🔥 TRENDING बिलासपुर में रीलबाजी मामले में दो आरोप... साइक्लोन अर्नाब के कारण ओडिशा के गंजाम... करवा चौथ आज, हनुमानगढ़ में रात 8:21 बज... बेमौसम बारिश ने तोड़ी किसानों की कमर!... ਪੰਜਾਬ 'ਚ ਗਰਜ-ਤੂਫਾਨ ਦੇ ਨਾਲ ਪੈਣਗੇ ਗੜੇ, ਮ... एटा में 101 दिव्यांग बच्चों को सहायक उ...
29 Oct 2026•
ગુજરાતી मराठी ਪੰਜਾਬੀ বাংলা

ಮಹಿಳೆಯರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು: ಡಾ. ಹರ್ಷಿತಾ

✍️ Reporter: Viswanatha D R 🗓 29 Oct 2026, 02:58 PM 👁 23
Share: 💬 WhatsApp 📘 Facebook 𝕏 Post
ದಾವಣಗೆರೆ: ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಸಮಸ್ಯೆಗಳು ಕಂಡುಬಂದಾಗ ತಜ್ಞ ವೈದ್ಯರ ಸಲಹೆ ಪಡೆಯಬೇಕು ಎಂದು ಡಾ. ಹರ್ಷಿತಾ ಗುರುಪ್ರಸಾದ್ ಹೇಳಿದರು.

ನಗರದ ಮಾ.ಸ.ಬ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗ, ವೇದಾ ಮಾತೃ ಮತ್ತು ಮಕ್ಕಳ ಆರೈಕೆ ಕೇಂದ್ರ ಹಾಗೂ ಕೋರೊನಾ ರೆಮಿಡೀಸ್ ಲಿಮಿಟೆಡ್ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆಯರ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹದಿಹರೆಯದ ಹೆಣ್ಣುಮಕ್ಕಳಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳು, ಮುಟ್ಟು ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅರಿವು ಅಗತ್ಯ. ಸಂತಾನೋತ್ಪತ್ತಿ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಹಾಗೂ ಚಟುವಟಿಕೆಯಿಂದ ಕೂಡಿದ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಹಿಳೆಯರಿಗೆ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ದೊರೆಯುವಂತೆ ಮಾಡಿದ ಪದ್ಮಶ್ರೀ ಪುರಸ್ಕೃತ ಅರುಣಾಚಲಂ ಮುರುಗನಾಥನ್ ಅವರ ಕೊಡುಗೆಯನ್ನು ಸ್ಮರಿಸಿದರು. ಆರೋಗ್ಯದ ಕುರಿತು ವೈಜ್ಞಾನಿಕ ಅರಿವು ಹಾಗೂ ನಿಯಮಿತ ಆರೋಗ್ಯ ತಪಾಸಣೆ ಉತ್ತಮ ಜೀವನಶೈಲಿಗೆ ನೆರವಾಗುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ರಂಗಸ್ವಾಮಿ ಟಿ.ಆರ್. ಮಾತನಾಡಿ, ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವಿಗೂ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದ ಸಂಚಾಲಕ ಡಾ. ರಾಘವೇಂದ್ರ ಆರ್. ಸ್ವಾಗತಿಸಿದರು. ಡಾ. ಕಾವ್ಯಶ್ರೀ ವಂದಿಸಿದರು. ನಯನ ನಿರೂಪಿಸಿದರು. ಡಾ. ವಿಜಯಕುಮಾರ್, ಡಾ. ಪ್ರವೀಣ್ ಕುಮಾರ್, ಹರೀಶ್, ಸುಜಾತಾ, ಯಶೋದಾ, ನಾಗರತ್ನ, ಅಭಿಲಾಷ್ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
📲Get App