🔥 TRENDING ଶ୍ରୀମନ୍ଦିର ରାମ୍ପକୁ ନେଇ ବଢ଼ିଲା ଚର୍ଚ୍ଚା;... ନୂଆପଡ଼ାରେ ପୁଣି ବାଘ ଆତଙ୍କ, ଘର ଅଗଣାରୁ ପୋ... बाबूलाल परिहार और उनके दो पुत्रों ने ब... ଡିସେମ୍ବର ୧୫ରୁ ଭୁବନେଶ୍ୱରରେ ଅନ୍ତର୍ଜାତୀୟ... ସ୍ୱଚ୍ଛତା ରାଙ୍କିଂରେ ନୂଆ ରେକର୍ଡ: ଦେଶର ଏକ... ବାତ୍ୟା ‘ଅର୍ଣ୍ଣବ’ ଓ ବନ୍ୟାରେ କ୍ଷତିଗ୍ରସ୍ତ...
12 Nov 2026•
ગુજરાતી मराठी ਪੰਜਾਬੀ বাংলা
Local

ಕೇಂದ್ರ ಸಚಿವರು ಗುದ್ದಲಿ ಪೂಜೆಯಲ್ಲಿ ವಸಂತನರಸಾಪುರದ ಆದರ್ಶ ಕಂಪನಿಯ ಹೊಸ ಘಟಕಕ್ಕೆ ಚಾಲನೆ

✍️ Reporter: GIRISHA B 🗓 12 Nov 2026, 01:06 PM 👁 6
Share: 💬 WhatsApp 📘 Facebook 𝕏 Post

ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆದರ್ಶ ಕಂಪನಿಯ ಹೊಸ ಘಟಕಕ್ಕೆ ಗುದ್ದಲಿ ಪೂಜಾ ಕಾರ್ಯಕ್ರಮ ನಡೆಯಿತು, ಇದರಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಹಾಜರಾಗಿ ಘಟಕಕ್ಕೆ ಚಾಲನೆ ನೀಡಿದರು.

ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆದರ್ಶ ಕಂಪನಿಯ ಹೊಸ ಘಟಕಕ್ಕೆ ಗುದ್ದಲಿ ಪೂಜಾ ಕಾರ್ಯಕ್ರಮ ನಡೆಯಿತು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಹಾಜರಾಗಿ ಗುದ್ದಲಿ ಪೂಜೆಯನ್ನು ನೆರವೇರಿಸಿ ಘಟಕಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ವೇಳೆ ಸಚಿವರು ತುಮಕೂರು ಜಿಲ್ಲೆಯ ಕೈಗಾರಿಕಾ ವಿಕಾಸದ ಬಗ್ಗೆ ಮಾತನಾಡಿ, "ಆದರ್ಶ ಕಂಪನಿಯಂತಹ ಉದ್ದಿಮೆಗಳು ಯುವಕರಿಗೆ ಉದ್ಯೋಗ ನೀಡುವ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ತುಂಬುತ್ತವೆ" ಎಂದು ಹೇಳಿದರು.

ಕಂಪನಿಯ ಮಾಲೀಕರಾದ ಓಂಕಾರ್ ಸರ್ ಅವರು ಸಚಿವರನ್ನು ಹಾಗೂ ಗಣ್ಯರನ್ನು ಸ್ವಾಗತಿಸಿ, ಕಂಪನಿಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, "ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವುದು ನಮ್ಮ ಮುಖ್ಯ ಉದ್ದೇಶ" ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಪ್ರದೇಶದ ಉದ್ಯಮಿಗಳು, ಸ್ಥಳೀಯ ಮುಖಂಡರು, ಕಂಪನಿಯ ಸಿಬ್ಬಂದಿ ವರ್ಗ ಹಾಗೂ ಹಲವು ಗಣ್ಯರು ಭಾಗವಹಿಸಿದರು.
📲Get App