🔥 TRENDING कल्पवृक्ष आश्रम मार्ग पर जलभराव, श्रद्... नादौती के शिविर में विद्यार्थियों को क... શિક્ષણથી મોટું કોઈ હથિયાર નથી Shilp Samagam Mela 2026 Highlights Ind... Ramayana Advance Ticket Sales Surge Pa... Uttarakhand Launches FASTag Concession...
28 Oct 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ನಾಳೆ ಸಾಮೂಹಿಕ ವಿವಾಹ ಸಂಭ್ರಮ

✍️ Reporter: Khaja Hussain 🗓 28 Oct 2026, 09:00 AM 👁 12
Share: 💬 WhatsApp 📘 Facebook 𝕏 Post
**ಜಾಲಹಳ್ಳಿ | ವಿಶೇಷ ವರದಿ**

# ಜಾಲಹಳ್ಳಿಯಲ್ಲಿ ನಾಳೆ ಸಾಮೂಹಿಕ ವಿವಾಹ ಸಂಭ್ರಮ

### 75ರಿಂದ 80 ಜೋಡಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ; ಸಾಮೂಹಿಕ ವಿವಾಹ ಮೈದಾನದ ಜಾಗ ಸ್ವಚ್ಛಗೊಳಿಸಿದ ಪಂಚಾಯಿತಿ ಸಿಬ್ಬಂದಿ

**ಜಾಲಹಳ್ಳಿ, ಅ. 28:** ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪಟ್ಟಣದ ಆರಾಧ್ಯದೈವ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದಲ್ಲಿ ಅಕ್ಟೋಬರ್ 29ರ ಗುರುವಾರದಂದು ಶ್ರೀ ಲಕ್ಷ್ಮೀ ರಂಗನಾಥ ಗೋವಿಂದ ಸೇವಾ ಸಮಿತಿ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸಾಮೂಹಿಕ ವಿವಾಹದಲ್ಲಿ ಸುಮಾರು 75ರಿಂದ 80 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸಮಿತಿಯ ಗೌರವಾಧ್ಯಕ್ಷ ವೆಂಕೋಬ ಪೂಜಾರಿ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ವಿವಿಧ ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು, ಶಾಸಕರು ಹಾಗೂ ಸಂಸದರು ಆಗಮಿಸುವ ನಿರೀಕ್ಷೆಯಿದೆ. ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನವಜೋಡಿಗಳಿಗೆ ಶುಭ ಹಾರೈಸಬೇಕೆಂದು ಗೋವಿಂದ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಜಾಲಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

### ಸಾಮೂಹಿಕ ವಿವಾಹದ ಸಿದ್ಧತೆಗೆ ಪಂಚಾಯಿತಿ ಸಿಬ್ಬಂದಿಯಿಂದ ಶ್ರಮದಾನ

ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದ ತೇರಿನ ಪಟ್ಟಿ ಪ್ರದೇಶದಲ್ಲಿರುವ ಬಯಲು ಜಾಗವನ್ನು ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಅಷ್ಟಗಿ ಅವರ ನೇತೃತ್ವದಲ್ಲಿ ಪಂಚಾಯಿತಿಯ 32 ಸಿಬ್ಬಂದಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಸುಮಾರು 10 ಎಕರೆ ವಿಸ್ತೀರ್ಣದ ಬಯಲು ಪ್ರದೇಶದಲ್ಲಿ ಮೂರು ಗಂಟೆಗಳ ಕಾಲ ಶ್ರಮದಾನ ನಡೆಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಸಾಮೂಹಿಕ ವಿವಾಹದಂತಹ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮದ ಸಿದ್ಧತೆಗೆ ಪಂಚಾಯಿತಿ ಸಿಬ್ಬಂದಿ ಕೈಜೋಡಿಸಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರೇಶ್ ಅರಕೇರಾ, ಗ್ರಾಮದ ಮುಖಂಡ ಶಂಕರ್ ಗೌಡ ಮಾಲಿ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮಣ್ಣ ನಾಯಕ್ ದಿವಾನ್, ಮೌನೇಶ್ ಅಂದೇಲಿ, ರಂಗಪ್ಪ ಬಂಡಿ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಗ್ರಾಮದ ಪ್ರಮುಖ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮದಾನ ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಅಷ್ಟಗಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಗೋವಿಂದ ಸೇವಾ ಸಮಿತಿಯ ಪದಾಧಿಕಾರಿಗಳು ಪ್ರಶಂಸಿಸಿದ್ದಾರೆ.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App