🔥 TRENDING Former Punjab SSP Gurmeet Singh Randha... Arun Shevate: Diwali Specials Have Mas... Three Arrested in Mumbai for Blackmail... West Bengal Weather: Light Rain and 2-... Grand Deepavali Celebrations Showcase... Light rain forecast for Pathankot and...
12 Nov 2026•
ગુજરાતી मराठी ਪੰਜਾਬੀ বাংলা

ಸೆಂಟ್ರಲ್ ಕಿಚನ್ ರಚನೆ ಕೈಬಿಡಲು ಸಿಐಟಿಯು ಆಗ್ರಹ -ಬಿಸಿಯೂಟ ಸಿಬ್ಬಂದಿಯಿಂದ ಮನವಿ

✍️ Reporter: Ningappa 🗓 12 Nov 2026, 11:16 AM 👁 5
Share: 💬 WhatsApp 📘 Facebook 𝕏 Post

ಜಾಲಹಳ್ಳಿಯಲ್ಲಿ ಸೆಂಟ್ರಲ್ ಕಿಚನ್ ರಚನೆ ಕೈಬಿಡಲು ಸಿಐಟಿಯು ಆಗ್ರಹ - ಬಿಸಿಯೂಟ ಸಿಬ್ಬಂದಿಯ ನೌಕರಿ ಕಸಿಯುವ ಯೋಜನೆ ಕೈಬಿಡಲು ಒತ್ತಾಯ - ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಧಾದೇವಿ ಅವರಿಗೆ ಮನವಿ - ಅಡುಗೆ ಸಿಬ್ಬಂದಿಗೆ ಜವಾಬ್ದಾರಿ ವಹಿಸಬೇಕು - ಸೆಂಟ್ರಲ್ ಕಿಚನ್ ಪದ್ಧತಿ ಕೈಬಿಡಲು ಆಗ್ರಹ

ದೇವದುರ್ಗ: ಬಿಸಿಯೂಟ ಸಿಬ್ಬಂದಿಯ ನೌಕರಿ ಕಸಿಯುವ ಸೆಂಟ್ರಲ್ ಕಿಚನ್ ರಚನೆ ಕೈಬಿಟ್ಟು ಅಡುಗೆ ಸಿಬ್ಬಂದಿಗೆ ಊಟದ ಸಂಪೂರ್ಣ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಕಾರ್ಯಕರ್ತರು ಬುಧವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಧಾದೇವಿ ಅವರಿಗೆ ಮನವಿ ಸಲ್ಲಿಸಿದರು.

ಬಿಸಿಯೂಟ ಯೋಜನೆಯಡಿ ಕಿಚನ್ ರಚಿಸಲು ಶಿಕ್ಷಣ ಇಲಾಖೆ ಆದೇಶ ನೀಡಿದೆ. ಬಿಸಿಯೂಟ ಯೋಜನೆ 2001ರಿಂದ ಜಾರಿಯಲ್ಲಿದ್ದು ಸರ್ಕಾರಿ ಶಾಲೆ ಮಕ್ಕಳ ಹಸಿವು ನೀಗಿಸಿ ಗ್ರಹಿಕೆಯ ಶಕ್ತಿ ಮತ್ತು ಹಾಜರಾತಿ ಹೆಚ್ಚಿಸಿದೆ. 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಮಕ್ಕಳು ಇರುವ ಸ್ಥಳದಲ್ಲೇ ಬೇಯಿಸಿ ತಾಜಾ ಆಹಾರ ಕೂಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಇದರ ಆಧಾರದಲ್ಲಿ ಸಾವಿರಾರು ಕೋಟಿ ವೆಚ್ಚಮಾಡಿ ಶಾಲೆಯಲ್ಲಿ ಅಡುಗೆಕೋಣೆ ನಿರ್ಮಿಸಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗಿದೆ. ಆದರೆ ಸರ್ಕಾರ ಕಿಚನ್ ಆರಂಭಿಸಲು ಮುಂದಾಗಿರುವುದು ಸರಿಯಲ್ಲ ಎಂದು ದೂರಿದರು.

ಕೂಡಲೇ ಬಿಸಿಯೂಟ ಯೋಜನೆ ಮುಖ್ಯ ಶಿಕ್ಷಕರಿಗೆ ವಹಿಸದೆ ಅಡುಗೆ ಸಿಬ್ಬಂದಿಗೆ ಕೂಡಬೇಕು. ಅಡುಗೆ ಸಿಬ್ಬಂದಿ, ಎಸ್ಡಿಎಂಸಿ ಅಧ್ಯಕ್ಷರ ಜಂಟಿ ಖಾತೆಯಲ್ಲಿ ವ್ಯವಹಾರ ನಡೆಸಬೇಕು. ಅಗತ್ಯವಿದ್ದರೆ ಅಡುಗೆಯವರ ಕೆಲಸದ ಅವಧಿ ವಿಸ್ತರಿಸಲು ಅವಕಾಶ ನೀಡಬೇಕು. ಬಿಸಿಯೂಟ ಸಿಬ್ಬಂದಿ ಅಡುಗೆ ತಯಾರಿಸುವ ಕಾರ್ಯ ಮುಂದುವರಿಸಬೇಕು. ಸೆಂಟ್ರಲ್ ಕಿಚನ್ ಧಾರ್ಮಿಕ, ಜಾತಿಗಳ ಮತ್ತು ಖಾಸಗಿಯವರ ಪಾಲು ಮಾಡಲು ರಹದಾರಿಯಾಗಿದ್ದು ತಕ್ಷಣವೇ ಕಿಚನ್ ಪದ್ಧತಿ ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಮುಖಂಡ ಗಿರಿಯಪ್ಪ ಪೂಜಾರಿ, ಅಧ್ಯಕ್ಷ ಮರಿಯಮ್ಮ, ಕಾರ್ಯದರ್ಶಿ ಶ್ರೀಲೇಖಾ, ಲಕ್ಷ್ಮಿ, ಮಂಜುಳಾ, ರತ್ನಮ್ಮ ಸೇರಿ ಇತರರು ಇದ್ದರು.
📲Get App