🔥 ट्रेंडिंग Jknc dy cm Surinder Choudhary _visit... इंदौर में एक और चिप्स कंपनी की वीडियो... केरेडारी प्रखंड में बीसीओ राजेश कुमार... ಮೂರು ವರ್ಷವಾದರೂ ಅಂಕಪಟ್ಟಿ ಇಲ್ಲ: ರಾಯಚೂರು... જુનાગઢ જિલ્લાના માંગરોળમાં કગરાણા પરિવ... Void/Breaker ने जारी किया आधिकारिक 1.0...
05 नव. 2026•
ગુજરાતી मराठी ਪੰਜਾਬੀ বাংলা

ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿ - ಶ್ರೀ ಎಮ್ ವ್ಹಿ ಗಬ್ಬೂರ

✍️ रिपोर्टर: Mallikarjun Gabbur 🗓 05 नव. 2026, 05:45 PM 👁 17
शेयर करें: 💬 WhatsApp 📘 Facebook 𝕏 Post

ಪ್ರತಿಯೊಬ್ಬ ಮಗುವಿನಲ್ಲೂ ಅದ್ಭುತವಾದ ಸುಪ್ತ ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿ, ಚಿಗುರೊಡೆಯುವಂತೆ ಮಾಡುವುದೇ ‘ಪ್ರತಿಭಾ ಕಾರಂಜಿ’. ಇಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮತ್ತು ನಿಮ್ಮ ಕೌಶಲವನ್ನು ಪ್ರದರ್ಶಿಸುವುದು ಅತ್ಯಂತ ಮುಖ್ಯವೆಂದು 2026- 27ನೇ ಸಾಲಿನ ಬಸವನಬಾಗೇವಾಡಿ ಕ್ಲಸ್ಟರ್ ಮಟ್ಟದ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಮ್ ವಿ ಗಬ್ಬೂರ ಮಾತನಾಡಿದರು.

ಪ್ರತಿಭಾ ಕಾರಂಜಿ ಎಂಬುದು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಒಂದು ಕಾರ್ಯಕ್ರಮ. ಇಲ್ಲಿ ಮೂರು ವಿಭಾಗದಲ್ಲಿ ಮಕ್ಕಳಿಗೆ ಸ್ಪರ್ಧೆಗಳು ನಡೆಯುತ್ತಿದ್ದು ನಿರ್ಣಾಯಕರು ಯಾವ ಮಗುವಿನಲ್ಲಿ ಉತ್ತಮವಾದ ಪ್ರತಿಭೆ ಅಂತ ಮಕ್ಕಳನ್ನು ಗುರುತಿಸಿ ತಾಲೂಕ ಹಂತಕ್ಕೆ ಆಯ್ಕೆ ಮಾಡಬೇಕು. ಒಳ್ಳೆಯ ಪ್ರತಿಭೆಯನ್ನು ಹೊಂದಿರುವ ಮಕ್ಕಳು ಬೆಳಕಿಗೆ ಬರಬೇಕು ಎಲ್ಲ ಮಕ್ಕಳು ದೊರಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕು ಎಂದು ಶಿಕ್ಷಣ ಸಂಯೋಜಕರಾದ ಶ್ರೀಮತಿ ಎ ಎಸ್ ಗುಬ್ಬಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂ ಪಿ ಎಸ್ ಬಸವನಬಾಗೇವಾಡಿ ಶಾಲೆ ಮುಖ್ಯ ಗುರುಗಳಾದ ಶ್ರೀ ಆರ್ ಡಿ ಕಾಳಗಿ, ಬಸವನ ಬಾಗೇಡಿ 1 ಕ್ಲಸ್ಟರ್ ಸಿ ಆರ್ ಪಿ ಶ್ರೀ ಬಿ ಎಸ್ ಚನಗೊಂಡ, ನರಸಲಗಿ ಸಿ ಆರ್ ಪಿ ನರಸಲಗಿ, ಶ್ರೀ ವಿವೇಕಾನಂದ ಹಿರಿಯ ಪ್ರಥಮ ಶಾಲೆ ಮುಖ್ಯಗುರುಗಳಾದ ಶ್ರೀ ಎಸ್ ಐ ಬಿರಾದಾರ, ಹಾಗೂ ಐಡಿಯಲ್ ಪಬ್ಲಿಕ್ ಸ್ಕೂಲಿನ ಅಧ್ಯಕ್ಷರು ಉಪಸ್ಥಿತರಿದ್ದರು.
ಛದ್ಮಾವೇಶ, ನೃತ್ಯಗಳು ನೋಡುಗರ ಕಣ್ಮನವನ್ನು ಸೆಳೆಯಿತು.
📲Get App