🔥 ट्रेंडिंग अमृतसर में विशेष बच्चों की प्रतिभा को... जोगबनी में दिनदहाड़े महिला पर हिप्नोटि... लोहड़ग़ा रेलवे स्टेशन का नया रूप: यात्... विश्वास एग्रो फॉर्म का उद्घाटन, राष्ट्... जयनगर के निवासी कार्तिक झा का आकस्मिक... శోభనాద్రిపురంలో వడ్ల గింజల మద్దతు ధరకు...
06 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ - ರಾಜ್ಯ ಹಣಕಾಸು ಆಯೋಗದ ಅನುದಾನ ಬಳಕೆ ಕುರಿತು ಚರ್ಚೆ - ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಕುರಿತು ಸಮಾಲೋಚನೆ

✍️ रिपोर्टर: Ningappa 🗓 06 नव. 2026, 11:49 AM 👁 22
शेयर करें: 💬 WhatsApp 📘 Facebook 𝕏 Post

ದೇವದುರ್ಗ ತಾಲೂಕು ಪಂಚಾಯಿತಿಯಲ್ಲಿ ರಾಜ್ಯ ಹಣಕಾಸು ಆಯೋಗದ 2026-27ನೇ ಸಾಲಿನ ಅನುದಾನ ಬಳಕೆ ಕುರಿತು ಸಾಮಾನ್ಯ ಸಭೆ - ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶರಣಬಸವರಾಜ ಉಪಸ್ಥಿತಿ - ಶಾಲೆ, ಹಾಸ್ಟೆಲ್, ಆರೋಗ್ಯ ಕೇಂದ್ರ, ಅಂಗನವಾಡಿ ದುರಸ್ತಿ ಕಾಮಗಾರಿಗಳ ಕುರಿತು ಚರ್ಚೆ

ದೇವದುರ್ಗ ತಾಲೂಕು ಪಂಚಾಯಿತಿಯಲ್ಲಿ ರಾಜ್ಯ ಹಣಕಾಸು ಆಯೋಗದ ಅನುದಾನ ಬಳಕೆ ಕುರಿತು ಸಾಮಾನ್ಯ ಸಭೆ

ದೇವದುರ್ಗ: ತಾಲೂಕು ಪಂಚಾಯಿತಿ ದೇವದುರ್ಗದಲ್ಲಿ 2026-27ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದ ಬಳಕೆ ಕುರಿತು ತಾಲೂಕು ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಜಿಲ್ಲಾ ಪಂಚಾಯಿತಿ ರಾಯಚೂರಿನ ಯೋಜನಾ ನಿರ್ದೇಶಕರಾದ ಶರಣಬಸವರಾಜ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಹಾಗೂ ದುರಸ್ತಿ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.

ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವಸತಿ ಗೃಹಗಳ ದುರಸ್ತಿ, ಅರಕೇರಾ ವಸತಿ ಖರೀದಿ, ಜಾಲಹಳ್ಳಿ ಹಾಗೂ ಗಬ್ಬೂರು ಖರೀದಿ, ಅರಕೇರಾ ವಿದ್ಯಾರ್ಥಿ ನಿಲಯಗಳ ದುರಸ್ತಿ, ಕೊಪ್ಪರ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ, ಅರಕೇರಾ ವಿದ್ಯಾರ್ಥಿ ನಿಲಯದ ಶೌಚಾಲಯ ದುರಸ್ತಿ, ಗ್ರಾಮಗಳಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಇಲಾಖೆಯ ವ್ಯಾಪ್ತಿಯ ನಿಲಯಗಳ ದುರಸ್ತಿ, ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.

ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳ ವಿತರಣೆ, ಶೌಚಾಲಯ ದುರಸ್ತಿ, ಶಾಲೆಗಳ ದುರಸ್ತಿ ಕಾಮಗಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರಗಳ ದುರಸ್ತಿ, ಅಗತ್ಯ ಪೀಠೋಪಕರಣಗಳ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಈ ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕುಮಾರ್, ಸಹಾಯಕ ನಿರ್ದೇಶಕ ಅಕ್ಬರ್ ಖಾನ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಜುಕುಮಾರ್, ತಾಲೂಕು ಪಂಚಾಯಿತಿ ನಿರ್ದೇಶಕ ದಯಾನಂದ್, ವಿದ್ಯಾರ್ಥಿ ನಿಲಯದ ಶೌಚಾಲಯ ದುರಸ್ತಿ, ಶಿರು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ನಾಯಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
📲Get App