🔥 TRENDING સવની ગામમાં માતાજીના ગરબાની અનોખી ઉજવણ... વાગરા સારણ ગામમાં DGVCLની અચાનક તપાસથી... வங்கியில் போலி நகை வைத்து மோசடி இருவர்... कैलादेवी मंदिर जाने वाले श्रद्धालुओं क... સાબરકાંઠા, હિંમતનગર સિવિલમાં કૂતરાના હ... गौरीचक थाना क्षेत्र फाइनेंस कंपनी से क...
14 Oct 2026•
ગુજરાતી मराठी ਪੰਜਾਬੀ বাংলা
ಕಾಲುವೆ ಕೊನೆ ಭಾಗದ ರೈತರಿಗೆ ನೀರಿನ ಸಂಕಷ್ಟ: ಅಧಿಕಾರಿಗಳಿಗೆ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಖಡಕ್ ಎಚ್ಚರಿಕೆ!

ಕಾಲುವೆ ಕೊನೆ ಭಾಗದ ರೈತರಿಗೆ ನೀರಿನ ಸಂಕಷ್ಟ: ಅಧಿಕಾರಿಗಳಿಗೆ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಖಡಕ್ ಎಚ್ಚರಿಕೆ!

✍️ Reporter: MAHAMAD WALI QURESHI 🗓 14 Oct 2026, 10:42 AM 👁 8
Share: 💬 WhatsApp 📘 Facebook 𝕏 Post
ಕಾಲುವೆ ಕೊನೆ ಭಾಗದ ರೈತರಿಗೆ ನೀರಿನ ಸಂಕಷ್ಟ: ಅಧಿಕಾರಿಗಳಿಗೆ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಖಡಕ್ ಎಚ್ಚರಿಕೆ!
ನೀಡ್ 24 ನ್ಯೂಸ್
ದೇವದುರ್ಗ, ಅ.13- ಅವೈಜ್ಞಾನಿಕ ವಾರಬಂದಿ ಕೈಬಿಟ್ಟು ರೈತರು ಬೆಳೆದಿರುವ ಬೆಳೆಗಳಿಗೆ ನೀಡಿ ಕೊಡಿ. ಅ.15ರಂದು ನಡೆಯುವ ನೀರಾವರಿ ಸಲಹ ಸಮಿತಿ ಸಭೆಯಲ್ಲಿ ತಾಲೂಕಿನ ಸಮಸ್ಯೆ ಕುರಿತು ಧ್ವನಿ ಎತ್ತುತ್ತೇನೆ ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಅವರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನೀರು ನಿರ್ವಹಣೆ ಅಧಿಕಾರಿಗಳು ಹೇಳುತ್ತೀರುವುದೊಂದು ನಾರಾಯಣಪುರ ಬಲದಂಡೆ ಕಾಲುವೆಗಳ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ಹೇಳುತ್ತಿರುವುದೇ ಮೊತ್ತೊಂದು, ನೀರಾವರಿ ಅಧಿಕಾರಿಗಳ ಮಧ್ಯಯೇ ಸಮನ್ವಯ ಕೊರತೆ ಹಿನ್ನೆಲೆ ನೂರಾರು ರೈತರು ಸಂಕಷ್ಟ ಪಡುವಂತಾಗಿದೆ ಎಂದು ದೂರಿದರು. ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆದಂತಹ ರೈತರ ಪರಿಸ್ಥಿತಿ ಅಧಿಕಾರಿಗಳು ತಿಳಿದುಕೊಳ್ಳಬೇಕು. ನೀರಿನ ವಿಚಾರ ಬಂದಾಗ ರೈತರನ್ನು ದಾರಿ ತಪ್ಪಿಸುವ ಅಧಿಕಾರಿಗಳ ವಿರುದ್ಧ ಮುಲ್ಲಾಜಿಲ್ಲದೇ ಸರಕಾರಕ್ಕೆ ಪತ್ರ ಬರೆಯಬೇಕಾಗುತ್ತದೆ. ಕಾಲುವೆಗಳಿಗೆ ನೀರು ಬಿಟ್ಟರು ಥಲೇಂಡ್ ಕೊನೆ ಭಾಗದ ರೈತರಿಗೆ ಸಮಪರ್ಕವಾಗಿ ನೀರು ಬಾರದೇ ಇರುವುದರಿಂದ ಕಳೆದ ಎರಡೂರು ದಿನಗಳಿಂದ ರಾತ್ರೋರಾತ್ರಿ

