🔥 TRENDING पत्रकार आश मोहम्मद ने दिव्यांग भाई-बहन... Char Dham Yatra Highlights Air Safety... Telangana Targets 100 New GCCs in Hyde... ગ્રીન દિવાળી અભિયાન-2026: ફટાકડાને ના... Farmer Takes Own Life in Flood‑Stricke... Bharat Renewable Energy Summit & Expo...
07 Nov 2026•
ગુજરાતી मराठी ਪੰਜਾਬੀ বাংলা

ಲಿಂಗಾಯತದ ಮೇಲಿನ ಹಿಂದುತ್ವ ಸಾಂಸ್ಕೃತಿಕ ದಾಳಿಗೆ ತಿರುಗೇಟು ನೀಡುವುದು ಹೇಗೆ?

✍️ Reporter: Ningappa 🗓 06 Nov 2026, 11:49 PM 👁 18
Share: 💬 WhatsApp 📘 Facebook 𝕏 Post
ಲೇಖನ.....🖌

ಲಿಂಗಾಯತದ ಮೇಲಿನ ಹಿಂದುತ್ವ ಸಾಂಸ್ಕೃತಿಕ ದಾಳಿಗೆ ತಿರುಗೇಟು ನೀಡುವುದು ಹೇಗೆ?

ಬಾಪುಗೌಡ ಮೇಟಿ ಅಲಿಯಾಸ್ ಕನ್ನೆರಿ ಸ್ವಾಮಿ ಎಂಬ ಸಾಕು ನಾಯಿಗೆ ತರಬೇತಿ ಕೊಟ್ಟು, ಕರ್ನಾಟಕದ ವಿವಿಧ ಕಡೆ "ಬಸವಾದಿ ಶರಣರ ಹಿಂದುತ್ವ ಸಮಾವೇಶ" ನಡೆಸಲಾಗುತ್ತಿದೆ.
ಮೊನ್ನೆ ಬೀದರ್- ಕಲ್ಬುರ್ಗಿ ನಿನ್ನೆ ಗಂಗಾವತಿಯಲ್ಲಿ ಈ ಸಮಾವೇಶ ನಡೆದಿದೆ. ಲಿಂಗಾಯತವನ್ನು ಅಥವಾ ಬಸವ ಪಥವನ್ನು ಅಥವಾ ಶರಣ ಚಳುವಳಿಯನ್ನು ಬುಡಮೇಲು ಮಾಡುವುದಕ್ಕಾಗಿ ಮನುವಾದಿಗಳು ಇದನ್ನು ಮಾಡಿಸುತ್ತಿದ್ದಾರೆ.ಹಾಗಾಗಿ ಈ ಸಮಾವೇಶವನ್ನು, ಕನ್ನೆರಿ ಕಂತ್ರಿ ಸ್ವಾಮಿಯ ಎಲ್ಲಾ ಹೊಲಸು ಹೇಳಿಕೆಗಳನ್ನು ಅಮರ ಜ್ಞಾನಪೀಠವು ತುಂಡು ತುಂಡಾಗಿ ಖಂಡಿಸುತ್ತದೆ.
ಏಕೆಂದರೆ, ಬುದ್ಧನ ನಂತರ - ಸಿದ್ದರ ನಂತರ ಬಸವಾದಿಗಳ ಬಂಡಾಯವು ಹಿಂದೂ 'ಧರ್ಮ'ಕ್ಕೆ ಎರಗಿದ ಅತಿ ದೊಡ್ಡ ಬರಸಿಡಿಲಾಗಿದೆ. ಅಲ್ಲದೆ ಇಂದಿಗೂ ಹಿಂದುತ್ವವಾದಿಗಳಿಗೆ ಇದು ಚಾರಿತ್ರಿಕವಾಗಿ ವೈಚಾರಿಕವಾಗಿ ಹಾಗೂ ಆಚರನಾತ್ಮಕವಾಗಿ ಸಿಂಹ ಸ್ವಪ್ನವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದುತ್ವವಾದಿಗಳ ಸಾಂಸ್ಕೃತಿಕ ದಾಳಿಯನ್ನು ಎದುರಿಸಲು ಲಿಂಗಾಯತರು ಈ ಕೆಳಗಿನ ಕಾರ್ಯಾಚರಣೆಗೆ ಮುಂದಾಗ ಬೇಕೆಂಬುದು ನಮ್ಮ ಮನವಿಯಾಗಿದೆ.
1) ಅಂದು ಕೂಡಲಸಂಗಯ್ಯ ಮಾದರ ಚೆನ್ನಯ್ಯನೊಂದಿಗೆ ಕೂಡಿ ಉಂಡ ಕಾರಣ ವೇದ ಗಡಗಡ ನಡುಗಿ ಹೋಯಿತು.ಇಂದು ಲಿಂಗಾಯತರು ಹಾಗೂ ಲಿಂಗಾಯಿತ ಮಠಪತಿಗಳು, ಕೆಳಗಿರುವ ಲಿಂಗಾಯತ ದಲಿತರೊಂದಿಗೆ ನಿತ್ಯ ಕೂಡಿ ಉಂಬುವ ಸಹಪಂಕಿ ಭೋಜನ ಚಳುವಳಿ ಆರಂಭಿಸ ಬೇಕು.

