स्थानीय
ತಿಪಟೂರು ತಾಲ್ಲೂಕಿನಲ್ಲಿ ಮಹಿಳಾ ವಿಚಾರಗೋಷ್ಠಿ: ಜ್ಞಾನವಿಕಾಸ ಕಾರ್ಯಕ್ರಮ ಯಶಸ್ವಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಆಯೋಜಿಸಿದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ, ಯೋಗ ಮತ್ತು ಸ್ವ-ಉದ್ಯೋಗ ಮಳಿಗೆಗಳೊಂದಿಗೆ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.
30-10-2026 ರಂದು ಶುಕ್ರವಾರ ಬೆಳಿಗ್ಗೆ 11:30 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಆಯೋಜಿಸಿದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಮತ್ತು ಜ್ಞಾನವಿಕಾಸ ಕಾರ್ಯಕ್ರಮ ಶ್ರೀ ವೀರಶೈವ ಗುರುಕುಲ ಕಲ್ಯಾಣ ಮಂಟಪ, ಕೆ.ಆರ್. ಬಡಾವಣೆ, ತಿಪಟೂರಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮೀಜಿಯವರು ಸಿದ್ಧೇಹಳ್ಳಿ ಮಹಾಸಂಸ್ಥಾನ ಮಠ, ಶ್ರೀ ಗುರುಕುಲಾನಂದಶ್ರಮ, ತಿಪಟೂರಿನ ದಿವ್ಯ ಸಾನಿಧ್ಯ ವಹಿಸಿ ಉದ್ಘಾಟಿಸಿದರು. ನಿವೃತ್ತ ಉಪನಿರ್ದೇಶಕರಾದ ಶಿಕ್ಷಣ ಇಲಾಖೆ, ತಿಪಟೂರು ಶ್ರೀಮತಿ ಮಂಗಲಗೌರಿ ಅಧ್ಯಕ್ಷತೆಯನ್ನು ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಶ್ರೀ ಸುಕೇಶ್ ಸುವರ್ಣ, ನಿರ್ದೇಶಕರು, ಶ್ರೀ ಧ.ಗ್ರಾ.ಯೋ.ಬಿ.ಸಿ. ಟ್ರಸ್ಟ್ (ರಿ.), ತುಮಕೂರು; ಶ್ರೀಮತಿ ದೀಪ ಹೆಬ್ಬಳ್ಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಿಪಟೂರು ಉಪಸ್ಥಿತರಿದ್ದರು.
ಡಾ. ಭಾವನಾ ಪ್ರಸಾದ್, ಮನೋರೋಗ ತಜ್ಞರು, ಶ್ರೀದೇವಿ ಮೆಡಿಕಲ್ ಕಾಲೇಜು, ತುಮಕೂರು ಇವರಿಂದ "ಮಾನಸಿಕ ಆರೋಗ್ಯ ಮತ್ತು ಭಾವನೆಗಳನ್ನು ನಿಯಂತ್ರಿಸುವುದು ಹೇಗೆ" ಎಂಬ ವಿಷಯದ ಉಪನ್ಯಾಸ ನೀಡಲಾಯಿತು. ಶ್ರೀ ಪುನೀತ್ ಕೆ., ಸಹಾಯಕ ಪ್ರೊಫೆಸರ್, ಶ್ರೀ ಸಿದ್ಧಾರ್ಥ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು, "ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಯೋಗ" ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ವ-ಉದ್ಯೋಗ ಮಳಿಗೆಗಳು, ರಂಗೋಲಿ ಸ್ಪರ್ಧೆ, ಆರತಿ ತಟ್ಟೆ ಹಾಗೂ ಪುಷ್ಪಗುಚ್ಛ ತಯಾರಿ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಿ, ಮಹಿಳಾ ಭಾಗವಹಿಸುವವರಲ್ಲಿ ಜ್ಞಾನ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಯಶಸ್ವಿಯಾಗಿತ್ತು.