🔥 ट्रेंडिंग Khadaya raam several students suffer... गुजरात की परिवार ने ट्रेन में रसोई बना... बीजेपी ने 2027 उत्तर प्रदेश चुनावों के... शामली राजमार्ग पर कार का टकराव, बिजली... सिरसा में हुआ ऐतिहासिक रिकॉर्ड, ए.क्यू... जालंधर में एटीएम कार्ड बदलकर ठगी करने...
11 नव. 2026•
ગુજરાતી मराठी ਪੰਜਾਬੀ বাংলা

ನಂಗೇಲಿ ಎಂಬ ತಾಯಿಯ ಹೋರಾಟ ನೆನೆಯೋಣ

✍️ रिपोर्टर: Ningappa 🗓 11 नव. 2026, 11:31 AM 👁 14
शेयर करें: 💬 WhatsApp 📘 Facebook 𝕏 Post
ನಂಗೇಲಿ ಎಂಬ ತಾಯಿಯ ಹೋರಾಟ ನೆನೆಯೋಣ...

ಇತಿಹಾಸದಲ್ಲಿ ಕೆಲವು ಹೋರಾಟಗಳು ಯುದ್ಧಭೂಮಿಯಲ್ಲಿ ನಡೆಯುವುದಿಲ್ಲ. ಕೆಲವು ಹೋರಾಟಗಳು ಒಬ್ಬ ಮಹಿಳೆಯ ತ್ಯಾಗದಿಂದ, ಒಬ್ಬ ತಾಯಿಯ ಸ್ವಾಭಿಮಾನದಿಂದ ಇಡೀ ವ್ಯವಸ್ಥೆಯನ್ನೇ ಅಲುಗಾಡಿಸುತ್ತವೆ. ಅಂತಹ ಒಂದು ಅಮರ ಹೋರಾಟವೇ ನಂಗೇಲಿ ಎಂಬ ಮಹಾತಾಯಿಯದು.

ಕೇರಳದಲ್ಲಿ 17, 18, 19ನೇ ಶತಮಾನಗಳಲ್ಲಿ ಕೆಳ ವರ್ಗಗಳ ಮಹಿಳೆಯರು ತಮ್ಮ ಮೈ ಮುಚ್ಚಿಕೊಳ್ಳಲು ತೆರಿಗೆ ಕಟ್ಟಬೇಕೆಂದು ಅಂದಿನ ನಂಬೂದರಿ ಬ್ರಾಹ್ಮಣ ರಾಜರು ಅತಿಕ್ರೂರವಾದ, ಅಮಾನವೀಯ ಕಾನೂನನ್ನು ಜಾರಿಗೊಳಿಸಿದ್ದರು. ಇದು ಇತಿಹಾಸದಲ್ಲಿ ಸ್ತನ ತೆರಿಗೆ ಎಂದು ಪ್ರಸಿದ್ಧಿಯನ್ನು ಪಡೆದಿತ್ತು.

ಮಹಿಳೆಯ ದೇಹದ ಮೇಲೆಯೇ ತೆರಿಗೆ ವಿಧಿಸುವ ಈ ಪದ್ಧತಿ ಮಾನವತೆಗೆ ಮಾಡಿದ ಅತ್ಯಂತ ದೊಡ್ಡ ಅಪಮಾನವಾಗಿತ್ತು. ಬಡವರು, ಕೆಳವರ್ಗದವರು ತಮ್ಮ ಘನತೆಯನ್ನು ಕಾಪಾಡಿಕೊಳ್ಳಲೂ ಬೆಲೆ ತೆರಬೇಕಾದ ದುರಂತ ಕಾಲವದು.

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕೇರಳದ ಮಲಬಾರ್ ಪ್ರಾಂತ್ಯದ ಮೇಲೆ ಅನೇಕ ಬಾರಿ ದಾಳಿ ಮಾಡಿ, ಈ ನಂಬೂದರಿಗಳನ್ನು ಬಗ್ಗುಬಡಿದು, ಈ ಅಮಾನವೀಯ ಪದ್ಧತಿಯನ್ನು ತನ್ನ ಕಾಲದಲ್ಲಿ ನಿಷೇಧಿಸಿದ್ದನು. ಆದರೆ ಟಿಪ್ಪು ಸುಲ್ತಾನನ ಮರಣದ ನಂತರ ಮತ್ತೆ ಸ್ತನ ತೆರಿಗೆ ಪದ್ಧತಿಯು ಜಾರಿಗೆ ಬಂದಿತು.

