🔥 TRENDING MP CM Announces SI Post and ₹1 Crore A... पश्चिम मध्य रेलवे के प्रमुख मुख्य यांत... कानपुर में 20 दिसंबर को होगा दैनिक जाग... અરવલ્લીમાં ગેરકાયદેસર દારૂ અને પ્રોહી... ବାତ୍ୟା ‘ଅର୍ଣ୍ଣବ’ ପରେ ବନ୍ୟା ବିପନ୍ନଙ୍କ ପ... ଡିସେମ୍ବର ୨୪ ପରେ ହେବ OCA ନିର୍ବାଚନ , ସର୍...
02 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರಿನಲ್ಲಿ ರೈಲ್ವೆ ಅಭಿವೃದ್ಧಿಯ ಹೊಸ ಅಧ್ಯಾಯ - ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ಗೆ ಅದ್ದೂರಿ ಸ್ವಾಗತ - ಶಾಸಕಿ ಕರಿಯಮ್ಮ ನಾಯಕ

✍️ Reporter: Ningappa 🗓 02 Nov 2026, 11:50 AM 👁 22
Share: 💬 WhatsApp 📘 Facebook 𝕏 Post

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿಗೆ ರಾಯಚೂರು ನಿಲ್ದಾಣದಲ್ಲಿ ಐತಿಹಾಸಿಕ ಸ್ವಾಗತ - ಪ್ರಧಾನಿ ಮೋದಿ ನಾಯಕತ್ವದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿ ಎಂದು ಶಾಸಕಿ ಕರಿಯಮ್ಮ ನಾಯಕ ಬಣ್ಣನೆ

ರಾಯಚೂರಿನ ರೈಲ್ವೆ ಸಂಪರ್ಕದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ!

ದೇವದುರ್ಗ / ರಾಯಚೂರು: ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶದ ರೈಲ್ವೆ ಕ್ಷೇತ್ರವು ಅಭೂತಪೂರ್ವ ಅಭಿವೃದ್ಧಿ ಸಾಧಿಸುತ್ತಿದೆ ಎಂದು ದೇವದುರ್ಗ ಶಾಸಕಿ ಕರಿಯಮ್ಮ ಜಿ. ನಾಯಕ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, "ಅತ್ಯಾಧುನಿಕ ರೈಲುಗಳ ಸಂಚಾರ, ವೇಗದ ಹಾಗೂ ಸುರಕ್ಷಿತ ಪ್ರಯಾಣ ವ್ಯವಸ್ಥೆ, ರೈಲ್ವೆ ಮೂಲಸೌಕರ್ಯಗಳ ಆಧುನೀಕರಣ ಸೇರಿದಂತೆ ಭಾರತೀಯ ರೈಲ್ವೆ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ" ಎಂದರು.

"ಈ ಅಭಿವೃದ್ಧಿಯ ಪರ್ವದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ನೂತನ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ (Vande Bharat Sleeper Express) ರೈಲು ಸಂಚಾರಕ್ಕೆ ಚಾಲನೆ ದೊರೆತಿದ್ದು, ಇದರ ಅಂಗವಾಗಿ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ ಸ್ವಾಗತ ಸಮಾರಂಭದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿ, ರೈಲನ್ನು ಸ್ವಾಗತಿಸಿದೆ" ಎಂದು ತಿಳಿಸಿದರು.

"ಈ ನೂತನ ರೈಲು ಸೇವೆಯಿಂದ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಜನತೆಗೆ ಬೆಂಗಳೂರು ಮತ್ತು ಮುಂಬೈ ಮಹಾನಗರಗಳ ನಡುವೆ ವೇಗದ, ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣ ಸೌಲಭ್ಯ ದೊರೆಯಲಿದೆ" ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು
📲Get App