🔥 TRENDING BSE Sensex Surges Over 800 Points on F... Central Government to Deploy 1,000 Mod... ਮੰਦਰ 'ਚ ਚੋਰ ਗੋਲਕ ਚੁੱਕ ਕੇ ਫ਼ਰਾਰ, ਘਟਨਾ ਸ... తణుకు సబ్ జైలును సందర్శించిన సీనియర్ స... Gold Prices Hit All-Time High Globally... Kaveri water supply disruption hits Ba...
15 Oct 2026•
ગુજરાતી मराठी ਪੰਜਾਬੀ বাংলা

ಅಂಭಾ ಮಠದ ಪೀಠಾಧಿಪತಿ ನಾಮದೇವಗೌಡ ಶರಣರ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾದವು

✍️ Reporter: Khaja Hussain 🗓 15 Oct 2026, 08:50 PM 👁 10
Share: 💬 WhatsApp 📘 Facebook 𝕏 Post
**ದೇವದುರ್ಗ–| ಬ್ರೇಕಿಂಗ್ ನ್ಯೂಸ್**

# ಅಂಭಾ ಮಠದ ಪೀಠಾಧಿಪತಿ ನಾಮದೇವಗೌಡ ಶರಣರ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾದವು

**ಮಠದ ಜಾಗದ ಕುರಿತು ಆರೋಪ ಸರಿಯಲ್ಲ; ಮಠದ ಅಭಿವೃದ್ಧಿಯನ್ನು ಸಹಿಸದೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ: ದೇವಣ್ಣ ಗೌಡ ನಾಯಕ್ ಮಾಲಿ ಪಾಟೀಲ್**

**ದೇವದುರ್ಗ, ಅ. 15:** ರಾಯಚೂರು ಜಿಲ್ಲೆಯ ಅರಕೇರಾ ತಾಲೂಕಿನ ಮದರಕಲ್ ಗ್ರಾಮದ ಅಂಭಾ ಮಠದ ಪೀಠಾಧಿಪತಿ ಸಂತ ನಾಮದೇವಗೌಡ ಶರಣರ ವಿರುದ್ಧ ಕೆಲವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಮದರಕಲ್ ಗ್ರಾಮದ ದೇವಣ್ಣ ಗೌಡ ನಾಯಕ್ ಮಾಲಿ ಪಾಟೀಲ್ ಹೇಳಿದರು.

ದೇವದುರ್ಗದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಭಾ ಮಠದ ಪೀಠಾಧಿಪತಿ ಸಂತ ನಾಮದೇವಗೌಡ ಶರಣರು ಜಾತಿ-ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ವಿಶಾಲ ಮನೋಭಾವ ಹೊಂದಿದ್ದಾರೆ. ಪ್ರತಿಯೊಂದು ಹುಣ್ಣಿಮೆಯಂದು ಮಠದಲ್ಲಿ ಅನುಭಾವ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ, ಸರ್ವಜನಾಂಗದ ಜನರಿಗೆ ಪ್ರತಿದಿನ ಪ್ರಸಾದದ ವ್ಯವಸ್ಥೆ ಮಾಡುತ್ತಿದ್ದಾರೆ. ಬಡವರು, ದಲಿತರು ಸೇರಿದಂತೆ ವಿವಿಧ ಧರ್ಮಗಳ ಜನರೊಂದಿಗೆ ಸ್ನೇಹಭಾವದಿಂದ ಬೆರೆಯುವ ಮೂಲಕ ಸಮಾಜದಲ್ಲಿ ಸೌಹಾರ್ದತೆ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ಹನುಮಗೌಡ ಮದರಕಲ್, ಸಿದ್ದನಗೌಡ ಮೂಡಲಗುಂಡ ಹಾಗೂ ಇತರರು ಅ. 14ರಂದು ಪತ್ರಿಕೆಗಳಿಗೆ ನೀಡಿದ ಹೇಳಿಕೆಯಲ್ಲಿ ಸ್ವಾಮೀಜಿಗಳ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ ಎಂದು ದೇವಣ್ಣ ಗೌಡ ನಾಯಕ್ ಮಾಲಿ ಪಾಟೀಲ್ ಪ್ರತಿಪಾದಿಸಿದರು.

**ಮಠದ ಜಾಗದ ಕುರಿತು ಸ್ಪಷ್ಟನೆ**

ಅಂಭಾ ಮಠದ ಜಾಗ ಅಕ್ರಮವಾಗಿದೆ ಎಂದು ಆರೋಪಿಸಿರುವುದು ಸರಿಯಲ್ಲ. ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಮುಖಂಡರೇ ತಮ್ಮ ಅವಧಿಯಲ್ಲಿ ಮಠದ ಜಾಗವನ್ನು ಮಠದ ಹೆಸರಿಗೆ ಸೇರಿಸುವ ಸಂಬಂಧ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದರು.

ಪ್ರಸ್ತುತ ಮಠದ ಅಭಿವೃದ್ಧಿಯನ್ನು ಸಹಿಸದೆ ಕೆಲವರು ಸ್ವಾಮೀಜಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ ಅವರು, ಸಂತ ನಾಮದೇವಗೌಡ ಶರಣರು ಸಮಾಜದಲ್ಲಿ ಜಾತ್ಯತೀತ ಮನೋಭಾವ, ಸಮಾನತೆ ಮತ್ತು ಸೌಹಾರ್ದತೆಯನ್ನು ಬೆಳೆಸಲು ಶ್ರಮಿಸುತ್ತಿದ್ದಾರೆ. ಹೀಗಾಗಿ, ಸ್ವಾಮೀಜಿಗಳ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಸತ್ಯಾಂಶಗಳ ಆಧಾರದ ಮೇಲೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

**ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು**

ಪತ್ರಿಕಾಗೋಷ್ಠಿಯಲ್ಲಿ ಸೋಮನಮರಡಿ ಗ್ರಾಮದ ಕರಿಯಪ್ಪ, ಸಾಬಣ್ಣ ಹೂಗಾರ್, ನಾಯಕರ ಒಕ್ಕೂಟದ ದೇವದುರ್ಗ ತಾಲೂಕು ಅಧ್ಯಕ್ಷ ಚನ್ನಬಸವ ನಾಯಕ್ ಮ್ಯಾಕಲ್ದೊಡ್ಡಿ, ಹೊಸೂರು ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್, ಮದರಕಲ್ ಗ್ರಾಮದ ಹನುಮಂತ ಬಡಿಗೇರ, ಹುಸೇನ್ ಸಾಬ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಾನಯ್ಯ, ಧರ್ಮರಾಜ ಮದರಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**

.
📲Get App