🔥 ट्रेंडिंग अल्ट्राटेक बैकुंठ मे मां दुर्गा के नौ... ગ્રામ્ય પોલીસ સ્ટેશન વિસ્તારમાંથી પકડ્... ખેડબ્રહ્મામાં પોલીસની કાર્યવાહી: ગણતરી... पुलिस अधीक्षक द्वारा अपराध समीक्षा बैठ... સ્વચ્છ ઊર્જા અને આત્મનિર્ભરતા તરફ કૃષિ... पुलिस अधीक्षक शहडोल द्वारा थाना सोहागप...
23 अक्टू. 2026•
ગુજરાતી मराठी ਪੰਜਾਬੀ বাংলা

ನವರಾತ್ರಿ ಉತ್ಸವ ಪಲ್ಲಕ್ಕಿ ಮಹೋತ್ಸವ.

✍️ रिपोर्टर: Manjunatha 🗓 23 अक्टू. 2026, 02:20 PM 👁 17
शेयर करें: 💬 WhatsApp 📘 Facebook 𝕏 Post

ಮುದಗಲ್: ಪಟ್ಟಣದ ಸಾಲಿಮಠದಲ್ಲಿ ಕಳೆದ 9 ದಿನಗಳಿಂದಲೂ ನವರಾತ್ರಿ ಉತ್ಸವ ಜರುಗಿದ್ದು ನವರಾತ್ರಿ ಕೊನೆ ದಿನ ಬುಧವಾರ ದಂದು ಪಲ್ಲಕ್ಕಿ ಹಾಗೂ ಮೂತಿ೯ ಮೆರವಣಿಗೆ ಜರುಗಿತು.

ಮುದಗಲ್ಲ ವರದಿ..

ನವರಾತ್ರಿ ಉತ್ಸವ ಪಲ್ಲಕ್ಕಿ ಮಹೋತ್ಸವ.

ಮುದಗಲ್: ಪಟ್ಟಣದ ಸಾಲಿಮಠದಲ್ಲಿ ಕಳೆದ 9 ದಿನಗಳಿಂದಲೂ ನವರಾತ್ರಿ ಉತ್ಸವ ಜರುಗಿದ್ದು ನವರಾತ್ರಿ ಕೊನೆ ದಿನ ಬುಧವಾರ ದಂದು ಪಲ್ಲಕ್ಕಿ ಹಾಗೂ ಮೂತಿ೯ ಮೆರವಣಿಗೆ ಜರುಗಿತು.

ಸ್ಥಳೀಯ ಸಾಲಿಮಠದಿಂದ ಪಲ್ಲಕ್ಕಿ ಮೆರವಣಿಗೆಯು ಆರಂಭಗೊಂಡು ಪಟ್ಟಣದ ಕುಂಬಾರ ಓಣಿ ಮುಖ್ಯ ಬಜಾರ್ ರಸ್ತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆ ಸಾನ್ನಿಧ್ಯವನ್ನು ಸಾಲಿಮಠದ ಸಿದ್ದಯ್ಯಸ್ವಾಮಿ ಹಾಗೂ ಮಗನಾದ ಅಭಿಷೇಕ ಸಾಲಿಮಠ ವಹಿಸಿದ್ದರು.

ಈರಣ್ಣ ಹಡಪದ ಹಾಗೂ ಸಂಗಪ್ಪ ಕೊಡೆಕಲ್ ಪಲ್ಲಕ್ಕಿ ಮೆರವಣಿಗೆ ನೇತೃತ್ವ ವಹಿಸಿದ್ದರು.

ಮೆರವಣಿಗೆಯಲ್ಲಿ ವಿಶೇಷ ಡೊಳ್ಳು ಕುಣಿತ, ಭಜನಾ ಸೇವೆ ಹಾಗೂ ಕಳಶಗಳೊಂದಿಗೆ ಭಾಗವಹಿಸಿದ್ದ ಮಹಿಳೆಯರಿಂದ ಪಲ್ಲಕ್ಕಿ ಮಹೋತ್ಸವಕ್ಕೆ ಮೆರಗು ನೀಡಿತು.

9 ದಿನಗಳಿಂದಲೂ ಸಾಲಿಮಠದಲ್ಲಿ ನಡೆದ ಶ್ರೀ ದೇವಿ ಪುರಾಣಹ ಮಹೋತ್ಸವವನ್ನು ಪಲ್ಲಕ್ಕಿ ಮೆರವಣಿಗೆ ನಂತರ ಸಂಪನ್ನಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮೆರವಣಿಗೆ ಯಲ್ಲಿ ಶಾಂಭವಿ ಸದ್ಭಕ್ತ ಮಂಡಳಿ ಹಾಗೂ ಮಿತ್ರ ಮಂಡಳಿ ಸದಸ್ಯರಿದ್ದರು ಉಪಸ್ಥಿತರಿದ್ದರು..

ವರದಿ : ಮಂಜುನಾಥ ಕುಂಬಾರ
📲Get App