ತಾಯಿ-ಮಗಳ ಯಶೋಗಾಥೆ ಮಾದರಿಯಾಗಿದೆ.
ತಾಯಿಯ ಬೆವರಿನ ಹನಿಗಳಿಗೆ ಮಗಳ ಸಾಧನೆಯೇ ಉತ್ತರವಾಗಿದೆ.