🔥 TRENDING Punjab releases draft electoral roll;... Nag Ashwin Praises Ramayana's Box Offi... India Clears Arunachal Roads and Bridg... No Reliable Details on Arunachal Prade... Nearly 50,000 Devotees Pay Homage to S... J&K Governor Calls for Research, Trans...
13 Nov 2026•
ગુજરાતી मराठी ਪੰਜਾਬੀ বাংলা

ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಿದ ಶೌಚಾಲಯ ಧ್ವಂಸ: ನ್ಯಾಯಕ್ಕಾಗಿ ತಾಲೂಕ ಜನವಾದಿ ಮಹಿಳಾ ಸಂಘಟನೆ ಧರಣಿ

✍️ Reporter: Khaja Hussain 🗓 13 Nov 2026, 12:56 AM 👁 8
Share: 💬 WhatsApp 📘 Facebook 𝕏 Post
.

**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಿದ ಶೌಚಾಲಯ ಧ್ವಂಸ: ನ್ಯಾಯಕ್ಕಾಗಿ ತಾಲೂಕ ಜನವಾದಿ ಮಹಿಳಾ ಸಂಘಟನೆ ಧರಣಿ

### 65 ವರ್ಷದ ವೃದ್ಧೆಗೆ ಅನ್ಯಾಯ ಆರೋಪ; ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಶೌಚಾಲಯ ಮರುನಿರ್ಮಿಸುವಂತೆ ಆಗ್ರಹ

**ಜಾಲಹಳ್ಳಿ, ನ.12:** ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9ನೇ ವಾರ್ಡ್‌ನಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ವೈಯಕ್ತಿಕ ಶೌಚಾಲಯವನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದೇವದುರ್ಗ ತಾಲ್ಲೂಕು ಘಟಕದ ವತಿಯಿಂದ ಗುರುವಾರ ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಜಾಲಹಳ್ಳಿ ನಿವಾಸಿ 65 ವರ್ಷದ ಲಕ್ಷ್ಮೀದೇವಿ ಗಂಡ ಅಮರಪ್ಪ ಅವರ ವೈಯಕ್ತಿಕ ಶೌಚಾಲಯವನ್ನು ಧ್ವಂಸಗೊಳಿಸಲಾಗಿದ್ದು, ಇದರಿಂದ ವಯೋವೃದ್ಧ ಮಹಿಳೆಗೆ ತೀವ್ರ ತೊಂದರೆಯಾಗಿದೆ. ಈ ಕುರಿತು ಮಹಿಳೆ ಅಕ್ಟೋಬರ್ 31ರಂದು ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು.

ಮನವಿಯಲ್ಲಿ ತಿಳಿಸಿರುವಂತೆ, ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಡಿ ಲಕ್ಷ್ಮೀದೇವಿ ಅವರಿಗೆ ವೈಯಕ್ತಿಕ ಶೌಚಾಲಯ ಮಂಜೂರಾಗಿತ್ತು. MBR ID ಸಂಖ್ಯೆ 1384 05246448 ಹಾಗೂ ವಾರ್ಡ್ ನಂ. 9ರ ಅಡಿಯಲ್ಲಿ ಮನೆಯ ಮುಂದಿನ ಜಾಗದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲಾಗಿತ್ತು.

ಆದರೆ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಶೌಚಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ಲಕ್ಷ್ಮೀದೇವಿ ಆರೋಪಿಸಿದ್ದಾರೆ. ಇದರಿಂದ ಬಹಿರ್ದೆಸೆಗೆ ಹೋಗಲು ತೀವ್ರ ತೊಂದರೆಯಾಗುತ್ತಿದ್ದು, ವಯೋವೃದ್ಧ ಮಹಿಳೆಯ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಮಹಿಳಾ ಸಂಘಟನೆ ಒತ್ತಾಯಿಸಿದೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಶೌಚಾಲಯ ಧ್ವಂಸಗೊಳಿಸಿದ ಪ್ರಕರಣದ ಕುರಿತು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ಸಂತ್ರಸ್ತ ಮಹಿಳೆಗೆ ತಕ್ಷಣ ಶೌಚಾಲಯ ಮರುನಿರ್ಮಿಸಿಕೊಡಬೇಕು ಎಂದು ಧರಣಿ ಮೂಲಕ ಆಗ್ರಹಿಸಲಾಯಿತು.

ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯ ಬಗ್ಗೆ ಕ್ರಮ ಕೈಗೊಂಡು ಮಹಿಳೆಗೆ ನ್ಯಾಯ ಒದಗಿಸಬೇಕು. ಬಡ ಹಾಗೂ ವಯೋವೃದ್ಧ ಮಹಿಳೆಯ ಮೂಲಭೂತ ಸೌಕರ್ಯದ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.ಈ ಸಂದರ್ಭದಲ್ಲಿ
ಶಕುಂತಲಾ ದೇಸಾಯಿ ಅಧ್ಯಕ್ಷರು ತಾಲೂಕ ಜನವಾದಿ ಮಹಿಳಾ ಸಂಘಟನೆ ಜಾಹಿರಾ ಕಾರ್ಯದರ್ಶಿ ಗಳು ತಾಲೂಕ ಜನವಾದಿ ಮಹಿಳಾ ಸಂಘಟನೆ
ಲಕ್ಷ್ಮಿ ಅಮರಪ್ಪ,
ಅಕ್ಕ ಮಹಾದೇವಿ ಸೌದ್ರಿ, ಅಮರಮ್ಮ ಸೌದ್ರಿ, ರಾಜೇಶ್ವರಿ ಸೌದ್ರಿ, ಅಯ್ಯಮ್ಮ, ಶೇಖಮ್ಮ್ ದೇವಕಮ್ಮ್, ಚನ್ನಮ್ಮ್, ಲಕ್ಷ್ಮಿ ಊರಿನ ಮುಖಂಡರಾದ ಶ್ರೀ ದರ್ ದೇಸಾಯಿ, ಜಿಲ್ಲಾ ಸಿಪಿಎಂ ಮುಖಂಡರಾದ ನರಸಣ್ಣ ನಾಯಕ, ರಾಜ್ಯ ಕಟ್ಟಡ ಕಾರ್ಮಿಕ ಮುಖಂಡರಾದ ಶಬ್ಬೀರ್ ಜಾಲಹಳ್ಳಿ, Dyfi ಮುಖಂಡರಾದ ರಿಯಾಜ್ ಆರ್ತಿ, ಮೌನೇಶ್ ಜಾಲಹಳ್ಳಿ, ಗ್ರಾಮ ಪಂಚಾಯತ್ ಸದಸ್ಯರಾದ ಅಯ್ಯಪ್ಪ ತಾತ, ಶಿವಮಾನ್ಯ ತ್ಯಾಪ್ಲಿ,ಹಾಗೂ ಇನ್ನಿತರರು ಹಾಜರಿದ್ದರು

ಜಾಲಹಳ್ಳಿ ಯ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಧರಣಿ ಸಂಜೆವರೆಗೆ ಮುಂದು ವರೆದಿತ್ತು

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App