🔥 TRENDING ઉમાનગરમાં દિવાળી ઉત્સવની ઉજવણી યોજાઈ મંગરોળના નગીચાણા ગામમાં ઊંડા કૂવામાં પ... भूमिगत कोळसा खाणीत भीषण दुर्घटना; ३६ व... ਚੰਡੀਗੜ੍ਹ ਯੂਨੀਵਰਸਿਟੀ ਨੇ ਦਿਖਾਈ ਸਿੱਖਿਆ ਤੇ... नौबतपुर में किसानों संग दीपावली मनाने... 2026 NASCAR Cup Final to Air Today: TV...
08 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಠಾಣೆಯಲ್ಲಿ ಕಿಶೋರಿ ತಂಡಕ್ಕೆ ತೆರೆದ ಮನೆ ಕಾರ್ಯಕ್ರಮ - ಪೊಲೀಸ್ ಇಲಾಖೆ, ಠಾಣೆ ಕಾರ್ಯವೈಖರಿ, ಮಹಿಳಾ-ಮಕ್ಕಳ ಸುರಕ್ಷತೆ ಕುರಿತು ಪಿಎಸ್‌ಐ ಮಾಹಿತಿ

✍️ Reporter: Ningappa 🗓 08 Nov 2026, 07:35 PM 👁 11
Share: 💬 WhatsApp 📘 Facebook 𝕏 Post

ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ. ಗಣೇಕಲ್ ಮತ್ತು ಪಲಕನಮರಡಿ ಗ್ರಾಮದ ಕಿಶೋರಿ ತಂಡಕ್ಕೆ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ - ಪಿಎಸ್‌ಐ ಜಾಲಹಳ್ಳಿ ಅವರಿಂದ ಪೊಲೀಸ್ ಇಲಾಖೆ, ದೂರು ನೀಡುವ ವಿಧಾನ, ಮಹಿಳಾ-ಮಕ್ಕಳ ಸುರಕ್ಷತೆ, ಸೈಬರ್ ಜಾಗೃತಿ, ಬಾಲ್ಯ ವಿವಾಹ ತಡೆ ಕುರಿತು ಮಾಹಿತಿ, ಸಂವಾದ

ಜಾಲಹಳ್ಳಿ ಠಾಣೆಯಲ್ಲಿ ಕಿಶೋರಿ ತಂಡಕ್ಕೆ ತೆರೆದ ಮನೆ ಕಾರ್ಯಕ್ರಮ

ರಾಯಚೂರು: ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ. ಗಣೇಕಲ್ ಮತ್ತು ಪಲಕನಮರಡಿ ಗ್ರಾಮದ ಕಿಶೋರಿ ತಂಡದವರಿಗೆ ಠಾಣೆಯಲ್ಲಿ ಬರಮಾಡಿಕೊಂಡು ಜಾಲಹಳ್ಳಿ ಪಿ.ಎಸ್.ಐ ಶ್ರೀಮತಿ ವೈಶಾಲಿ ಜಳಕಿ ರವರು ತೆರೆದ ಮನೆ ಕಾರ್ಯಕ್ರಮವನ್ನು ಕೈಗೊಂಡು, ಪೊಲೀಸ್ ಇಲಾಖೆ ಮತ್ತು ಠಾಣೆಯ ಕುರಿತು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಕಿಶೋರಿಯರಿಗೆ ಪೊಲೀಸ್ ಠಾಣೆ ಹೇಗೆ ಕಾರ್ಯನಿರ್ವಹಿಸುತ್ತದೆ, ದೂರು ನೀಡುವ ವಿಧಾನ ಹೇಗಿರುತ್ತದೆ, ಎಫ್‌ಐಆರ್ ಎಂದರೇನು, ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡುವ ವಿಧಾನ, ಮಹಿಳಾ ಸಹಾಯವಾಣಿ, ಚೈಲ್ಡ್ ಹೆಲ್ಪ್‌ಲೈನ್ ಕುರಿತು ವಿವರವಾಗಿ ತಿಳಿಸಿಕೊಡಲಾಯಿತು.

ಜೊತೆಗೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಬಾಲ್ಯ ವಿವಾಹ ತಡೆ, ಶಾಲೆ ಬಿಡದಂತೆ ಜಾಗೃತಿ, ಕಿರುಕುಳ ಕಂಡರೆ ಎದುರಿಸುವ ಧೈರ್ಯ, ಸ್ವರಕ್ಷಣೆ, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ, ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆ, ಮೆಸೇಜ್‌ಗಳಿಗೆ ಪ್ರತಿಕ್ರಿಯಿಸದಂತೆ, ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಂತೆ ಜಾಗೃತಿ ಮೂಡಿಸಲಾಯಿತು.

ಕಿಶೋರಿಯರು ಕೇಳಿದ ಹಲವು ಪ್ರಶ್ನೆಗಳಿಗೆ ಪಿಎಸ್‌ಐ ಅವರು ಸರಳವಾಗಿ ಉತ್ತರಿಸಿ ಸಂವಾದ ನಡೆಸಿದರು. ಯಾವುದೇ ಸಮಸ್ಯೆ, ಅನುಮಾನ, ಭಯ ಇದ್ದರೂ ನಿರ್ಭಯವಾಗಿ ಠಾಣೆಗೆ ಬರುವಂತೆ, ಪೋಷಕರಿಗೆ, ಶಿಕ್ಷಕರಿಗೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸುವಂತೆ ಕರೆ ನೀಡಿದರು. ಪೊಲೀಸರು ಸದಾ ನಿಮ್ಮ ರಕ್ಷಣೆಗೆ ಇದ್ದಾರೆ ಎಂದು ಧೈರ್ಯ ತುಂಬಿದರು.

ಠಾಣೆಯ ವಿವಿಧ ಕೊಠಡಿಗಳು, ದೂರು ಸ್ವೀಕಾರ ವಿಭಾಗ, ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುವ ವಿಭಾಗವನ್ನು ಕಿಶೋರಿಯರಿಗೆ ತೋರಿಸಿ ಪರಿಚಯಿಸಲಾಯಿತು.

ಕಿಶೋರಿ ತಂಡದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
📲Get App