2) ಲಿಂಗಾಯತದ ಮೂರು ಧಾರೆಗಳು ಒಗ್ಗೂಡಿ ಹರಿದು ವೈಚಾರಿಕ ಪ್ರವಾಹ ಸೃಷ್ಟಿಸಬೇಕು. ವೈದಿಕ ವಿರೋಧಿ ಎಲ್ಲಾ ಶಿವಸಿದ್ಧ ಸಾಧು ಪಂಥಗಳ ಐಕ್ಯ ವೇದಿಕೆ ರಚಿಸಬೇಕು. ಇದಕ್ಕೆ ಬಸವಣ್ಣನವರೆ ಪ್ರಪಂಚದಲ್ಲಿ ಅತಿ ದೊಡ್ಡ ಹಾಗೂ ಅದ್ಭುತ ಮಾದರಿಯಾಗಿದ್ದಾರೆ. ಇದೇ ಮಾದರಿಯನ್ನೆ ಮರು ಪ್ರಯೋಗ ಮಾಡಬೇಕು.

3) ಅಂದು ಬಸವಣ್ಣ ಮಾಡಿದ ಒಂದೇ ಒಂದು ಅಂತರ್ಜಾತಿ ಮದುವೆಯು ಇಡೀ ಮನುವಾದಿ ಕುಲವಾದಕ್ಕೆ ಭಾರಿ ಮರ್ಮಘಾತಾವನ್ನು ಕೊಟ್ಟಿತು.ಏಕೆಂದರೆ,ಜಾತಿವಾದವು ಜನಿವಾರ ಹಾಕಿದವರ ಜೀವಾಳವಾಗಿದೆ. ಸಜಾತಿ ಮದುವೆಗಳು ಕುಲವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತವೆ. ವಿಜಾತಿ ಮದುವೆಗಳು ಕುಲ ವ್ಯವಸ್ಥೆಯನ್ನು ಕುಟ್ಟಿ ಪುಡಿ ಮಾಡುತ್ತವೆ. ಜಾತಿ ಅಸ್ಪೃಶ್ಯತೆಯು ರಕ್ತಗತವಾಗಿ ಬಂದುಬಿಟ್ಟಿದೆ. ರಕ್ತ ಸಂಬಂಧ ಮಾತ್ರ ಸಾಮಾಜಿಕ ಸಂಬಂಧದಲ್ಲಿ ಬಾರಿ ಬದಲಾವಣೆಯನ್ನು ತರಲಿದೆ. ಹಾಗಾಗಿ, ಲಿಂಗಾಯತರು- ಲಿಂಗಾಯತ ಮಠಗಳು ಅಂತರ್ಜಾತಿ ವಿವಾಹಗಳಿಗೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಂದು ಮಠದಲ್ಲಿ ಅಂತರ್ಜಾತಿ ಸಾಮೂಹಿಕ ವಿವಾಹಗಳಿಗೆ ಸಂಪೂರ್ಣ ಸಹಕಾರ ಹಾಗೂ ವ್ಯವಸ್ತೆ ಇದೆ ಎಂದು ಪ್ರಕಟಿಸಬೇಕು. ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖ ಹೊಣೆಗಾರಿಕೆ ಇದಾಗಬೇಕು. ಇದಾಗದೆ ಹೋದರೆ ಯಾವುದು ಆಗದು! ಕನ್ನೆರಿ ಹೇಳುವುದಿರಲಿ, ಲಿಂಗಾಯತರೂ ಹಿಂದುಗಳೇ ಎಂದು ನಾವೇ ನಾವಾಗಿ ನಿರೂಪಿಸಿದಂತಾಗುತ್ತದೆ.

4) ಲಿಂಗಾಯತರು 21ನೇ ಶತಮಾನದ ಸತ್ಯ ಶುದ್ಧ ಕಾಯಕಗಳನ್ನು ಮಾತ್ರ ಸ್ವೀಕರಿಸಬೇಕು. ಅಶುದ್ಧ ಅಸತ್ಯವಾದ ಶೋಷಣೆ ಮೂಲದ ಕಾಯಕಗಳನ್ನು ಕೈಬಿಡಬೇಕು. ಪ್ರತಿಯೊಬ್ಬ ಲಿಂಗಾಯತ ಮಠದ ಸ್ವಾಮೀಜಿಗಳು ಸ್ವಯಂ ಕಾಯಕ ಮಾಡಬೇಕು. ಸ್ವಯಂ ಕಾಯಕದಿಂದ ಅರ್ಜಿಸಿದ ಫಲಗಳು ಮಾತ್ರ ಪ್ರಸಾದವಾಗಲು ಸಾಧ್ಯ. ಈ ಶರಣ ಮಾದರಿಯನ್ನು ಮರು ಸ್ಥಾಪಿಸಬೇಕು.

