🔥 ट्रेंडिंग भुगलपुर में चिराग पासवान की आकर्षक उपस... हरियाणा के गन्ना किसानों ने SAP वृद्धि... मोहन बागन की चेननईन जीत के बाद पंजाब F... सिद्धार्थ उद्यान प्राणिसंग्रहालयात वाघ... प्रीमादा ओराली ने 6वें शुक्रवार को मजब... पंचकुला में हरियाणा CM नयब सिंह सैनी न...
31 अक्टू. 2026•
ગુજરાતી मराठी ਪੰਜਾਬੀ বাংলা

ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಗಿರಾಮನಗುಂಡ ಗ್ರಾಮದಲ್ಲಿ ಜಿ-ಜಿ-ರಾಮ್ ಜಿ ಯೋಜನೆಯ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

✍️ रिपोर्टर: Ningappa 🗓 31 अक्टू. 2026, 09:41 AM 👁 17
शेयर करें: 💬 WhatsApp 📘 Facebook 𝕏 Post
ದೇವದುರ್ಗ: ಗ್ರಾಮೀಣ ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಹಾಗೂ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ದೇವದುರ್ಗ ತಾಲೂಕಿನ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಗಿರಾಮನಗುಂಡ ಗ್ರಾಮದಲ್ಲಿ ಜಿ-ಜಿ-ರಾಮ್ ಜಿ ಯೋಜನೆಯ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ತಾಲೂಕು ಐಇಸಿ ಸಂಯೋಜಕ ಅಮರೇಶ ಅವರು ಯೋಜನೆಯ ಉದ್ದೇಶ, ಸೌಲಭ್ಯಗಳು ಹಾಗೂ ಅನುದಾನದ ಕುರಿತು ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಯೋಜನೆಯ ಕರಪತ್ರಗಳನ್ನು ವಿತರಿಸುವುದರ ಜೊತೆಗೆ, ನಿರಂತರವಾಗಿ ಕೆಲಸ ಪಡೆಯಲು ಇಚ್ಛಿಸುವ ಕೂಲಿ ಕಾರ್ಮಿಕರಿಂದ ನಮೂನೆ-6ರ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಯಿತು.

ಜಿ-ಜಿ-ರಾಮ್ ಜಿ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮೂಲಕ ಕೂಲಿ ಕಾರ್ಮಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗಿದೆ. ಸ್ಥಳೀಯವಾಗಿಯೂ ಉದ್ಯೋಗ ದೊರೆಯುವುದರಿಂದ ಉದ್ಯೋಗ ಅರಸಿ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ಈ ಯೋಜನೆ ನೆರವಾಗಲಿದೆ ಎಂದು ತಿಳಿಸಿದರು.

ಯೋಜನೆಯಡಿ ವಾರ್ಷಿಕ ಮಾನವ ದಿನಗಳ ಪ್ರಮಾಣವನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದ್ದು, ದಿನಗೂಲಿಯನ್ನು ರೂ.370ರಿಂದ ರೂ.382ಕ್ಕೆ ಹೆಚ್ಚಿಸಲಾಗಿದೆ. ಎಂ-ಜಾಬ್ ಕಾರ್ಡ್ ಮೂಲಕ ವಾರ್ಷಿಕವಾಗಿ 47,750 ರೂಪಾಯಿಗಳ ಕೂಲಿ ಪಡೆಯುವ ಅವಕಾಶವಿದ್ದು, ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದು ವಿವರಿಸಿದರು.

ಮಹಿಳೆ, ಮಕ್ಕಳನ್ನು ಕೂಲಿ ಕೆಲಸಕ್ಕೆ ತೊಡಗಿಸುವುದನ್ನು ತಡೆಯುವುದು, ವಯಸ್ಕರಿಗೆ ಸಮಾನ ಕೂಲಿ ನೀಡುವುದು, ಮರಣ ಮತ್ತು ದೂರದ ಮಕ್ಕಳನ್ನು ಕೂಲಿ ಮನೆಯಲ್ಲಿ ದಾಖಲಿಸುವಂತಹ ಸಹಾಯ ನೀಡಲಾಯಿತು. ಅಂಗವಿಕಲರು, ಗರ್ಭಿಣಿಯರು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯೋಜನೆಯಡಿ ಲಭ್ಯವಿರುವ ವಿಶೇಷ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಅಲ್ಲದೆ, ಕಾರ್ಮಿಕರು ಜೀವ ವಿಮೆ ಮಾಡಿಸಿಕೊಳ್ಳುವಂತೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಐಇಸಿ ಸಂಯೋಜಕ ಅಮರೇಶ್, ಬಿಎಫ್‌ಟಿ ರಾಜುಸಾಬ್, ಗ್ರಾಮದ ಹಿರಿಯರಾದ ನಿವಾರ್ಹಕ ವೀರಣ್ಣ ಗೌಡ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಮೇಟಿ ಹಾಗೂ ಗ್ರಾಮದ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
📲Get App