ಕೆಳವರ್ಗದ ಈಳವ (ಈಡಿಗ) ಜಾತಿಗೆ ಸೇರಿದ್ದ ನಂಗೇಲಿ ಎಂಬ ಮಹಿಳೆಯು ತನ್ನ ದೇಹವನ್ನು ಪೂರ್ತಿ ಮುಚ್ಚಿಕೊಂಡಿರುತ್ತಾಳೆ. ಇದಕ್ಕಾಗಿ ನಂಬೂದರಿ ರಾಜರು ತೆರಿಗೆಯನ್ನು ವಸೂಲಿ ಮಾಡಲು ತಮ್ಮ ಸೈನಿಕರನ್ನು ಅವಳ ಮನೆಯ ಬಳಿ ಕಳುಹಿಸಿದಾಗ, ಆ ಮಹಾತಾಯಿ ತನ್ನ ಸ್ತನವನ್ನೇ ಕುಯ್ದು ಒಂದು ಬಾಳೆ ಎಲೆಯಲ್ಲಿಟ್ಟು ತೋರಿಸುತ್ತಾಳೆ.

ತೆರಿಗೆಗೆ ಬದಲಾಗಿ ತನ್ನ ದೇಹವನ್ನೇ ಕೊಟ್ಟ ಆ ತಾಯಿ, ಅತಿಯಾದ ರಕ್ತಸ್ರಾವದಿಂದ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ನಂಗೇಲಿಯ ಚಿತೆಗೆ ಹಾರಿ ಆಕೆಯ ಪತಿಯೂ ಪ್ರಾಣಾರ್ಪಣೆ ಮಾಡುತ್ತಾನೆ. ನಂಗೇಲಿಯ ಊರು ಆ ಬಳಿಕ "ಮುಲ (ಮೊಲೆ) ಪರಂಬು" ಎಂದು ಕರೆಯಲ್ಪಟ್ಟಿತು.

ನಂಗೇಲಿಯ ತ್ಯಾಗ ವ್ಯರ್ಥವಾಗಲಿಲ್ಲ. ನಂಗೇಲಿಯ ಈಳವ ಸಮಾಜದಿಂದ ಬಂದಂತಹ ನಾರಾಯಣ ಗುರುಗಳು ಈ ಅಮಾನುಷ ಪದ್ಧತಿಯ ವಿರುದ್ಧ ಹೋರಾಡುತ್ತಾರೆ. ಇವರ ಹೋರಾಟವನ್ನು ಪರಿಗಣಿಸಿ ಅಂದಿನ ಬ್ರಿಟಿಷ್ ಸರ್ಕಾರವು ಈ ಸ್ತನ ತೆರಿಗೆ ಪದ್ಧತಿಯನ್ನು 19ನೇ ಶತಮಾನದ ಅಂತ್ಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.

ಆ ಮಹಾತಾಯಿ ನಂಗೇಲಿಯು ಪ್ರಾಣ ಬಿಟ್ಟ ಸ್ಥಳದಲ್ಲಿ, ಅವಳ ವಿಗ್ರಹವನ್ನು ನಿಲ್ಲಿಸಿ, ಆರಾಧಿಸುತ್ತಾರೆ.

ಮಹಿಳೆಯ ಸ್ವಾಭಿಮಾನ, ಘನತೆಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನಂಗೇಲಿಯ ಹೋರಾಟ ಇಂದಿಗೂ ಸ್ಮರಣೀಯ. ಆಕೆಯ ತ್ಯಾಗ ನಮಗೆಲ್ಲರಿಗೂ ಸ್ಫೂರ್ತಿ. ಅನ್ಯಾಯದ ವಿರುದ್ಧ ತಲೆಬಾಗದೆ ನಿಲ್ಲುವ ಧೈರ್ಯವನ್ನು ಆ ಮಹಾತಾಯಿ ನಮಗೆ ಕಲಿಸಿದ್ದಾಳೆ.

🖌 ಲಿಂಗಣ್ಣ ಮಕಾಶಿ
📲Get App