5) ಎಲ್ಲಾ ಲಿಂಗಾಯತ ಮಠಗಳ ಹಾಗೂ ಸಾಮಾಜಿಕ ಸಂಸ್ಥೆಗಳ ಜಮೀನುಗಳನ್ನು ಭೂಮಿ ಇಲ್ಲದ ಕೃಷಿಕರಾದ ದಲಿತರ ಮಹಿಳೆಯರ ಅತಿ ಹಿಂದುಳಿದ ವರ್ಗದವರ ಸಾಮೂಹಿಕ ಸಾಗುವಳಿಗೆ ಒಳಪಡಿಸಬೇಕು.ಶರಣ ಸಹಕಾರ ಸಂಘಗಳನ್ನು ಕಟ್ಟಾ ಬೇಕು.ಆಸ್ತಿಯ ನಿರ್ವಹಣೆ ಹಾಗೂ ಶಿಕ್ಷಣ -ವ್ಯಾಪಾರ ಜಂಜಾಟದಿಂದ ಮಠಗಳು ಹೊರಗೆ ಬರಬೇಕು. ಮಠಗಳನ್ನು ಲಿಂಗಾಯಿತ ತತ್ವ ಬಿತ್ತುವ ಶರಣ ಶಿಕ್ಷಣ ಸಂಸ್ಥೆಗಳನ್ನಾಗಿ, ಬಸವಾದಿ ಶರಣರ ಅನುಯಾಯಿಗಳು ವಿದ್ಯಾರ್ಥಿಗಳಾಗಿ, ಕಲಿಯಿರಿ ಕಲಿಸಿರಿ ಎಂಬ ಕಲ್ಚರಲ್ ಕೇಂದ್ರಗಳಾಗಿ ಮಠಗಳು ಬದಲಾಗಬೇಕು.

6) ಹಿಂದೂ ಕರ್ಮಠ ಜಾತಿವಾದ, ಅಸ್ಪೃಶ್ಯತೆ, ಮಹಿಳಾ ಶೋಷಣೆ,ತಾರತಮ್ಯ, ಹಿಂಸೆ, ಭಯೋತ್ಪಾದನೆ, ದಬ್ಬಾಳಕೆ, ಸಂಪತ್ತಿನ ಮೇಲೆ ಏಕಾಧಿಪತ್ಯಕ್ಕೆ ಸವಾಲು ಹಾಕುವ ಎಲ್ಲಾ ಚಳುವಳಿಯಲ್ಲೂ ಲಿಂಗಾಯತರು ಇರಬೇಕು. ಈ ಮೂಲಕ ಲಿಂಗಾಯತವೇ ಹಿಂದುತ್ವ ಫ್ಯಾಷಿಸ್ಟರ ವಿರುದ್ಧ ಒಂದು ವಿಶಾಲ ಚಳುವಳಿಯಾಗಿ ಹರಿಯಬೇಕು.
ಅಂದರೆ ನಮ್ಮ ಶರಣರ ವಿಚಾರಗಳನ್ನು ಆಚಾರ ಎಂಬ ಆಯುಧವನ್ನಾಗಿ ತಯಾರಿಸಿಕೊಂಡು,
ಬಸವ ತತ್ವ ವಿಕೃತೀಕರಣದ ವಿರುದ್ಧ
ಸಮರ ಸಾರಬೇಕು. ಇದಕ್ಕಾಗಿ ದೊಡ್ಡ ಶರಣ ಸೈನ್ಯವನ್ನೇ ಕಟ್ಟಬೇಕು.ಎಲ್ಲಾ ಶರಣ ಸಂಕುಲ ನಮ್ಮ ಪ್ರಸ್ತಾವನೆಗಳನ್ನು ಅನ್ಯತ ಭಾವಿಸದೆ ಮನ್ನಿಸ ಬೇಕು.

ಹುತ್ತವ ಬಡೆದರೆ ಹಾವು ಸಾಯ ಬಲ್ಲುದೆ?

🖌 ಆರ್. ಮಾನಸಯ್ಯ
ಅಧ್ಯಕ್ಷರು
ಅಮರಜ್ಞಾನ ಪೀಠ
ಶ್ರೀ ಕೊಡೇಕಲ್ಲ ಬಸವಣ್ಣ ಶಾಖಾ ಮಠ ಅಮರ ಕಲ್ಯಾಣ ಚಿಕ್ಕಹೆಸರೂರು
📲Get App