🔥 TRENDING बरहरवा में एक दर्जन ईंट भट्टों की जाँच... સાબરકાંઠા જિલ્લામાં દિવાળી ખરીદી માટે... बीदर में आरटीओ और प्रदूषण नियंत्रण बोर... ગાંધીનગર મેયર તરીકે ઠાકોર યુવાનની પસંદ... बेलगाव जिले में आयोजित होने वाले पहले... નડિયાદમાં જિલ્લા કિસાન મોરચાની હોદેદાર...
05 Nov 2026•
ગુજરાતી मराठी ਪੰਜਾਬੀ বাংলা
Local

ಮಾಚಾಪುರ ಗ್ರಾಮದಲ್ಲಿ ವರ್ಷವಾಸ ಕಾರ್ಯಕ್ರಮದ ಅದ್ಭುತ ಸಂಭ್ರಮ

✍️ Reporter: Basavaraj pujari 🗓 05 Nov 2026, 06:40 PM 👁 17
Share: 💬 WhatsApp 📘 Facebook 𝕏 Post

ಭಾಲ್ಕಿ ತಾಲ್ಲೂಕಿನ ಮಾಚಾಪುರ ಗ್ರಾಮದಲ್ಲಿ ಹಿರಿಯ ದಲಿತ ನಾಯಕರು, ಸಾಮಾಜಿಕ ಹೋರಾಟಗಾರರು ಮತ್ತು ಸ್ಥಳೀಯ ನಾಯಕರು ಸೇರಿ ವರ್ಷವಾಸ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದರು.

ಮಾಚಾಪುರ ಗ್ರಾಮದಲ್ಲಿ ವರ್ಷವಾಸ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ದಲಿತ ನಾಯಕರು ಹಾಗೂ ಸಾಮಾಜಿಕ ಹೋರಾಟಗಾರರಾದ ವೈಜನಾಥ್ ಸೂರ್ಯವಂಶಿ, ಭೀಮರಾಜ್ ಸೇನೆಯ ರಾಜ್ಯಾಧ್ಯಕ್ಷ ಶಿವಕುಮಾರ್ ಕಮಲಾಪುರೆ (ಕಣಜಿ), ಜೈಪಾಲ್ ಬೈರನಹಳ್ಳಿ (ಕಣಜಿ), ಸಾಯಿ ಬಿಲ್ಡರ್ (ಕಣಜಿ), ನಿಟ್ಟೂರು-ಹುಬ್ಬಳ್ಳಿ ಅಧ್ಯಕ್ಷ ರಾಘವೇಂದ್ರ ಫುಲೆ, ನಿಟ್ಟೂರು ಮಹಿಳಾ ಅಧ್ಯಕ್ಷೆ ಕಲಾವತಿ ನಿಟ್ಟೂರು, ಸಂಸ್ಕೃತಿ ಕಾರ್ಯದರ್ಶಿ ಗೋದಾವರಿ, ಬಸವರಾಜ್ ಕಾಳೆ ಸಿದ್ದೇಶ್ವರ, ಹರ್ಷಿತ್ ದಾಂಡೇಕರ್ (ಹಾಲಳ್ಳಿ), ಸುರೇಶ್ ನಿಟ್ಟೂರು, ಪರಮೇಶ್ ನಿಟ್ಟೂರು, ಪ್ರಶಾಂತ್ ನಿಟ್ಟೂರು ಹಾಗೂ ಶ್ರೀಕಾಂತ್ ಮಂಗಲಗಿ (ಕಣಜಿ) ಉಪಸ್ಥಿತರಿದ್ದರು.

ಮಾಚಾಪುರ ಗ್ರಾಮದ ಮುಖಂಡ ಪರ್ಲಾದ್ ದೊಡ್ಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಕ್ಷಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿಯ ಅಧ್ಯಕ್ಷರಾದ ಸರಸ್ವತಿ ಮತ್ತು ಅಂಬಣ್ಣ ಅವರೊಂದಿಗೆ ಶಶಿಕಲಾ, ಪಾರ್ವತಿ, ರೇಷ್ಮಾ, ಕಮಲಾಬಾಯಿ, ವಿದ್ಯಾವತಿ, ಶಿಲ್ಪಾ, ಸುವರ್ಣ ಹಾಗೂ ಮಲ್ಲಮ್ಮ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವ ಶಿಕ್ಷಕಿ ಸುನಿತಾ ಪೂಜಾರಿ ಸೇರಿದಂತೆ ಸುದೀಪ್, ರಥಾಗತ್, ರವಿಚಂದ್ರ, ಪೃಥ್ವಿ, ರಾಮ್‌ಜಿ ಹಾಗೂ ರಾಜೇಶ್ ಅವರ ಸಹಕಾರ ಮತ್ತು ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಅನ್ನದಾಸೋಹದ ವ್ಯವಸ್ಥೆಯನ್ನು ಭೀಮರಾಜ್ ಸೇನೆಯ ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ರಾಜೇಶ್ ಕಾಂಬ್ಳೆ ಅವರು ಮಾಡಿದ್ದರು. ಗ್ರಾಮಸ್ಥರು ಹಾಗೂ ಸಮಾಜದ ಮುಖಂಡರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
📲Get App