🔥 ट्रेंडिंग વૈભવ અને અભિષેકે ધબધબાટી LIVE બોલાવી... મહીસાગર જિલ્લામાં સુરક્ષિત ગામ અભિયાન... छत्रपती संभाजीनगर में मोबदला न मिलने प... ખાંભા તાલુકાના ડેડાણ ગામમાં બસ સ્ટેન્ડ... જેલમાં બંધ AAP ધારાસભ્ય ચૈતર વસાવાને 3... ऑरिजिनल सिंग ने लॉन्च किया नया गीत “कर...
27 अक्टू. 2026•
ગુજરાતી मराठी ਪੰਜਾਬੀ বাংলা

ಮಗುವಿನ ನಗು ಕಾಪಾಡುವುದೇ ನಮ್ಮ ಜವಾಬ್ದಾರಿ. ಬಾಲ್ಯವನ್ನು ಉಳಿಸುವುದೇ ನಮ್ಮ ಕರ್ತವ್ಯ.-ಶ್ರೀ ಶಶಿಧರ ಎಂ ಗೌಡ

✍️ रिपोर्टर: Mallikarjun Gabbur 🗓 27 अक्टू. 2026, 01:45 PM 👁 17
शेयर करें: 💬 WhatsApp 📘 Facebook 𝕏 Post

"ನನ್ನ ಬಾಲ್ಯ, ನನ್ನ ಹಕ್ಕು" ಎಂಬುದು ಮಕ್ಕಳ ಸಮಗ್ರ ಬೆಳವಣಿಗೆ, ರಕ್ಷಣೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಸಮಾಜಕ್ಕೆ ನೆನಪಿಸುವ ಮಹತ್ವದ ಘೋಷಣೆಯಾಗಿದೆ. ಮಗುವಿನ ನಗು ಕಾಪಾಡುವುದೇ ನಮ್ಮ ಜವಾಬ್ದಾರಿ. ಬಾಲ್ಯವನ್ನು ಉಳಿಸುವುದೇ ನಮ್ಮ ಕರ್ತವ್ಯ.ಪ್ರತಿಯೊಂದು ಮಗುವಿಗೂ ಸುರಕ್ಷಿತ, ಪ್ರೀತಿಪೂರ್ವಕ ಹಾಗೂ ಆರೋಗ್ಯಕರ ವಾತಾವರಣದಲ್ಲಿ ಬೆಳೆಯುವ ಸಂಪೂರ್ಣ ಹಕ್ಕಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾನ್ಯ ಶ್ರೀ ಶಶಿಧರ ಎಂ ಗೌಡ ರವರು ಮಾತನಾಡಿದರು.

ಮಗುವಿನ ನಗು ಕಾಪಾಡುವುದೇ ನಮ್ಮ ಜವಾಬ್ದಾರಿ. ಬಾಲ್ಯವನ್ನು ಉಳಿಸುವುದೇ ನಮ್ಮ ಕರ್ತವ್ಯ.

"ನನ್ನ ಬಾಲ್ಯ, ನನ್ನ ಹಕ್ಕು" ಎಂಬುದು ಮಕ್ಕಳ ಸಮಗ್ರ ಬೆಳವಣಿಗೆ, ರಕ್ಷಣೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಸಮಾಜಕ್ಕೆ ನೆನಪಿಸುವ ಮಹತ್ವದ ಘೋಷಣೆಯಾಗಿದೆ. ಮಗುವಿನ ನಗು ಕಾಪಾಡುವುದೇ ನಮ್ಮ ಜವಾಬ್ದಾರಿ. ಬಾಲ್ಯವನ್ನು ಉಳಿಸುವುದೇ ನಮ್ಮ ಕರ್ತವ್ಯ.ಪ್ರತಿಯೊಂದು ಮಗುವಿಗೂ ಸುರಕ್ಷಿತ, ಪ್ರೀತಿಪೂರ್ವಕ ಹಾಗೂ ಆರೋಗ್ಯಕರ ವಾತಾವರಣದಲ್ಲಿ ಬೆಳೆಯುವ ಸಂಪೂರ್ಣ ಹಕ್ಕಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾನ್ಯ ಶ್ರೀ ಶಶಿಧರ ಎಂ ಗೌಡ ರವರು ಮಾತನಾಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ, ತಾಲೂಕು ಕಾನೂನು ಸೇವೆಗಳ ಸಮಿತಿ ಬಸವನಬಾಗಲು ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದ ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮದ ನನ್ನ ಬಾಲ್ಯ ನನ್ನ ಹಕ್ಕು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

