Local
ಅಥಣಿ ಡಿವೈಎಸ್ಪಿ ವೀರೇಂದ್ರ ಕುಮಾರ್ ಅವರಿಗೆ ಪತ್ರಕರ್ತರಿಂದ ಸನ್ಮಾನ
ಅಥಣಿ ಉಪ ವಿಭಾಗದ ನೂತನ ಡಿವೈಎಸ್ಪಿ ವೀರೇಂದ್ರ ಕುಮಾರ್ ಅವರನ್ನು ಸ್ಥಳೀಯ ಪತ್ರಕರ್ತರು ಭೇಟಿ ಮಾಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪತ್ರಿಕಾ ರಂಗದ ಹಿರಿಯರು ಉಪಸ್ಥಿತರಿದ್ದರು.
ಅಥಣಿ ಪಟ್ಟಣದ ಡಿವೈಎಸ್ಪಿ ಆಫೀಸನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಮನೋಜಕುಮಾರ ಪಾಟೋಳೆ (ನೀಡ್24ನ್ಯೂಸ್), ಕಿರಣ್ ಪಾಟೋಳೆ (ಡಿಪಾರ್ಟ್ಮೆಂಟ್ ಎಕ್ಸ್ಪ್ರೆಸ್), ವಿಠ್ಠಲ ಖೋಕಾಟೆ (ವಿಶ್ವ ದರ್ಶನ ದಿನಪತ್ರಿಕೆ), ರಾಜು ನಡುವಿನಮನಿ (ನಾಡಿನ ಸಮಾಚಾರ) ಸೇರಿದಂತೆ ಇತರ ಪತ್ರಕರ್ತರು ಡಿವೈಎಸ್ಪಿ ವೀರೇಂದ್ರ ಕುಮಾರ್ರವರನ್ನು ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ವೀರೇಂದ್ರ ಕುಮಾರ್ರವರು ಪತ್ರಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಪಟ್ಟಣದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಾಧ್ಯಮಗಳ ಸಹಕಾರ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ಪತ್ರಕರ್ತರು ಕೂಡ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು