🔥 TRENDING रानीगंज के इंस्पेक्टर ने जयदेव नागेश्व... સાંતલપુર નેશનલ હાઇવે નંબર સત્યાવીશ ઉપર... सिगरा पुलिस ने दुष्कर्म एवं ब्लैकमेल क... East Delhi traffic diversions announce... Muslim Leader Shariq Patel to Oversee... Child Killed in Head-On Motorcycle Col...
19 Oct 2026•
ગુજરાતી मराठी ਪੰਜਾਬੀ বাংলা
Local

ಬೀದರ ನಗರದ ಸುದ್ದಿ

✍️ Reporter: Basavaraj pujari 🗓 19 Oct 2026, 09:28 PM 👁 14
Share: 💬 WhatsApp 📘 Facebook 𝕏 Post

ಹಿರಿಯ ಜಾನಪದ ಕಲಾವಿದ ದೇವದಾಸ ಚಿಮಕೋಡ ಅವರಿಗೆ ರಾಜ್ಯಮಟ್ಟದ ಗೌರವ ವಾರ್ಷಿಕ ಪ್ರಶಸ್ತಿ ವಿಜಯಕುಮಾರ ಸೋನಾರೆ ಅಭಿನಂದನೆ ಬೀದರ್: ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿ ಜಾನಪದ ಕಲೆಯನ್ನು ಪಸರಿಸುವ ಮೂಲಕ ಕಳೆದ 35 ವರ್ಷಗಳಿಂದ ನಿರ

ಬೀದರ ನಗರದ ಸುದ್ದಿ
ಹಿರಿಯ ಜಾನಪದ ಕಲಾವಿದ ದೇವದಾಸ ಚಿಮಕೋಡ ಅವರಿಗೆ ರಾಜ್ಯಮಟ್ಟದ ಗೌರವ ವಾರ್ಷಿಕ ಪ್ರಶಸ್ತಿ

ವಿಜಯಕುಮಾರ ಸೋನಾರೆ ಅಭಿನಂದನೆ

ಬೀದರ್: ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿ ಜಾನಪದ ಕಲೆಯನ್ನು ಪಸರಿಸುವ ಮೂಲಕ ಕಳೆದ 35 ವರ್ಷಗಳಿಂದ ನಿರಂತರವಾಗಿ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಜಾನಪದ ಕಲಾವಿದ ದೇವದಾಸ ಚಿಮಕೋಡ ಅವರಿಗೆ ರಾಜ್ಯಮಟ್ಟದ ಗೌರವ ವಾರ್ಷಿಕ ಪ್ರಶಸ್ತಿ ಲಭಿಸಿರುವುದು ಬೀದರ್ ಜಿಲ್ಲೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ತಿಳಿಸಿದ್ದಾರೆ.

ದೇವದಾಸ ಚಿಮಕೋಡ ಅವರು ಬೀದರ್ ಜಿಲ್ಲೆಯ ಅನೇಕ ಗ್ರಾಮಗಳಿಗೆ ತೆರಳಿ ಜಾನಪದ ಪ್ರದರ್ಶನಗಳನ್ನು ನೀಡುವ ಮೂಲಕ ಜನಪದ ಕಲೆಯ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಜಾನಪದ ಗಾಯನ, ವಾದನ, ಸುಗ್ಗಿ ಕುಣಿತ, ಹಲಗೆ ಸೇರಿದಂತೆ ವಿವಿಧ ಜನಪದ ಕಲೆಗಳಲ್ಲಿ ಪರಿಣತಿ ಹೊಂದಿರುವ ಅವರು, ಜನಪದ ಹಾಡುಗಳನ್ನು ಹಾಡುತ್ತ ಗ್ರಾಮೀಣ ಜನರಲ್ಲಿ ಕಲಾಸಕ್ತಿಯನ್ನು ಬೆಳೆಸಿದ್ದಾರೆ. ಸುಮಾರು 35 ವರ್ಷಗಳಿಂದ ಯಾವುದೇ ವಿರಾಮವಿಲ್ಲದೆ ಜಾನಪದ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಅವರ ನಿಷ್ಠಾವಂತ ಸೇವೆ ಸ್ಮರಣೀಯವಾಗಿದೆ.

ಇಂತಹ ಹಿರಿಯ ಕಲಾವಿದರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದು ಅವರ ದೀರ್ಘಕಾಲದ ಕಲಾಸೇವೆಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿಯಿಂದ ಬೀದರ್ ಜಿಲ್ಲೆಯ ಕೀರ್ತಿ ಹೆಚ್ಚಿದ್ದು, ಜಾನಪದ ಕಲಾವಿದರಿಗೆ ಮತ್ತಷ್ಟು ಪ್ರೋತ್ಸಾಹ ದೊರೆತಂತಾಗಿದೆ.

ದೇವದಾಸ ಚಿಮಕೋಡ ಅವರಿಗೆ ರಾಜ್ಯಮಟ್ಟದ ಗೌರವ ವಾರ್ಷಿಕ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಜಯಕುಮಾರ ಸೋನಾರೆ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
📲Get App