🔥 TRENDING સાવચેતી એ જ સુરક્ષા - દિવાળી પર્વમાં સ... SG હાઈવે પર થલતેજથી ઇસ્કોન ક્રોસ રોડ સ... અમદાવાદ અને ગાંધીનગરમાં હુક્કા પ્રતિબં... ರಾಯಚೂರು: ಕೃಷ್ಣಾ ಎಡದಂಡೆ ಕಾಲುವೆಗೆ 15-01-... SG હાઈવે પર થલતેજથી ઇસ્કોન ક્રોસ રોડ સ... અહમદાબાદ અને ગાંધીનગરમાં પ્રતિબંધિત હુ...
05 Nov 2026•
ગુજરાતી मराठी ਪੰਜਾਬੀ বাংলা

ಸರ್ಕಾರಿ ಜಮೀನಿನಲ್ಲಿ ಸಾರ್ವಜನಿಕ ಕೆರೆ ದಾಖಲಿಸಲು ಗ್ರಾಮಸ್ಥರಿಂದ ಮನವಿ

✍️ Reporter: Mallikarjun Gabbur 🗓 05 Nov 2026, 07:32 AM 👁 17
Watch on: 📘 Facebook
Share: 💬 WhatsApp 📘 Facebook 𝕏 Post

ಪಟ್ಟಣದ ಇವಣಗಿ ರಸ್ತೆಯ ಕನಕದಾಸ ವೃತ್ತದಿಂದ ತಹಶೀಲದಾರ ಕಚೇರಿಯವರೆಗೆ ಕಾನ್ನಾಳ ಗ್ರಾಮಸ್ಥರು ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಉಮೇಶ ವಾಲಿಕಾರ ಅವರು ಕಾನ್ನಾಳ ಗ್ರಾಮದಲ್ಲಿ ರೈತರು, ಜನ ಜಾನುವಾರುಗಳು ನೀರಿನ ಭವಣೆಯನ್ನು ಎದುರಿಸುತ್ತಿದ್ದಾರೆ ಇದನ್ನು ನೀಗಿಸುವದು ಸರ್ಕಾರದ ಜವಾಬ್ದಾರಿಯಾಗಿದೆ. ಗ್ರಾಮದಲ್ಲಿ ಕಸನಂ: 155 ಮತ್ತು 156 ಜಮೀನು 43 ಏಕರೆ 11 ಗುಂಟೆ ವಿಸ್ತಾರವಾದ ಜಮೀನನ್ನು ಹೊಂದಿದ್ದು ಇದರಲ್ಲಿ ಸುಮಾರು 9 ಏಕರೆಯಲ್ಲಿ ಬಾಂದಾರ ನಿರ್ಮಾಣವಾಗಿದೆ ಆದರೆ ಕಳೆದ 3-4 ವರ್ಷದಿಂದ ಮಳೆಯ ಕೊರತೆಯಿಂದ ಬಾಂದಾರ ಬತ್ತಿದ್ದು ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ ಎಂದರು.

ಈಗಿರುವ 43 ಏಕರೆ 11ಗುಂಟೆಯಲ್ಲಿ 20 ಏಕರೆ ಜಮಿ ಜಮೀನನ್ನು ಸಾರ್ವಜನಿಕ ಕೆರೆ ಎಂದು ಸರ್ಕಾರ ದಾಖಲಿಸಿ ಕೊಟ್ಟಲ್ಲಿ ಸಣ್ಣನೀರಾವರಿ ಇಲಾಖೆಯವರು ಕೆರೆಗೆ ನೀರು ಹರಿಸಿದಲ್ಲಿ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಾಗಿ ಕನ್ನಾಳ ಗ್ರಾಮವು ಸುಸಜ್ಜಿತವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಸರ್ಕಾರ ಕೂಡಲೆ ಕಾನ್ನಾಳ ಗ್ರಾಮಸ್ಥರ ನೆರವಿಗೆ ದಾವಿಸಿ ಬೇಡಿಕೆ ಇಡೆರಿಸಬೇಕೆಂದು ಗ್ರಾಮಸ್ಥರೊಂದಿಗೆ ತಹಶೀಲದಾರರಿಗೆ ಒತ್ತಾಯಿಸುವ ಮನವಿಯನ್ನು

ಗ್ರೇಡ್2 ತಹಶೀಲದಾರ ಸೋಮನಿಂಗ ಅರಕೇರಿ ಅವರಿಗೆ ಸಲ್ಲಿಸಿದರು.

ಇತರರು ಇದ್ದರು. ಈ ಸಂದರ್ಭದಲ್ಲಿ ಶಿವಪ್ಪ ಹೂಗಾರ, ಬಸನಗೌಡ ಪಾಟೀಲ, ಮಹಾದೇವಿ ಯರ್ಝರಿ, ಸಂಗಮೇಶ ಚಲವಾದಿ, ರಸೂಲಸಾಬ ಕನ್ನೂರ, ಶರಣಗೌಡ ಮೇಟಿ, ಮುದಕಪ್ಪ ಚಲವಾದಿ, ಸುಜಾತ: ಚಲವಾದಿ, ಮಾರುತಿ ಚಲವಾದಿ, ಸವಿತಾ ಚಲವಾದಿ ಸುನಂದಾ ಚಲವಾದಿ, ಕವಿತಾ ಚಲವಾದಿ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು
📲Get App