🔥 ट्रेंडिंग भोपाल में महिलाओं की मौत, पुलिस ने खोल... बीपीएर विधायक अनिल जैन के भोपाल घर में... कृषि उत्पादक आयुक्त के.सी. गुप्ता ने र... हाई कोर्ट ने दुर्घटना में मृत पुत्र के... जबलपुर के सिहोरा विकासखंड में कलेक्टर... अशोकनगर तहसील में कलेक्टर साकेत मालवीय...
06 नव. 2026•
ગુજરાતી मराठी ਪੰਜਾਬੀ বাংলা

ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಲು ಆಗ್ರಹ

✍️ रिपोर्टर: Ningappa 🗓 06 नव. 2026, 11:13 PM 👁 15
शेयर करें: 💬 WhatsApp 📘 Facebook 𝕏 Post
ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಲು ಆಗ್ರಹ

ರಾಯಚೂರು/ಲಿಂಗಸುಗೂರ: ತಾಲೂಕಿನ ಕಾಳಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಳ್ಳಿಯ ಪರಿಶಿಷ್ಟ ಜಾತಿ ಪಂಗಡ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೂ ಪಠ್ಯ ಪುಸ್ತಕ ವಿತರಣೆ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಪೂಲಭಾವಿ ಗ್ರಾಮದ ವಿದ್ಯಾರ್ಥಿಗಳು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಕಾಳಾಪೂರ, ಪೂಲಭಾವಿ, ಮಿಂಚೇರಿ, ಮಿಂಚೇರಿ ತಾಂಡ, ಪುಲಭಾವಿ ತಾಂಡ, ಕಾಳಾಪೂರ ತಾಂಡ ಸೇರಿದಂತೆ ಕಾಳಾಪೂರ ಪಂಚಾಯತಿ ವ್ಯಾಪ್ತಿಯ ಹಳ್ಳಿಯ ಪರಿಶಿಷ್ಟ ಜಾತಿ ಪಂಗಡ ಜನರಿಗೆ ಪ್ರತಿ ವರ್ಷದಂತೆ ಸರ್ಕಾರದ ಅನುದಾನದಲ್ಲಿ ನೀಡುವ ಉಚಿತ ಪಠ್ಯ ಪುಸ್ತಕಗಳನ್ನು ಪಿಡಿಓ ಬಿಲ್ ಕಲೆಕ್ಟರ್ ನೀಡುತ್ತಿಲ್ಲ ಪಂಚಾಯತಿಯ ಕಾರ್ಯಾಲಯದಲ್ಲಿ ಹೋದರೆ ಯಾರು ಇಲ್ಲದೇ ವಿದ್ಯಾರ್ಥಿಗಳ ಭೇಟಿಗೂ ಸಿಗುತ್ತಿಲ್ಲ ಸಿಕ್ಕರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಇವರ ಅಡಳಿತ ನಿರ್ಲಕ್ಷ್ಯ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಾಲ್ಲೂಕು ಇಓ ಉಮೇಶ್ ಅವರಿಗೆ ಮನವಿ ಸಲ್ಲಿಸಿ ನಂತರದ ವಿದ್ಯಾರ್ಥಿಗಳಿಗೆ ದಾರಿ, ಬಸ್, ಸೇರಿದಂತೆ ಅನೇಕ ಸಮಸ್ಯೆಗಳನ್ನು ವಿಸ್ತಾರವಾಗಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಜರುಗಿಸುವಂತೆ ತಿಳಿಸಿದರು.

ಈ ವೇಳೆ ವಿದ್ಯಾರ್ಥಿಗಳಾದ ಪರಮೇಶ, ದುರಗಪ್ಪ, ರಮೇಶ, ಬಸವರಾಜ್, ಅಮರೇಶ, ಸಂಜೀವಕುಮಾರ, ಆದಪ್ಪ, ಶಿವರಾಜ, ಸಣ್ಣಮುದಕಪ್ಪ, ಶರಣಬಸವ, ಸಂಗಪ್ಪ, ಬಸಯ್ಯ, ಮಾರುತಿ, ಕಠಯ್ಯ, ಭೀಮಣ್ಣ, ಹನುಮಂತ, ಯಲ್ಲಪ್ಪ, ಮಂಜಪ್ಪ, ಮೌನೇಶ, ರಾಯಣ್ಣ, ನಾಗಪ್ಪ ಸೇರಿದಂತೆ ಇದ್ದರು.
📲Get App