“ನನ್ನ ಬಾಲ್ಯ ನನ್ನ ಹಕ್ಕು” ಎಂಬುದು ಮಕ್ಕಳ ಹಕ್ಕುಗಳನ್ನು ಒತ್ತಿ ಹೇಳುವ ಒಂದು ಶಕ್ತಿಶಾಲಿ ಘೋಷಣೆ. ಇದರ ಅರ್ಥ: ಪ್ರತಿ ಮಗುವಿಗೂ ಆಟ, ಶಿಕ್ಷಣ, ಪ್ರೀತಿ, ಸುರಕ್ಷತೆ, ಆರೋಗ್ಯ ಮತ್ತು ಶೋಷಣೆಯಿಂದ ಮುಕ್ತವಾದ ಬಾಲ್ಯವನ್ನು ಅನುಭವಿಸುವ ಹಕ್ಕು ಇದೆ.ಬಾಲ್ಯವನ್ನು ಕೆಲಸ, ಭಯ, ಹಿಂಸೆ ಅಥವಾ ಶೋಷಣೆಗೆ ಕಳೆಯುವುದಲ್ಲ—ಅದು ಪ್ರತಿ ಮಗುವಿನ ಹಕ್ಕು ಎಂದು ತಾಲೂಕ ದಂಡಾಧಿಕಾರಿಗಳಾದ ಶ್ರೀ ವಾಯ್ ಎಸ್ ಸೋಮನಕಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಶ್ರೀ ಅಶೋಕ್ ಹಂಚಲಿ
ಪ್ರತಿ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕು ಇದೆ. ಶಾಲೆಗೆ ಹೋಗಿ ಓದುವ ಬದಲು ಕೆಲಸ ಮಾಡುವ ಮಕ್ಕಳು ಇಂದಿಗೂ ನಮ್ಮ ಸಮಾಜದಲ್ಲಿ ಇದ್ದಾರೆ. ಪ್ರತಿ ಮಗುವಿಗೂ ಆಟವಾಡುವ ಹಕ್ಕು ಇದೆ. ಆದರೆ ಕೆಲವರು ಬಾಲ್ಯದಲ್ಲೇ ದೊಡ್ಡ ಜವಾಬ್ದಾರಿಗಳ ಹೊರೆ ಹೊತ್ತಿದ್ದಾರೆ. ಪ್ರತಿ ಮಗುವಿಗೂ ಪ್ರೀತಿ, ಆರಕ್ಷಣೆ ಮತ್ತು ಘನತೆಯಿಂದ ಬದುಕುವ ಹಕ್ಕು ಇದೆ. ಆದರೆ ಶೋಷಣೆ, ಹಿಂಸೆ ಮತ್ತು ಭಯದ ನಡುವೆ ಬೆಳೆಯುವ ಮಕ್ಕಳೂ ಇದ್ದಾರೆ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ನನ್ನ ಹಕ್ಕು ಎಂಬ ವಿಷಯದ ಕುರಿತು ಕಿರು ನಾಟಕವನ್ನು ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ರೇಣುಕಾ ಕಲಬುರ್ಗಿ, ಅಧಿಕಾರಿಗಳಾದ ಶ್ರೀಮತಿ ಶಿಲ್ಪಾ ಎಸ್ ಹಿರೇಮಠ, ತಾಲೂಕ ನ್ಯಾಯಾಧೀಶರ ಸಂಘದ ಉಪಾಧ್ಯಕ್ಷರಾದ ಶ್ರೀ ಪವಾರ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ ಕೆ ಆರ್ ಲಮಾಣಿ, ಕ್ಷೇತ್ರ ಸಮನ್ವಯಧಿಕಾರಿಗಳಾದ ಶ್ರೀ ಸುನೀಲ ನಾಯಕ ಭಾಗವಹಿಸಿದ್ದರು.
📲Get App