🔥 TRENDING अरवल: डीएम अमृषा बैंस की अध्यक्षता में... কোজাগরী লক্ষ্মীপুজোর পরের দিন পাত্রসায়... ਨਸ਼ਿਆਂ ਦੇ 20 ਹੌਟਸਪੌਟਾਂ ’ਤੇ ਸਫ਼ਾਈ ਤੇ ਸੁ... रांची में अधिवक्ता अनुष्का चक्रवर्ती क... अरवल जिला पदाधिकारी अमृषा बैंस एवं एसप... ਪੰਜਾਬ ਦੀ ਸਿਆਸਤ ''ਚ ਹਲਚਲ ਤੇਜ਼! ਅਕਾਲੀ ਦਲ...
26 Oct 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಣೆ

✍️ Reporter: Khaja Hussain 🗓 26 Oct 2026, 07:30 PM 👁 19
Watch on: 📘 Facebook
Share: 💬 WhatsApp 📘 Facebook 𝕏 Post
**ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಣೆ

### ವಾಲ್ಮೀಕಿ ಮಹರ್ಷಿಯ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ರಾಜಾ ವಾಸುದೇವ ನಾಯಕ

**ಜಾಲಹಳ್ಳಿ:26** ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಮಹರ್ಷಿ ವಾಲ್ಮೀಕಿ ವ್ರತ್ತ ದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ರಾಜಾ ವಾಸುದೇವ ನಾಯಕ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣವನ್ನು ರಚಿಸುವ ಮೂಲಕ ಸಮಾಜಕ್ಕೆ ಅಮೂಲ್ಯವಾದ ಜೀವನ ಮೌಲ್ಯಗಳನ್ನು ಸಾರಿದ್ದಾರೆ. ರಾಮಾಯಣವು ಇಡೀ ಮಾನವಕುಲಕ್ಕೆ ದಾರಿದೀಪವಾಗಿದ್ದು, ಅದರಲ್ಲಿನ ಆದರ್ಶಗಳು ಮತ್ತು ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರೇಶ ಅರಕೇರಿ, ಗ್ರಾಮ ಪಂಚಾಯಿತಿ ಸದಸ್ಯರು, ಜಾಲಹಳ್ಳಿ ವಾಲ್ಮೀಕಿ ಸಂಘದ ಅಧ್ಯಕ್ಷ ತಿಮ್ಮಣ್ಣ ನಾಯಕ್ ದಿವಾನ್, ಗೋವಿಂದಪ್ಪ ಆಲ್ಗೇರಿ, ಭೀಮಣ್ಣ ಗುಮೇದಾರ್, ರಂಗನಾಥ ಬಿಸಲ್, ವೆಂಕಣ್ಣ ಯಾರಕಮಟ್ಟಿ, ಭೂತಪ್ಪ ದೇವರಮನಿ, ರಂಗಣ್ಣ ಕೊಲ್ಕಾರ್, ಶರಣಪ್ಪ ಕಾರಲಕುಂಟಿ, ಶಾಂತಕುಮಾರ ಮಕಾಶಿ, ಭೀಮಣ್ಣ ವಿರಗೋಟ, ರಂಗನಾಥ ಮುರಾಳ, ಶಿವನಗೌಡ, ಗೋವಿಂದರಾಜ ನಾಯಕ ತಿಂಪುರ್, ವೆಂಕೋಬ ಪೂಜಾರಿ, ಶಂಕರಗೌಡ, ವೆಂಕೋಬ ತೋಟದ್, ಶಿವಪುತ್ರಪ್ಪ, ರಂಗಪ್ಪ ಬಂಡಿ, ದುರುಗಪ್ಪ ಹಾಗೂ ವೆಂಕೋಬ ಬಿಲ್ ಕಲೆಕ್ಟರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಪತ್ರಕರ್ತರು, ಜಾಲಹಳ್ಳಿ.**
📲Get App