🔥 TRENDING Gujarat Government Bars Outsiders from... EPFO Board to Discuss Raising Minimum... જામનગર ખોડીયાર કોલોનીમાં સાત રસ્તાઓ પર... New Platform Cover Sheds Inaugurated a... Karnataka MLC Elections Kick Off: Cong... Bengaluru hits magnitude 3 earthquake;...
23 Oct 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಈಶಾನ್ಯ ಶಿಕ್ಷಕರ ವಿಧಾನಪರಿಷತ್ ಚುನಾವಣೆಯ ಮತದಾನ ಸುಗಮ

✍️ Reporter: Khaja Hussain 🗓 23 Oct 2026, 12:24 PM 👁 16
Watch on: 📘 Facebook
Share: 💬 WhatsApp 📘 Facebook 𝕏 Post
**ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿಯಲ್ಲಿ ಈಶಾನ್ಯ ಶಿಕ್ಷಕರ ವಿಧಾನಪರಿಷತ್ ಚುನಾವಣೆಯ ಮತದಾನ ಸುಗಮ

### ಮತಗಟ್ಟೆಯ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ

**ಜಾಲಹಳ್ಳಿ, ಅ. 23:** ಕರ್ನಾಟಕ ಈಶಾನ್ಯ ಶಿಕ್ಷಕರ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತದಾನ ನಡೆಯಿತು. ಬೆಳಗ್ಗೆಯಿಂದಲೇ ಶಿಕ್ಷಕ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದು, ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಿತು.

ಮತದಾನಕ್ಕೆ ಹೊರಗಡೆ ಅನುಕೂಲಕ್ಕಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತಗಟ್ಟೆಯ ಹೊರಗಡೆ ಶಾಮಿಯಾನ ಹಾಕಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.

**ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಉಪಸ್ಥಿತಿ:**

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜ ಪಂಪಾಪತಿ, ಕರ್ನಾಟಕ ರಾಜ್ಯ ಕಾಂಗ್ರೆಸ್ ಸಂಯೋಜಕರಾದ ವೇಣುಗೋಪಾಲ್ ವಕೀಲರು, ತಿಮ್ಮಣ್ಣ ದಿವಾನ್ ರಾಜ್ಯ ಪರಿಶಿಷ್ಟ ಪಂಗಡ ಪ್ರದಾನ್ ಕಾರ್ಯದರ್ಶಿ , ಭೀಮಣ್ಣ ವೀರಗೋಟ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರು, ಅಯ್ಯನಗೌಡ ಗಲಗ, ವೀರೇಶ್ ಹೇಮನೂರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಅರಕೇರ ಮಲ್ಲನಗೌಡ, ಗುಂಡಗುರ್ತಿ ಅಜೀಜ್ ಸಾಬ್ ದೇವದುರ್ಗ , ಬಾಪುಗೌಡ, ಅಯ್ಯಪ್ಪ ಸ್ವಾಮಿ, ಅಮರೇಗೌಡ ಕಮಲದಿನ್ನಿ, ಆಂಜನೇಯ ರಾಂಪಳ್ಳಿ, ಸಾಬಣ್ಣ ಪೂಜಾರಿ, ಭೂತಪ್ಪ ದೇವರಮನೆ, ಚನ್ನಬಸವ ನಾಯಕ, ಮ್ಯಾಕಲದೊಡ್ಡಿ, ರಮೇಶ್ ಬಾಗೂರು ಬಸವರಾಜ್ ಹೊಸೂರು, ಯಲ್ಲಪ್ಪ, ರಂಗನಾಥ ಕುದುರಿ, ಹನುಮಂತ ಬಡಿಗೇರ್, ದುರ್ಗಪ್ಪ ಬಡಿಗೇರ್, ಚಿಂಚೋಡಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಅಗತ್ಯ ಸಹಕಾರ ನೀಡಲಾಯಿತು.

ವರದಿ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ
📲Get App