🔥 TRENDING जिला परिषद निवडणूक साठी स्वाती रोशन लो... ભરૂચ નગરપાલિકાની સભામાં વિપક્ષના દાવાથ... करौली के सीएमएचओ ने तीन प्राथमिक स्वास... बारिश से सासाराम में कंपकंपी बढ़ी पाचोड, पैठण में 14 साल बाद चोरी के आरो... MP Mandis to Stay Open on Holidays to...
30 Oct 2026•
ગુજરાતી मराठी ਪੰਜਾਬੀ বাংলা

ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ಸಮಾಜ ನಮ್ಮೆಲ್ಲರ ಹೊಣೆ- ಶ್ರೀ ಅಮಿತ್ ಘಟ್ಟಿ

✍️ Reporter: Mallikarjun Gabbur 🗓 30 Oct 2026, 05:34 PM 👁 12
Share: 💬 WhatsApp 📘 Facebook 𝕏 Post

ಇಂದು ಮಕ್ಕಳ ಮೇಲಿನ ದೌರ್ಜನಕ್ಕೆ ಮುಖ್ಯವಾಗಿ ಸಂಬಂಧಿಕರು ಹಾಗೂ ನೆರೆಹೊರೆಯವರೇ ಕಾರಣರಾಗುತ್ತಿದ್ದಾರೆ. ಇದರ ಕುರಿತು ಧ್ವನಿ ಎತ್ತಬೇಕು. ಮಕ್ಕಳಿಗೆ ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆ ಎಂಬ ಬಗ್ಗೆ ಅರಿವಾದ ತಕ್ಷಣ ಪಾಲಕರು ಮತ್ತು ಶಿಕ್ಷಕರ ಗಮನಕ್ಕೆ ತರಬೇಕು.ಎದುರಿಸಬೇಕು.ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ಸಮಾಜ ನಮ್ಮೆಲ್ಲರ ಹೊಣೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಬಸವನಬಾಗೇವಾಡಿಯ ಪ್ರಧಾನ ಸಿವ್ಹಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಅಮಿತ್ ಘಟ್ಟಿ ಮಾತನಾಡಿದರು..

ಮಕ್ಕಳು ದೇಶದ ಭವಿಷ್ಯ. ಅವರ ಕೈಗೆ ಪುಸ್ತಕ, ಲೇಖನಿ ನೀಡಿ ಶಿಕ್ಷಣದ ಹಾದಿ ತೋರಬೇಕೇ ಹೊರತು, ಎಳೆಯ ವಯಸ್ಸಿನಲ್ಲೇ ಸಂಸಾರದ ಹೊರೆ ಹೊರಿಸುವುದಾಗಲಿ ಅಥವಾ ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯ ಎಸಗುವುದಾಗಲಿ ಅಕ್ಷಮ್ಯ ಅಪರಾಧ. ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ಸಮಾಜ ನಮ್ಮೆಲ್ಲರ ಹೊಣೆ ಎಂದು ಬಸವನಬಾಗೇವಾಡಿಯ 1 ನೇ ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶರಾದ ಶ್ರೀ ಈರಪ್ಪ ಢವಳೇಶ್ವರ ಮಾತನಾಡಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ವಯ ಹೆಣ್ಣುಮಕ್ಕಳಿಗೆ 18 ವರ್ಷ ಹಾಗೂ ಗಂಡುಮಕ್ಕಳಿಗೆ 21 ವರ್ಷ ತುಂಬುವ ಮುನ್ನ ಮದುವೆ ಮಾಡುವುದು ಕಾನೂನುಬಾಹಿರ. ಇದಕ್ಕೆ ಪ್ರೋತ್ಸಾಹ ನೀಡುವವರಿಗೂ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.ದೌರ್ಜನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ: ಮಕ್ಕಳ ಮೇಲಿನ ದೈಹಿಕ, ಮಾನಸಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ತಡೆಯಲು 'ಪೋಕ್ಸೋ' (POCSO) ಕಾಯ್ದೆ ಸೇರಿದಂತೆ ಬಲಿಷ್ಠ ಕಾನೂನುಗಳು ಜಾರಿಯಲ್ಲಿವೆ.ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕಿದೆ .
.ಶಿಕ್ಷಣದಿಂದ ಮಾತ್ರ ಮಕ್ಕಳ ಸರ್ವಾಂಗೀಣ ವಿಕಾಸ ಹಾಗೂ ಸಬಲೀಕರಣ ಸಾಧ್ಯವೆಂದು ಬಸವನಬಾಗೇವಾಡಿಯ ನ್ಯಾಯವಾದಿಗಳಾದ ಶ್ರೀಮತಿ ಕೆ ಜಿ ಕಂದಗಲ ಉಪನ್ಯಾಸದ ಮೂಲಕ ಮಕ್ಕಳಿಗೆ ತಿಳಿಸಿದರು.
ಸ್ಥಳೀಯ ಶಾಲೆ ಮಕ್ಕಳಿಂದ ಬಾಲ್ಯ ವಿವಾಹ ಬೇಡ ಮಕ್ಕಳ ಮೇಲಿನ ದೌರ್ಜನ ಬೇಡ ಎಂಬ ವಿಷಯದ ಕುರಿತು ರೂಪಕ ಮೂಡಿ ಬಂದಿತು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಸಾಯಕ ಯೋಜನಾಧಿಕಾರಿಗಳಾದ ಶ್ರೀ ಬಿ ಎಸ್ ನಿಲುಗಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ರೇಣುಕಾ ಕಲಬುರ್ಗಿ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಸುನಿಲ್ ನಾಯಕ್ ಹಾಗೂ ಶಾಲೆ ಉಪಪ್ರಚಾರರಾದ ಶ್ರೀ ಎಸ್ ಎಂ ಬಿಷ್ಟಗೊಂಡ ಹಾಗೂ ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.
📲Get App