🔥 TRENDING अपर कलेक्टर ने विदिशा में जनगणना द्वित... ਸ੍ਰੀ ਗੁਰੂ ਰਾਮਦਾਸ ਨੌਜਵਾਨ ਸੇਵਾ ਸੋਸਾਇਟੀ ਵ... बुरहानपुर में प्रथम ताप्ती रैपिड एवं ब... मुख्य सचिव अशोक वर्णवाल ने ग्वालियर मे... सिंहस्थ-2028 की तैयारियों को गति: मुख्... राष्ट्रीय मानवाधिकार आयोग सदस्य प्रियं...
26 Oct 2026•
ગુજરાતી मराठी ਪੰਜਾਬੀ বাংলা

ಹೊಸೂರು ಸಿದ್ದಾಪುರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

✍️ Reporter: Khaja Hussain 🗓 26 Oct 2026, 09:22 PM 👁 14
Watch on: 📘 Facebook
Share: 💬 WhatsApp 📘 Facebook 𝕏 Post
**ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್**

# ಹೊಸೂರು ಸಿದ್ದಾಪುರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

### ವಾಲ್ಮೀಕಿ ವಿಶ್ವ ಚೇತನದ ಪ್ರತೀಕ; ವೃತ್ತ ನಿರ್ಮಾಣಕ್ಕೆ ₹11 ಸಾವಿರ ವೈಯಕ್ತಿಕ ನೆರವು ಘೋಷಿಸಿದ ಚಂದಪ್ಪ ಬುದ್ದಿನ್ನಿ

**ಜಾಲಹಳ್ಳಿ, ಅ. 26:** ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೊಸೂರು ಸಿದ್ದಾಪುರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಿಡ್ಡಪ್ಪ ಶರಣ ಹಾಗೂ ಅಂಬರೇಶ ತಾತ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಚಂದಪ್ಪ ಬುದ್ದಿನ್ನಿ ಅವರು, ಅಯೋಧ್ಯೆಯಲ್ಲಿ ಶ್ರೀರಾಮನಿಗೆ ದೊರೆಯುವ ಗೌರವದಂತೆ ಮಹರ್ಷಿ ವಾಲ್ಮೀಕಿಯವರಿಗೂ ಗೌರವ ದೊರೆಯಬೇಕು. ಮಹರ್ಷಿ ವಾಲ್ಮೀಕಿ ಅವರು ಇಡೀ ವಿಶ್ವಕ್ಕೆ ಚೇತನ ನೀಡಿದ ಮಹಾನ್ ಋಷಿಯಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ವೃತ್ತ ನಿರ್ಮಾಣವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ ಅವರು, ವಾಲ್ಮೀಕಿ ವೃತ್ತ ನಿರ್ಮಾಣ ಕಾರ್ಯಕ್ಕೆ ತಮ್ಮ ವೈಯಕ್ತಿಕವಾಗಿ ₹11 ಸಾವಿರ ನೆರವು ನೀಡುವುದಾಗಿ ಘೋಷಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುದುರಂಗಪ್ಪ ಜಲ್ಲಿ, ಮೌನೇಶ್ ಜಲ್ಲಿ ಹಾಗೂ ತಿಮ್ಮಣ್ಣ ಬುಂಕಲದೊಡ್ಡಿ ಅವರು, ಮಹರ್ಷಿ ವಾಲ್ಮೀಕಿಯವರ ಜೀವನ, ಆದರ್ಶಗಳು ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಮಹತ್ವವನ್ನು ವಿವರಿಸಿದರು. ವಾಲ್ಮೀಕಿಯವರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದರ ಜೊತೆಗೆ, ಅವರ ಹೆಸರಿನಲ್ಲಿ ಗ್ರಾಮದಲ್ಲಿ ಸ್ಮರಣೀಯ ಕಾರ್ಯಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

**ಕಾರ್ಯಕ್ರಮದಲ್ಲಿ ಭಾಗವಹಿಸಿದವರು:** ವಾಲ್ಮೀಕಿ ಸಮಾಜದ ಅಧ್ಯಕ್ಷ ತಿಮ್ಮಣ್ಣ ಜಲ್ಲಿ, ಚಂದಪ್ಪ ಬುದ್ದಿನ್ನಿ, ಸಂಜೀವಣ್ಣ ದಳಪತಿ, ಮಾನಪ್ಪ ಕಾವಲಿ, ಬಸವರಾಜ ಮಂಡಲಗುಡ್ಡ, ಲಚಮಯ್ಯ ಜಲ್ಲಿ, ಅಯ್ಯಪ್ಪ ಜಲ್ಲಿ, ದುರುಗಯ್ಯ ಯಲಗಟ್ಟಿ, ಶಿವಪ್ಪ ಬೆಲ್ಲದ, ರಂಗಪ್ಪ ಕಾವಲಿ, ತಿಮ್ಮಣ್ಣ ಮುರಾಳ, ದೇವೇಂದ್ರ ದೇವಿಗುಡಿ, ಬಸಯ್ಯ ಜಲ್ಲಿ, ದುರುರಂಗಪ್ಪ ಜಲ್ಲಿ, ಬಸವರಾಜ ದೊಡ್ಡಮನಿ, ಶಿವರಾಜ ಮುರಾಳ, ಮಹೇಂದ್ರ ಕುಮಾರ್, ತಿಮ್ಮಣ್ಣ ಬುಂಕಲದೊಡ್ಡಿ, ಸಿದ್ದಣ್ಣ ಕಾವಲಿ, ರಂಗಪ್ಪ ಜೋಳದಡಗಿ, ಗೋಪಾಲ ಕಾವಲಿ, ಜಯಪ್ಪ ಬೆಲ್ಲದ, ಮೌನೇಶ್ ಜಲ್ಲಿ, ಸಿದ್ದಪ್ಪ ದೊಡ್ಡಮನಿ, ಸಿದ್ದಪ್ಪ ಜಲ್ಲಿ, ಕೃಷ್ಣ ಯಾದವ್, ಮುದುಕಪ್ಪ ಕಾವಲಿ, ವೆಂಕಟೇಶ್ ಕಸನದೊಡ್ಡಿ, ಭೀಮಣ್ಣ, ವೆಂಕಟೇಶ್ ಮುಂಡರಗಿ, ತಿಮ್ಮಣ್ಣ ನಾಯಕ, ಸಿದ್ದರಾಮ, ತಿರುಪತಿ ದೊಡ್ಡಮನಿ, ಮಲ್ಲಣ್ಣ ಸೇರಿದಂತೆ ಗ್ರಾಮಸ್ಥರು ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
📲Get App