ಕಾಲುವೆಗಳ ಪರಿಶೀಲನೆ ಮಾಡಲಾಗಿದೆ. ರೈತರ ವಿಚಾರ ಬಂದಾಗ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ತಾಲೂಕಿನ ರೈತರ ಸಮಸ್ಯೆ ಕುರಿತು ಸತತ ಮೇಲಧಿಕಾರಿಗಳ ಗಮನಕ್ಕೆ ತಂದು, ಹೆಚ್ಚುವರಿಯಾಗಿ 200 ಕ್ಯೂಸೆಕ್ ನೀರು ಕಾಲುವೆಗೆ ಬಿಡಲಾಗಿದ್ದು, ಯಾವುದೇ ಕಾರಣಕ್ಕೆ ರೈತರು ಆತಂಕ ಪಡುವಂತಿಲ್ಲ ಎಂಬ ಭರವಸೆ ನೀಡಿದರು. ಅ.15ರಂದು ಆಲಮಟ್ಟಿಯಲ್ಲಿ ನಡೆಯುವ ನೀರಾವರಿ ಸಲಹ ಸಮಿತಿ ಸಭೆಯಲ್ಲಿ ವಾರಬಂದಿ ಪದ್ಧತಿ ಕೈಬಿಟ್ಟು ಬೆಳೆಗಳಿಗೆ ನೀರಿನ ಲಭ್ಯತೆ ನೋಡಿಕೊಂಡು, ನೀರು ಹರಿಸುವಂತೆ ಸಭೆಯಲ್ಲಿ ಒತ್ತಾಯಿಸುತ್ತೇನೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಅಧಿಕಾರಿ ಗಳು ಕಥೆ ಹೇಳುವುದು ಬಿಟ್ಟು ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ಸಮಪರ್ಕವಾಗಿ ನೀರು ಹರಿಸಬೇಕು ಎಂದು ಹೇಳಿದರು.

ಜನವಾರಿ ಅಥವಾ ಪ್ರಭುವರಿಯಲ್ಲಿ ಮೆಣಸಿನಕಾಯಿ ಬೆಳೆ ಕಟಾವಿಗೆ ಬರುವುದರಿಂದ ಬೇಡಿಕೆ ತಕ್ಕಂತೆ ನೀರು ಕೊಡುವ ಕೆಲಸ ಅಧಿಕಾರಿಗಳು ಪ್ರಮಾಣಿಕವಾಗಿ ಮಾಡಬೇಕು ಎಂದರು. ಕಳೆದ ಎರಡೂರು ದಿನಗಳಿಂದ ರೈತರಿಂದ ದೂರುಗಳು ಬಂದಾಗ ಅಂತಹ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಕುರಿತು

ನೀರಾವರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಷ್ಟಲ್ಲಾ ಸತತ ಪ್ರಯತ್ನದಿಂದ ಅಧಿಕಾರಿಗಳು ಹೆಚ್ಚುವರಿಯಾಗಿ 200 ಕ್ಯೂಸೆಕ್ ನೀರು ಕಾಲುವೆಗೆ ಬಿಟ್ಟಿದ್ದಾರೆ. ಕಾಲುವೆಯ ನವೀಕರಣ ಕಾಮಗಾರಿ ಅರೆಬರೆ ಕೈಗೊಂಡ ಪರಿಣಾಮ ಕೊನೆ ಭಾಗದ ರೈತರಿಗೆ ನೀರು ಮುಟ್ಟುತ್ತಿಲ್ಲ. ಇಲ್ಲಿನ ಸಮಸ್ಯೆ ಕುರಿತು ಸಚಿವರ ಗಮನಕ್ಕೆ ತರುತ್ತೇವೆ. ಜಾಡಲದಿನ್ನಿ, ಮಲ್ಲೇದೇವರಗುಡ್ಡ ಸೇರಿದಂತೆ ಇತರೆ ಹಳ್ಳಿಗಳಿಗೆ ಇಲ್ಲಿವರೆಗೆ ನೀರು ಬಾರದೇ ಇರುವುದರಿಂದ ಬಿತ್ತನೆ ಮಾಡಿದ ರೈತರು ಆತಂಕ ಪಡುವಂತಾಗಿದೆ. ನೀರಾವರಿ ಅಧಿಕಾರಿಗಳು ತಪ್ರೊತ್ತರ ನೀಡದೇ ರೈತರಿಗೆ ನೀರಿನ ಲಭ್ಯತೆ ಕುರಿತು ಜಾಗೃತಿ ಮೂಡಿಸಬೇಕು. ಕೋಟ್ಯಾಂತರ ರೂ. ವೆಚ್ಚದಲ್ಲಿ ವಿವಿಧ ಬೆಳೆಗಳು ಬೆಳೆದಿರುವ ರೈತರಿಗೆ ಸಮರ್ಪಕವಾಗಿ ನೀರು ಕೊಡುವ ಕೆಲಸ ನೀರಾವರಿ ಅಧಿಕಾರಿಗಳು ಮಾಡಬೇ ಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷ ಬಸನಗೌಡ ದೇಸಾಯಿ, ಶರಬಣ್ಣ ಸಾಹು ಗೂಬ್ಬರು, ಸಿದ್ದಣ್ಣ ಗಣೇಕಲ್, ಇಸಾಕ್ ಮೇಸ್ತ್ರೀ, ರಂಗಮ್ಮ ಇರಬ ಗೇರಾ, ರಮೇಶ ರಾಮನಾಳ, ಶರಣಗೌಡ ಸುಂಕೇಶ್ವರಹಾಳ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.
📲Get App