🔥 ट्रेंडिंग कोरबा में फायरक्रैकर विवाद में माइनर न... મુખ્યમંત્રી શ્રી ભૂપેન્દ્રભાઈ પટેલે આજ... भारत ने पश्चिमी नवीकरणीय ऊर्जा को पूर्... अनंत उत्सव 2026: छत्तीसगढ़ की महाकाव्य... મુખ્યમંત્રી શ્રી ભૂપેન્દ્રભાઈ પટેલે આજ... राष्ट्रपति मुर्मु ने रायपुर, बिलासपुर...
11 नव. 2026•
ગુજરાતી मराठी ਪੰਜਾਬੀ বাংলা

ವಿಬಿಜಿ ರಾಮ್ ಜಿ ಯೋಜನೆ ಕೈ ಬಿಡಬೇಕು ಉದ್ಯೋಗ ಖಾತ್ರಿ ಯೋಜನೆ ಮರು ಜಾರಿ ಮಾಡಬೇಕು "- ಅಚ್ಚೋಳಿ

✍️ रिपोर्टर: Ningappa 🗓 11 नव. 2026, 01:26 PM 👁 15
शेयर करें: 💬 WhatsApp 📘 Facebook 𝕏 Post
ರಾಯಚೂರು: ವಿಬಿಜಿ ರಾಮ್ ಜಿ ಯೋಜನೆ ಕೈ ಬಿಡಬೇಕು, ಉದ್ಯೋಗ ಖಾತ್ರಿ ಯೋಜನೆ ಮರು ಜಾರಿ ಮಾಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಕರಿಯಪ್ಪ ಅಚ್ಚೋಳಿ ಹೇಳಿದರು.

ಲಿಂಗಸೂಗೂರು ತಾಲ್ಲೂಕಿನ ವೀರಾಪೂರ ಗ್ರಾಮದ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೂಲಿಕಾರರನ್ನು‌ ಕೂಲಿ ಕೆಲಸದಿಂದ ವಂಚಿತರನ್ನಾಗಿಸುವ ಹುನ್ನಾರದಿಂದ ವಿಬಿಜಿ ರಾಮ್ ಜೀ ಯೋಜನೆ ತಂದಿದ್ದಾರೆ. ನರೇಗಾ ಯೋಜನೆಯಲ್ಲಿ ಕೂಲಿಕಾರರಿಗೆ ಕೆಲಸದ ಹಕ್ಕು,ಕೂಲಿಯ ಹಕ್ಕು ನೀಡಲಾಗಿದೆ ಅದನ್ನು ಕಿತ್ತುಕೊಳ್ಳುವ ಸಲುವಾಗಿ ಈ ವಿಬಿಜಿ ರಾಮ್ ಜಿ ಯೋಜನೆ ತಂದಿರುವುದು ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆ ತಂದಾಗಿನಿಂದ ಕೂಲಿ ಕೆಲಸ ಮಾಡಿದ ಕೂಲಿಕಾರರಿಗೆ ಸಮರ್ಪಕವಾಗಿ ಕೂಲಿ ಹಣ ಸಿಗುತ್ತಿಲ್ಲ.ಇದರಿಂದ ಕೂಲಿಕಾರರು‌ ಕೆಲಸಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಉಳಿಸಿಕೊಳ್ಳಲು ಕೂಲಿಕಾರರು ಸಂಘಟಿತರಾಗಬೇಕಿದೆ.ದೊಡ್ಡ ಮಟ್ಟದಲ್ಲಿ ಜನ ಚಳುವಳಿಗೆ ಇಳಿಬೇಕು ಅಂದಾಗ ಮಾತ್ರ ಇಂತಹ ಯೋಜನೆಗಳು ಉಳಿಯಲು ಸಾಧ್ಯವಿದೆ. ಹಾಗಾಗಿ ನೀವು ಎಲ್ಲಾ ಕೂಲಿಕಾರರ ಸಂಘಟನೆ ಕಟ್ಟಿ ಕೂಲಿ ಮತ್ತು ಕೂಲಿಯ ಹಣ ಪಡೆಯುವಂತಾಗಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆ ಮುಖಂಡ ನಿಂಗಪ್ಪ ವೀರಾಪೂರ,ಹನುಮಂತ ಗುರಿಕಾರ್ ಪಲಕನಮರಡಿ, ಇಂಜಿನಿಯರ್ (ಜೆಇ) ಮಾನಪ್ಪ ಸೇರಿದಂತೆ ಕೂಲಿಕಾರರು ಇದ್ದರು.
📲Get App