🔥 ट्रेंडिंग जालंधर में कार पर गोलीबारी, पंजाब जालंधर के गुरु नानक नगर में पार्किंग व... मध्य प्रदेश हाईकोर्ट ने स्कूल बसों में... राजसमंद के सुलूस रोड पर पुरानी रंजिश म... আকাশে নয়, মাঠের মাঝে বসে চিল! মুর্শিদ... लक्ष्मण सूनिल लहरी ने नितेश तिवारी के...
05 नव. 2026•
ગુજરાતી मराठी ਪੰਜਾਬੀ বাংলা

ದೇವರಗುಡ್ಡದ ಹಿರಿಯ ಸಾಹಿತಿ, ಕಲಾವಿದ ಭೀಮರಾಯ ಭಂಡಾರಿಗೆ ರಂಗ ಗೌರವ ಪ್ರಶಸ್ತಿ

✍️ रिपोर्टर: Khaja Hussain 🗓 05 नव. 2026, 09:08 AM 👁 21
शेयर करें: 💬 WhatsApp 📘 Facebook 𝕏 Post
**ದೇವದುರ್ಗ | ಸಾಂಸ್ಕೃತಿಕ ಸುದ್ದಿ**

# ದೇವರಗುಡ್ಡದ ಹಿರಿಯ ಸಾಹಿತಿ, ಕಲಾವಿದ ಭೀಮರಾಯ ಭಂಡಾರಿಗೆ ರಂಗ ಗೌರವ ಪ್ರಶಸ್ತಿ

### ಹುನಗುಂದದಲ್ಲಿ ಸಚಿವ ವಿಜಯಾನಂದ ಎಸ್. ಕಾಶಪ್ಪನವರರಿಂದ ಪ್ರಶಸ್ತಿ ಪ್ರದಾನ; ಹನುಮಂತಪ್ಪ ಮನ್ನಾಪೂರಿ ಹರ್ಷ

**ದೇವದುರ್ಗ, ನ. 5:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೇವರಗುಡ್ಡ ಗ್ರಾಮದ ಹಿರಿಯ ಸಾಹಿತಿ, ಚಿಂತಕ, ಹೋರಾಟಗಾರ ಹಾಗೂ ಕಲಾವಿದ ಭೀಮರಾಯ ಭಂಡಾರಿ ಅವರು 2023-24ನೇ ಸಾಲಿನ ಪ್ರತಿಷ್ಠಿತ ರಂಗ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವೆಂಬರ್ 4ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಎಸ್. ಕಾಶಪ್ಪನವರ ಅವರು ಭೀಮರಾಯ ಭಂಡಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಪ್ರಶಸ್ತಿ ಪ್ರದಾನಕ್ಕೆ ಸಂತಸ ವ್ಯಕ್ತಪಡಿಸಿರುವ ಎಂ.ಆರ್.ಎಚ್.ಎಸ್. ರಾಯಚೂರು ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪೂರಿ ಅವರು, ಭೀಮರಾಯ ಭಂಡಾರಿ ಅವರು ಸಾಹಿತ್ಯ, ಚಿಂತನೆ, ಹೋರಾಟ ಹಾಗೂ ಕಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ವ್ಯಕ್ತಿಯಾಗಿದ್ದಾರೆ. ಅವರ ಸರಳತೆ, ಮುಗ್ಧ ಮನಸ್ಸು ಹಾಗೂ ಬಹುಮುಖ ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ದೇವರಗುಡ್ಡ ಗ್ರಾಮದ ಭೀಮರಾಯ ಭಂಡಾರಿ ಅವರ ಪ್ರತಿಭೆ ಹಾಗೂ ಸೇವೆಯನ್ನು ಗುರುತಿಸಿ ರಂಗ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದ ಬಾಗಲಕೋಟೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿ.ಪಿ. ದುತ್ತರಗಿ ಟ್ರಸ್ಟ್, ಸುಳೇಭಾವಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಹನುಮಂತಪ್ಪ ಮನ್ನಾಪೂರಿ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App