🔥 TRENDING गाज़ियाबाद में रामलीला मंच पर रावण दहन... Madina Masjid in Hari Nagar Hosts 11th... Aluminium Foil Trick Goes Viral as Far... ISRO Successfully Completes Crew and S... India-New Zealand Free Trade Agreement... Indian Entrepreneur Secures Rs 2.9 Cro...
20 Oct 2026•
ગુજરાતી मराठी ਪੰਜਾਬੀ বাংলা

ಯುವಕರು ದುಶ್ಚಟಗಳಿಗೆ ಬಲಿಯಾಗದೇ, ಭವಿಷ್ಯದ ಬಗ್ಗೆ ಚಿಂತನೆ ಇರಲಿ- ಶಾಸಕರು ಡಾ. ಶ್ರೀನಿವಾಸ್. ಎನ್. ಟಿ.

✍️ Reporter: ಮಂಜುನಾಥ ಹೂಡೇಂ 🗓 20 Oct 2026, 10:10 PM 👁 7
Share: 💬 WhatsApp 📘 Facebook 𝕏 Post

ಸಮಸ್ಯೆ- ಸವಾಲುಗಳನ್ನು ಸಮಾನವಾಗಿ ಸ್ವೀಕರಿಸುವೆ

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾಕನಡಕು ಗ್ರಾಮದ ದಿ. ಪಿ.ಎನ್.ಮಹಾಂತೇಶ್ ರವರ ಸ್ಮರಣಾರ್ಥವಾಗಿ ಪ್ರೀಮಿಯರ್ ಲೀಗ್ ಸೀಜನ್- 7 ಕ್ರಿಕೇಟ್ ಟೂನ್೯ ಮೆಂಟ್ ಹಮ್ಮಿಕೊಳ್ಳಲಾಗಿದೆ.
ಮಾನ್ಯ ಜನಪ್ರಿಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ ಅವರು, ಹಗಲು - ಇರಳು ಕ್ಷೇತ್ರದಲ್ಲಿ ಇದ್ದು, ಪ್ರತಿ ನಿತ್ಯವೂ ಹಲವಾರು ಒಂದಲ್ಲಾ, ಒಂದು ರೀತಿಯ ಸಮಸ್ಯೆ - ಸವಾಲುಗಳನ್ನು ಎದುರಿಸಿ, ಬಗೆಹರಿಸಿ, ಇಂದು ಕ್ರೀಡೆಗೆ ಪ್ರೋತ್ಸಾಹಿಸಲು, ಆಟ ಹಾಡಿ ಚಾಲನೆ ನೀಡಿದರು.

ನಮ್ಮಲ್ಲಿ ಬರಗಾಲ, ಬಡತನದ ಸಮಸ್ಯೆಗಳೂ, ಸವಾಲುಗಳೂ ಸಮನಾಗಿ ಸ್ವೀಕರಿಸಿ, ಕೆಟ್ಟ ಕನಸಿನಲ್ಲಿ ಎಲ್ಲರಿಗೂ ಒಳ್ಳೆಯದನ್ನೇ ಅಷ್ಟೇ ಬಯಸುತ್ತೇನೆ.‌ ನಿಮ್ಮ ಊರಿಗೆ ಒಳ್ಳೆಯದು ಮಾಡುವಂತದ್ದು ನನಗೆ ಇರಲಿ.‌ ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಒಳ್ಳೆಯ ಜೀವನ ರೂಪಿಸಿಕೊಳ್ಳಲು ಚಿಂತನೆ ಮಾಡಬೇಕು. ಸಾವು- ನೋವುಗಳನ್ನೂ, ಸ್ವೀಕರಿಸಿ, ಎಷ್ಟೇ ಜವಾಬ್ದಾರಿ ಇರಲಿ. ಅದನ್ನು ನಾನು ಹೋರುತ್ತೇನೆ ಎಂದರು.

ಮುಂದಿನ ಪೀಳಿಗೆಗೆ ನೀವು ಭವಿಷ್ಯದ ನಾಯಕರಾಗಿ ಬೆಳೆಯಬೇಕು. ನಮ್ಮಲ್ಲಿ ನಿರುದ್ಯೋಗ ಇದೆ. ಅದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಒಳ್ಳೆಯದು ಮಾಡಲಿಕ್ಕೆ ನಿಮ್ಮ ಸಹಕಾರ ಇರಲಿ. ಮುಖ್ಯವಾಗಿ, ಪ್ರೀಮಿಯರ್ ಲೀಗ್ ಸೀಸನ್ - 7 ಕ್ರಿಕೇಟ್ ಟೂನ್೯ ಮೆಂಟ್ ಯಶಸ್ವಿಯಾಗಿ ಗೆದ್ದು ಬರಲಿ. ನಿಮಗೆ ಒಳ್ಳೆಯದು ಆಗಲಿ ಎಂದೂ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ವೇಳೆ, ತಿಪ್ಪೇಸ್ವಾಮಿ, ಬೋರಯ್ಯ , ತಳಾರಿ ಪ್ರಕಾಶ್, ವಿರೇಶ್, ಆನಂದ, ನಕೆಂಚಪ್ಪ, ಓಂಕಾರಿ, ಕ್ರೀಡಾ ಪಟುಗಳು, ಕ್ರೀಡಾಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
📲Get App